ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಿಂದಾಗಿ ಕೆಲಸ ನಿರ್ವಹಿಸುತ್ತಿದ್ದ 41 ಕಾರ್ಮಿಕರು ಸಿಲುಕಿಹಾಕಿಕೊಂಡಿದ್ದರು. ನವೆಂಬರ್ 12ರಂದು ಸುರಂಗ ಕುಸಿತ ಸಂಭವಿಸಿದ್ದು, ಬರೋಬ್ಬರಿ 16 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಕಾರ್ಮಿಕರು ಸಿಲುಕಿದ್ದ ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ತಲುಪಿದ್ದಾರೆ.
ಕಾರ್ಮಿಕರು ಇರುವ ಸನಿಹದವರೆಗೂ ಪೈಪ್ ಅಳವಡಿಕೆ ಕಾರ್ಯ ಸದ್ಯ ಯಶಸ್ವಿಯಾಗಿದ್ದು ಇಂದು ಮಧ್ಯರಾತ್ರಿಯೊಳಗೆ ಎಲ್ಲಾ 41 ಕಾರ್ಮಿಕರನ್ನು ಹೊರ ಕರೆತರಲಾಗಲಿದೆ. ಸಿಲುಕಿರುವ ಕಾರ್ಮಿಕರನ್ನು ಹಗ್ಗಕ್ಕೆ ಸ್ಟ್ರೆಚರ್ ಕಟ್ಟಿ ಅಳವಡಿಸಿರುವ ಪೈಪ್ ಮುಖಾಂತರ ಹೊರತೆಗೆಯುವ ಯೋಜನೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೆಣೆದಿದೆ.
ಇನ್ನು ಈ ಯೋಜನೆ ಮೂಲಕ ಓರ್ವ ಕಾರ್ಮಿಕನನ್ನು ಆಚೆ ತೆಗೆಯಲು ಸುಮಾರು 5 ನಿಮಿಷಗಳ ಸಮಯ ಬೇಕಾಗಿದ್ದು, ಒಬ್ಬೊಬ್ಬರನ್ನಾಗಿ ಎಲ್ಲಾ 41 ಕಾರ್ಮಿಕರನ್ನು ಹೊರತೆಗೆಯಲು 3 ಗಂಟೆ 45 ನಿಮಿಷಗಳು ಬೇಕಾಗಲಿದೆ. ಇನ್ನು ಹೊರತೆಗೆದ ಕಾರ್ಮಿಕರನ್ನು ತಕ್ಷಣವೇ ಆಮ್ಲಜನಕ ಸೌಲಭ್ಯವುಳ್ಳ ಆಂಬುಲೆನ್ಸ್ ಮೂಲಕ 30 ಕಿಲೋಮೀಟರ್ ದೂರದಲ್ಲಿರುವ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಕೇಂದ್ರಕ್ಕೆ ಸಾಗಿಸಲಾಗಲಿದ್ದು ಅಲ್ಲಿ ಎಲ್ಲಾ ಕಾರ್ಮಿಕರಿಗೂ ಆಮ್ಲಜನಕ ಬೆಂಬಲಿತ ಬೆಡ್‌ಗಳುಳ್ಳ ಪ್ರತ್ಯೇಕ ವಾರ್ಡ್‌ಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…