ರಾಷ್ಟ್ರೀಯ

ನಾನು ದೇಶಪ್ರೇಮಿಯೋ ಇಲ್ಲವೋ ಜನ ತೀರ್ಮಾನ ಮಾಡ್ತಾರೆ: ಸಂಸದ ಪ್ರತಾಪ್‌ ಸಿಂಹ

ಮೈಸೂರು : ಕೆಲ ದಿನಗಳ ಹಿಂದೆ ನೂತನ ಸಂಸತ್‌ ಭವನಕ್ಕೆ ನುಗ್ಗಿದ ಕಿಡಿಗೇಡಿಗಳು ನಡೆಸಿದ ದಾಂದಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸತ್‌ ಪ್ರವೇಶಿಸಿದ್ದ ಪುಂಡರು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಪಾಸ್‌ ಪಡೆದಿದ್ದು ತಿಳಿದುಬಂದಿತ್ತು. ಇದೀಗ ಇದ್ದಕ್ಕೆ ಸ್ವತಃ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಾಪ್‌ ಸಿಂಹ ದೇಶಪ್ರೇಮಿಯೋ ಅಥವ ದೇಶಭಕ್ತನೋ ಎಂಬುದು ಬೆಟ್ಟದ ಮೇಲಿರುವ ತಾಯಿ ಚಾಂಉಂಡೇಶ್ವರಿ, ಬ್ರಹ್ಮಗಿರಿಯಲ್ಲಿ ಕೂತಿರುವ ಕಾವೇರಿ ತಾಯಿ ತೀರ್ಮಾನ ಮಾಡುತ್ತಾರೆ.

ಅದಲ್ಲದೆ ಕಳೆದ 20ವರ್ಷದಿಂದ ನನ್ನ ಬರವಣಿಗೆಗಳನ್ನು ಓದಿಕೊಂಡು ಬಂದಿರುವ ಓದುಗ ಅಭಿಮಾನಿಗಳು ಹಾಗೂ ಕಳೆದ ಒಂಬತ್ತು ವರ್ಷಗಳಿಂದ ದೇಶ ಧರ್ಮ ರಾಷ್ಟ್ರೀಯತೆ ವಿಚಾರ ಬಂದಾಗ ನಾನು ನಡೆದುಕೊಂಡ ರೀತಿ ನೋಡಿರುವ ಕೊಡುಗು ಮೈಸೂರಿನ ಜನ 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ತೀರ್ಪು ನೀಡುತ್ತಾರೆ.

ಅಂತಿಮಾವಗಿ ತೀರ್ಮಾನ ಮಾಡಬೇಗಾಗಿರುವುದು ಜನ. ಹೀಗಾಗಿ ಅವರ ತೀರ್ಮಾನಕ್ಕೆ ನಾನು ಬಿಟ್ಟಿದ್ದೇನೆ ಎಂದು ತಿಳಿಸಿದರು

andolanait

Recent Posts

ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…

48 mins ago

ಆಯ್ತಪ್ಪ ನಾಳೆ ʻಗ್ಯಾರಂಟಿʼ ನಿಲ್ಲಿಸಿತ್ತೀವಿ ಬಿಡಿ : ಪರಮೇಶ್ವರ್‌ ಹೀಗೆ ಹೇಳಿದ್ಯಾಕೆ?

ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…

56 mins ago

ಇಂದಿರಾಗಾಂಧಿ ತ್ಯಾಗದ ಮುಂದೆ ನಮ್ಮದೇನು ಇಲ್ಲ : ಖರ್ಗೆ ಭಾವುಕ ನುಡಿ

ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್‌ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್‌ ಮಾಡಿ ಬಹಳ…

59 mins ago

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ; ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ!

ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…

1 hour ago

ಶಿವಾಜಿ ಮುಸ್ಲಿಂರ ವಿರೋಧಿಯಾಗಿರಲಿಲ್ಲ :ಸಚಿವ ಕಾರ್ಮಿಕ ಸಂತೋಷ ಲಾಡ್‌

ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ‌ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…

2 hours ago

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು : ಸಂಸದ ಯದುವೀರ್‌

ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…

3 hours ago