ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಹಠಾತ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸೇನಾ ವಾಹನದ ಮೇಲೆ ನಡೆಸಿದ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಪಿಎಎಫ್‌ಎಫ್ ಹೊತ್ತುಕೊಂಡಿದೆ.
ಏನಿದು ಪಿಎಎಫ್‌ಎಫ್?
People’s Anti-Fascist Front ಅನ್ನೋದು PAFFನ ವಿಸೃತ ರೂಪವಾಗಿದೆ. ಈ ಭಯೋತ್ಪಾದಕ ಸಂಘಟನೆ ಈ ಹಿಂದೆಯೂ ಹಲವು ಬಾರಿ ಸೇನೆ ಮೇಲೆ ದಾಳಿಗಳನ್ನು ನಡೆಸಿತ್ತು. ಈ ಸಂಘಟನೆ ಜಮ್ಮು ಮತ್ತು ಕಾಶ್ಮೀರ ರಾಜ್ಯಾದ್ಯಂತ ಸಕ್ರಿಯವಾಗಿದೆ.
ಪಿಎಎಫ್‌ಎಫ್ ಸಂಘಟನೆಯ ಪ್ರಮುಖ ಅಂಶಗಳು ಇಂತಿವೆ:
1. ಪಿಎಎಫ್‌ಎಫ್ ಸಂಘಟನೆಯು ಲಷ್ಕರ್ – ಇ – ತೊಯ್ಬಾ ಭಯೋತ್ಪಾದಕ ಸಂಘಟನೆಯ ಒಂದು ವಿಭಾಗ. ಈ ಸಂಘಟನೆಯು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2019ರಲ್ಲಿ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ರದ್ದತಿ ಬಳಿಕ 2019ರ ಆಗಸ್ಟ್‌ನಲ್ಲಿ ಈ ಸಂಘಟನೆ ತನ್ನ ಚಟುವಟಿಕೆ ಮೂಲಕ ಗಮನ ಸೆಳೆಯಿತು.
2. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಾದ್ಯಂತ ನಡೆದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಪಿಎಎಫ್‌ಎಫ್ ಸಂಘಟನೆಯ ಕೈವಾಡ ಸಾಬೀತಾಗಿದೆ. ಸೈನಿಕರು, ಭದ್ರತಾ ಪಡೆಗಳು ಹಾಗೂ ಜನ ಸಾಮಾನ್ಯರ ವಸತಿ ಪ್ರದೇಶಗಳಲ್ಲೂ ಈ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿದೆ.
3. ಬಾಡಿ ಕ್ಯಾಮ್ ಬಳಸುವ ಹೈಟೆಕ್ ಸಂಘಟನೆ!: ಪಿಎಎಫ್‌ಎಫ್ ಸಂಘಟನೆಯ ಉಗ್ರಗಾಮಿಗಳು ತಾವು ದಾಳಿ ನಡೆಸುವಾಗ ತಮ್ಮ ದೇಹಕ್ಕೆ ಬಾಡಿ ಕ್ಯಾಮ್ ಅಳವಡಿಕೆ ಮಾಡಿಕೊಂಡಿರುತ್ತಾರೆ. ಈ ಬಾಡಿ ಕ್ಯಾಮ್ ಮೂಲಕವೇ ಈ ಉಗ್ರ ಸಂಘಟನೆ ವಿಶಿಷ್ಟವಾಗಿ ಗುರ್ತಿಸಿಕೊಂಡಿದೆ. ಬಾಡಿ ಕ್ಯಾಮ್‌ನಲ್ಲಿ ಉಗ್ರರು ದಾಳಿ ನಡೆಸುವ ದೃಶ್ಯ ಹಾಗೂ ಕೆಲವು ವೇಳೆ ಉಗ್ರರು ಹತ್ಯೆಗೀಡಾಗುವ ದೃಶ್ಯಗಳೂ ಚಿತ್ರೀಕರಣ ಆಗಬಹುದು. ನಂತರ ಈ ದೃಶ್ಯಗಳನ್ನೇ ತಮ್ಮ ಪರ ವಾದ ಮಾಡಲು ತಿರುಚಿ ಬಳಕೆ ಮಾಡಿಕೊಳ್ಳುತ್ತಾರೆ!
4. 2023ರ ಏಪ್ರಿಲ್‌ನಲ್ಲೂ ಪಿಎಎಫ್‌ಎಫ್ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದೃಶ್ಯಗಳನ್ನು ಬಾಡಿ ಕ್ಯಾಮ್‌ನಲ್ಲಿ ಸೆರೆ ಹಿಡಿದಿದ್ದರು. ಇತ್ತೀಚೆಗೆ ಲಷ್ಕರ್ – ಇ – ತೊಯ್ಬಾ ಉಗ್ರ ಸಂಘಟನೆ ಈ ವಿಡಿಯೋವನ್ನ ಬಿಡುಗಡೆ ಮಾಡಿತ್ತು. ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಸೈನಿಕರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯವ ದೃಶ್ಯಗಳು ಇದರಲ್ಲಿ ಇದ್ದವು.
5. ಭಾರತದ ಭಯೋತ್ಪಾದನಾ ನಿಗ್ರಹ ಕಾಯ್ದೆಯ ಅಡಿ ಪಟ್ಟಿ ಮಾಡಲಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ಲಷ್ಕರ್ – ಇ – ತೊಯ್ಬಾ ಜೊತೆಯಲ್ಲೇ ಪಿಎಎಫ್‌ಎಫ್ ಸಂಘಟನೆಯನ್ನೂ ಸೇರಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ 35ರ ಅಡಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಗಿದೆ.
ಚೆನ್ನೈ : ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಿದ್ಧತೆ ಭರದಿಂದ ಸಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ನಟ…
ಹನೂರು : ಪಟ್ಟಣದಿಂದ ಹೂಗ್ಯಂಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ರಾಮಪುರ…
ಬೆಂಗಳೂರು: ಡಾ.ರಾಜ್‌ಕುಮಾರ್ ಸಮಾಧಿ ಬಗ್ಗೆ ಶುರುವಾಗಿದ್ದ ವಿವಾದ ಸಂಬಂಧ ಇದೀಗ ನಟ ಚೇತನ್ ಅಹಿಂಸಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗಷ್ಟೇ…
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ಸಮರ್ಥ್ ಶಾಮನೂರು ತಮ್ಮ ಗೆಲುವಿನ…
ಮೈಸೂರು: ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ಏನೂ ನಡೆಯಲಿಲ್ಲ. ನಾನೇ ಗೆಲುವು ಸಾಧಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ…
ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ! ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ…