ರಾಷ್ಟ್ರೀಯ

ಕರ್ನಾಟಕದ ಶಿಲ್ಪಿ ಗಣೇಶ್‌ ಭಟ್‌ ಕೆತ್ತಿದ್ದ ರಾಮಲಲ್ಲಾ ಮೂರ್ತಿ ಫೋಟೊ ಬಹಿರಂಗ

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಇಟ್ಟು ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಈ ಮೂರ್ತಿಯನ್ನು ತಯಾರಿಸಿದ್ದರು ಎಂಬ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ.

ಇನ್ನು ರಾಮಮಂದಿರಕ್ಕಾಗಿ ರಾಮಲಲ್ಲಾ ಮೂರ್ತಿಗಳನ್ನು ಕೆತ್ತುವ ಕಾರ್ಯವನ್ನು ಮೂವರು ಶಿಲ್ಪಿಗಳಿಗೆ ವಹಿಸಲಾಗಿತ್ತು. ಈ ಪೈಕಿ ಅರುಣ್‌ ಯೋಗಿರಾಜ್‌ ಕೆತ್ತಿದ ಮೂರ್ತಿಯನ್ನು ಪ್ರಾಣಪ್ರತಿಷ್ಠಾಪನೆ ಮಾಡಲು ಆಯ್ಕೆ ಮಾಡಲಾಗಿತ್ತು. ಹಾಗಿದ್ದರೆ ಇನ್ನುಳಿದ ಎರಡು ಮೂರ್ತಿಗಳು ಎಲ್ಲಿ ಎಂಬ ಪ್ರಶ್ನೆ ಹಾಗೂ ಕುತೂಹಲ ಜನರಲ್ಲಿ ಮೂಡಿತ್ತು.

ಈ ಎರಡು ವಿಗ್ರಹಗಳ ಪೈಕಿ ನಿನ್ನೆ ( ಜನವರಿ 23 ) ರಾಜಸ್ಥಾನದ ಜೈಪುರ ನಿವಾಸಿ ಸತ್ಯನಾರಾಯಣ ಪಾಂಡೆ ತಯಾರಿಸಿದ್ದ ರಾಮಲಲ್ಲಾ ಮೂರ್ತಿಯ ಫೋಟೊ ಹೊರಬಿದ್ದಿತ್ತು. ಇದೀಗ ಕರ್ನಾಟಕ ಮೂಲದ ಮತ್ತೋರ್ವ ಶಿಲ್ಪಿ ಗಣೇಶ್‌ ಭಟ್‌ ತಯಾರಿಸಿದ್ದ ರಾಮಲಲ್ಲಾ ಮೂರ್ತಿಯ ಫೋಟೊ ಸಹ ಹೊರಬಿದ್ದಿದೆ. ಈ ವಿಗ್ರಹದಲ್ಲಿ ರಾಮನ ಕಿರೀಟದಲ್ಲಿ ಸೂರ್ಯದೇವ ಹಾಗೂ ಸೂರ್ಯಚಕ್ರವಿದ್ದು, ವಿಗ್ರಹದ ಮೇಲೆ ಸಿಂಹದ ಲಲಾಟವನ್ನು ಕಾಣಬಹುದಾಗಿದೆ.

ಇನ್ನು ಈ ರಾಮಲಲ್ಲಾ ಮೂರ್ತಿ ಏಕಶಿಲಾ ಮೂರ್ತಿಯಾಗಿದ್ದು ಬಿಲ್ಲು ಹಾಗೂ ಬಾಣವನ್ನೂ ಸಹ ಒಳಗೊಂಡಿದೆ. ವಾಲ್ಮೀಕಿ ರಾಮಾಯಣದ ಪ್ರಕಾರ ಮುಖವನ್ನು ಕೆತ್ತಲಾಗಿದ್ದು, ಹೊಟ್ಟೆ ಮೃದುತ್ವವನ್ನು ಹೊಂದಿದೆ ಹಾಗೂ ಕಮಲದಳ ಪೀಠವಿದೆ. ಹೊಯ್ಸಳ ಶೈಲಿಯಲ್ಲಿದ್ದು ವಿಗ್ರಹದ ಪಕ್ಕದಲ್ಲಿ ಬ್ರಹ್ಮ, ಲಕ್ಷ್ಮಿ, ಹನುಮಂತ ಹಾಗೂ ಗರುಡ ದೇವರ ಕೆತ್ತನೆಗಳಿವೆ.

andolana

Recent Posts

ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ

ಮೈಸೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಜನರು ಸಾಂಪ್ರದಾಯಿಕವಾಗಿ…

5 mins ago

ಓದುಗರ ಪತ್ರ: ಮೈಸೂರಿನಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾಣವಾಗಲಿ

ಸಾಂಸ್ಕೃತಿಕ ನಗರಿ ಮೈಸೂರು ಆಹಾರ ಪ್ರಿಯರ ಸ್ವರ್ಗವೂ ಹೌದು. ಮೈಸೂರು ಪಾಕ್‌ನಿಂದ ಹಿಡಿದು ಮೈಲಾರಿ ದೋಸೆಯವರೆಗೆ ಇಲ್ಲಿನ ರುಚಿ ಪ್ರಸಿದ್ಧವಾಗಿದೆ.…

20 mins ago

ಓದುಗರ ಪತ್ರ: ಗೀತೆ ರಚನಾಕಾರರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ

ಪ್ರೇಮ್ ನಿರ್ದೇಶನದ ಕನ್ನಡ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ.. ಎಂಬ ಗೀತೆ ದ್ವಂದ್ವಾರ್ಥದ ಕೀಳು ಅಭಿರುಚಿಯ ಹಾಡು…

22 mins ago

ಓದುಗರ ಪತ್ರ: ಪರೀಕ್ಷೆ ವೇಳೆ ವಿದ್ಯುತ್ ಕಡಿತ ಮಾಡದಿರಿ

ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷಾ ಸಮಯ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಎಸ್ಕಾಂಗಳು ವಿದ್ಯುತ್ ಕಡಿತ ಮಾಡುತ್ತಿರುವುದು ಸರಿಯಲ್ಲ.…

25 mins ago

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇಲ್ಲ

ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಾಕಷ್ಟು ಸಂಗ್ರಹ ವಿದ್ದು, ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ…

29 mins ago

ತುಳುನಾಡಿನ ಯುಗಾದಿ ‘ಬಿಸು’ವಿಗಾಗಿ ಇನ್ನೂ ಇಪ್ಪತ್ತೆಂಟು ದಿನ

ಅಕ್ಷತಾರಾಜ್ ಪೆರ್ಲ, ಕನ್ನಡ, ತುಳು ಉಭಯ ಭಾಷಾ ಲೇಖಕಿ  ಯುಗಾದಿ ಹಬ್ಬದ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇದ್ದು,…

35 mins ago