ಬೆಂಗಳೂರು ಮೂಲದ ರಿಯಾನಾ ರಾಜು ಎಂಬ ತೃತೀಯ ಲಿಂಗಿ ಮಹಿಳೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವ ಮೂಲಕ ಅಯ್ಯಪ್ಪನ ದರ್ಶನ ಪಡೆದ ಮೊದಲ ತೃತೀಯಲಿಂಗಿ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಹಲವು ವರ್ಷಗಳ ಹಿಂದೆ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದ ರಿಯಾನಾ ರಾಜು ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ವೆಬ್‌ತಾಣದ ಮೂಲಕ ಪದೇಪದೇ ದೇವರ ದರ್ಶನಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರಾದರೂ ಒಮ್ಮೆಯೂ ಅವರಿಗೆ ಅನುಮತಿ ಸಿಕ್ಕಿರಲಿಲ್ಲ.
ಆದರೆ ಸತತವಾಗಿ ಪ್ರಯತ್ನಪಟ್ಟ ರಿಯಾನಾ ರಾಜು ಕೊನೆಗೂ ಅವಕಾಶ ಪಡೆದು ಯಶಸ್ವಿಯಾಗಿ ದೇವರ ದರ್ಶನ ಮಾಡಿ ಮುಗಿಸಿದ್ದಾರೆ. ಜನವರಿ 5ರಂದು ಶಬರಿಮಲೆ ತಲುಪಿದ ರಿಯಾನಾ ರಾಜು ಜನವರಿ 5ರಂದು ದರ್ಶನ ಪೂರೈಸಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್ನು ತಾನು ದೇವಾಲಯ ತಲುಪಿದಾಗ ಅಲ್ಲಿನ ಭಕ್ತರು ಹಾಗೂ ಅರ್ಚಕನಿಂದ ನಿಂದನೆಗೆ ಒಳಗಾದ ವಿಷಯವನ್ನೂ ಸಹ ಬಿಚ್ಚಿಟ್ಟ ರಿಯಾನಾ ರಾಜು ತಾನು ಪುರುಷನಿಂದ ಮಹಿಳೆಯಾಗಿ ಬದಲಾದ ಕಾರಣ ಮಕ್ಕಳನ್ನು ಹೆರಲು ಸಾಧ್ಯವಿಲ್ಲ, ಹೀಗಾಗಿ ದೇವರ ದರ್ಶನ ಪಡೆಯಬಹುದು ಎಂದು ವಿವರಿಸಿದ್ದಾರೆ.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…