ರಾಷ್ಟ್ರೀಯ

ಸಮುದ್ರ ಸೇತುವೆ ‘ಅಟಲ್ ಸೇತು’ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಮುಂಬೈ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ 17,840 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ ಸೇವಾರಿ – ನವ ಶೇವಾ ‘ಅಟಲ್ ಸೇತು’ ವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಲೋಕಾರ್ಪಣೆಗೊಳಿಸಿದರು.

ಮೋದಿ ಅವರು 2016ರ ಡಿಸೆಂಬರ್ ತಿಂಗಳಿನಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅಟಲ್ ಸೇತು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, 5.5 ಕಿಮೀ ಭೂಮಿಯ ಮೇಲೆ ಮತ್ತು 16.5 ಕಿಮೀ ಸಮುದ್ರದ ಮೇಲೆ ಇದನ್ನು ನಿರ್ಮಿಸಲಾಗಿದೆ.

ಇದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ತಗ್ಗಿಸುತ್ತದೆ. ಜತೆಗೆ ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮಖ್ಯಮಂತ್ರಿ ಏಕನಾಥ್‌ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್‌, ಅಜಿತ್‌ ಪವಾರ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

27ನೇ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಹಾರಾಷ್ಟ್ರದಲ್ಲಿ 30,500 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

andolanait

Recent Posts

ಮ.ಬೆಟ್ಟ | ಅಪರಿಚಿತ ವಾಹನ ಡಿಕ್ಕಿ : ಜಿಂಕೆ ಸಾವು

ಹನೂರು : ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಿಂಕೆಯೊಂದು ರಸ್ತೆಯಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ…

31 mins ago

ಹನೂರು | ಚಿನ್ನ ನಿಕ್ಷೇಪದ ಶಂಕೆ ; ಗುಡ್ಡವನ್ನೇ ಅಗೆದ ಕಿಡಿಗೇಡಿಗಳು

ಹನೂರು : ತಾಲ್ಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಜಿಎಸ್‌ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಚಿನ್ನದಾಸೆಗಾಗಿ…

44 mins ago

ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ಆರಂಭ : ವರ್ಣರಂಜಿತ ಚಾಲನೆ

ಮೈಸೂರು : ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ. ಮೈಸೂರು…

47 mins ago

ಜೋಹಾನ್ಸ್‌ಬರ್ಗ್‌ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು, 10 ಜನರಿಗೆ ಗಾಯ

ಜೋಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ…

52 mins ago

ಎಚ್.ಡಿ.ಕೋಟೆ | ಪಟ್ಟಣಕ್ಕೆ ಬಂದ ಚಿರತೆ : ಮೇಕೆ ಬಲಿ ; ಜನರಲ್ಲಿ ಆತಂಕ

ಎಚ್.ಡಿ.ಕೋಟೆ : ಹುಲಿ ದಾಳಿಯಿಂದ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಇದೀಗ ಚಿರತೆ ದಾಳಿಯು ನಿದ್ದೆಗೆಡಿಸಿದೆ. ಪಟ್ಟಣದ ವಾರ್ಡ್‌ ನಂಬರ್‌ 21ರ…

1 hour ago

ಗಂಗವಾಡಿ ಬಳಿ ಚಿರತೆ ದಾಳಿ : ಮೂರು ಕರು ಸಾವು

ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…

2 hours ago