ಬೆಂಗಳೂರು: ದರ್ಶನ್ ನಟನೆಯ ಕಾಟೇರ ಚಿತ್ರ ದೊಡ್ಡ ಯಶಸ್ಸು ಕಂಡ ಹಿನ್ನಲೆ ಚಿತ್ರ ತಂಡದಿಂದ ಆಯೋಜಿಸಿದ ಪಾರ್ಟಿಯಲ್ಲಿ ಅಬಕಾರಿ ಕಾನೂನು ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿ, ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ನಟರಿಗೆ ಸುಬ್ರಹ್ಮಣ್ಯ ಪೊಲೀಸರು ನೋಟಿಸ್ ನೀಡಿದ್ದರು.
ಈ ಸಂಬಂಧ ಇಂದು (ಶುಕ್ರವಾರ) ಪೊಲೀಸ್ ಠಾಣೆಗೆ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ, ನಿರ್ದೇಶಕ ತರುಣ್ ಸುಧೀರ್, ಡಾಲಿ ಧನಂಜಯ್, ಚಿಕ್ಕಣ್ಣ ಸೇರಿದಂತೆ ಹಲವು ನಟರು ಧಾವಿಸಿದ್ದು, ಒಬ್ಬೊಬ್ಬರನ್ನಾಗಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ಮುಗಿದ ಬಳಿಕ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೊಲದ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜನವರಿ 3ರಂದು ಸೆಲೆಬ್ರಿಟಿ ಶೋ ಆಯೋಜನೆ ಮಾಡಿದ್ದೆವು. ಆ ಸಂದರ್ಭದಲ್ಲಿ ಚಿತ್ರರಂಗದ ಗಣ್ಯ ವ್ಯಕ್ತಿಗಳನ್ನು ನಾವು ಕರೆಸಿದ್ದೆವು. ಸಿನಿಮಾ ನೋಡಿಕೊಂಡು ವಾಪಸ್ ಹೊರಟಾಗ ಲೇಟ್ ಆಗಿತ್ತು. ಊಟ ಮಾಡಿಕೊಂಡು ಹೋಗಿ ಅಂತ ಎಲ್ಲರಿಗೂ ನಾನೇ ಮನವಿ ಮಾಡಿಕೊಂಡೆ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.
ದರ್ಶನ್ ಹೊರಟಿದ್ದರು. ಅಭಿಷೇಕ್, ಸತೀಶ್, ಧನಂಜಯ್ ಅವರೆಲ್ಲ ಇದ್ದಾಗ ಜೆಟ್ ಲ್ಯಾಗ್ ಪಬ್ ಮಾಲೀಕರಿಗೆ ನಾನು ಮನವಿ ಮಾಡಿಕೊಂಡೆ. ನಿಮ್ಮ ಹೋಟೆಲ್ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿಕೊಡಿ ಅಂತ ಕೇಳಿಕೊಂಡೆ. ಪಾರ್ಟಿ ಮಾಡಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ. ದರ್ಶನ್ ಅವರಿಗೆ ಫೋನ್ ಮಾಡಿದೆ. ಅವರು ಕೂಡ ಬಂದರು. ಅಷ್ಟು ಹೊತ್ತಿಗಾಗಲೇ ಜೆಟ್ ಲ್ಯಾಗ್ ಸಿಬ್ಬಂದಿ ಹೊರಟಿದ್ದರು. ಪಾಪ, ಅವರನ್ನು ಮತ್ತೆ ಕರೆಸಿದ್ದರಿಂದ ಅವರು ಊಟ, ತಿಂಡಿ ಕೊಡುವುದು ಲೇಟ್ ಆಯಿತು’ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ವಿವರಣೆ ನೀಡಿದ್ದಾರೆ.
ಲೇಟ್ ಆಗಿದ್ದು ಹೊರತುಪಡಿಸಿದರೆ, ಯಾವುದೇ ಚಿಕ್ಕ ಗಲಾಟೆ, ಗಲಭೆ ಕೂಡ ಆಗಿಲ್ಲ. ಊಟ ಮಾಡಿಕೊಂಡು ನಾವು ಹೊರಟಿದ್ದೇವೆ. ಅಕ್ಕ-ಪಕ್ಕದವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನ್ ಗಮನ ಹರಿಸಿದರು. ಆ ಸಂದರ್ಭದಲ್ಲಿ ಪೊಲೀಸರು ಅಥವಾ ಅಬಕಾರಿ ಅಧಿಕಾರಿಗಳು ನಮ್ಮನ್ನು ಏನೂ ಕೇಳಲಿಲ್ಲ. ಇಷ್ಟೇ ನಡೆದಿದ್ದು. ಅಬಕಾರಿ ಇಲಾಖೆಯ ನಿಯಮಗಳು ಉಲ್ಲಂಘನೆ ಆಗಿದ್ದರೆ ನಾವು ತಲೆ ಬಾಗಲೇಬೇಕು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ನಾವು ಗ್ರಾಹಕರು. ಮೊದಲ ಸಲ ಗ್ರಾಹಕರಿಗೆ ನೋಟಿಸ್ ಕೊಟ್ಟು ಠಾಣೆಗೆ ಕರೆಸಿದ್ದಾರೆ. ಇದು ಎಷ್ಟು ಸರಿಯೋ ನಮಗೆ ಗೊತ್ತಿಲ್ಲ’ ಎಂದು ರಾಕ್‌ಲೈನ್ ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
೨೦೨೩ರ ವರ್ಷಾಂತ್ಯದಲ್ಲಿ ತೆರೆಕಂಡ ನಟ ದರ್ಶನ್ ಅಭಿನಯದ ʼಕಾಟೇರಾʼ ಚಿತ್ರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿನ್ನೆಯಲ್ಲಿ ಚಿತ್ರತಂಡ ಸಕ್ಸ್ ಪಾರ್ಟಿ ಆಯೋಜಿಸಿತ್ತು.
ಈ ಪಾರ್ಟಿಯನ್ನು ಬೆಂಗಳೂರಿನ ಖಾಸಗಿ ಕ್ಲಬ್‌ನಲ್ಲಿ ಆಯೋಜಿಸಲಾಗಿತ್ತು. ಸಕ್ಸಸ್ ಪಾರ್ಟಿಯನ್ನು ಬೆಂಗಳೂರಿನ ಖಾಸಗಿ ಕ್ಲಬ್‌ನಲ್ಲಿ ಆಯೋಜಿಸಿದ್ದು, ಅವಧಿ ಮೀರಿ ಪಾರ್ಟಿ ಮಾಡಿದ ಸಂಬಂಧ ನಿಯಮ ಉಲ್ಲಂಘನೆಗಾಗಿ ನಟ ದರ್ಶನ್ ಸೇರಿದಂತೆ ಇತರೇ ಸೆಲೆಬ್ರೆಟೀಸ್‌ಗೆ ಸುಬ್ರಹ್ಮಣ್ಯನಗರ ಪೊಲೀಸರು ನೋಟಿಸ್ ನೀಡಿದ್ದರು.
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…