ರಾಷ್ಟ್ರೀಯ

ಲೋಕಸಭೆ ಭದ್ರತಾಲೋಪ: 5ನೇ ಆರೋಪಿ ಬಂಧನ

ನವದೆಹಲಿ: ನೂತನ ಸಂಸತ್‌ ಭವನದ ಮೇಲೆ ಬುಧವಾರ ಭದ್ರತಾ ಲೋಪದಿಂದಾಗಿ ಇಬ್ಬರು ಆರೋಪಿಗಳು ಗ್ಯಾಲರಿ ಒಳಗೆ ಪ್ರವೇಶ ಮಾಡಿ ಕಲರ್‌ ಗ್ಯಾಸ್‌ ಸೀಮಪಡನೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯನ್ನು ಬಂಧಿಸಿಲಾಗಿದೆ.

ಎಲ್ಲಾ ಆರು ಆರೋಪಿಗಳು ಹಲವು ವರ್ಷದಿಂದ ಪರಸ್ಪರ ಪರಿಚಿತರಾಗಿದ್ದರು. ಅಲ್ಲದೇ ಕೆಲವು ತಿಂಗಳ ಹಿಂದೆಯೇ ಸಂಸತ್‌ ಮೇಲೆ ದಾಳಿ ಕುರಿತು ಯೋಜನೆ ರೂಪಿಸಿದ್ದರು ಎಂದು ತನಿಖಾ ವರದಿ ಮೂಲಕ ತಿಳಿದು ಬಂದಿದೆ.

ಅಲ್ಲದೇ ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪರ್ಕ ಹೊಂದಿದ್ದರು ಹಾಗೂ ಸಂಸತ್‌ ಭವನದಲ್ಲಿ ವಿಹಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

6ನೇ ಆರೋಪಿಗೆ ಹುಡುಕಾಟ:
ಸಂಸತ್‌ ಮೇಲೆ ದಾಳಿನಡೆಸುವ ಯೋಜನೆಯನ್ನು 6ನೇ ಆರೋಪಿಯಾದ ವಿಶಾಲ್‌ ಶರ್ಮ ಎಂಬಾತನ ಮನೆಯಲ್ಲಿ ಯೋಜನೆ ರೂಪಿಸಲಾಗಿತ್ತು. ಎಲ್ಲಾ ೫ ಆರೋಪಿಗಳಿಗೆ ವಿಶಾಲ್‌ ತನ್ನ ಮನೆಯಲ್ಲೆ ಆಶ್ರಯ ನೀಡಿದ್ದಾ ಎಂದು ತಿಳಿದುಬಂದಿದೆ. ಆದರೇ ಇದೀಗ ೫ ಆರೋಪಿಗಳನ್ನು ಬಂಧಿಸಿದು, 6ನೇ ಆರೋಪಿ ವಿಶಾಲ್‌ ನಾಪತ್ತೆಯಾಗಿದ್ದು ಆತನನ್ನು ಪತ್ತೆ ಮಾಡಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬೇಸತ್ತು ಈ ಕೃತ್ಯಕ್ಕೆ ಮುಂದಾದೆವು:
ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಯಾವುದಕ್ಕೂ ಸೂಕ್ತ ಹಾಗೂ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಉದಾಹರಣೆಗೆ ರೈತರ ಪ್ರತಿಭಟಣೆ ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಂದ ನಾವೆಲ್ಲಾ ಬೇಸತ್ತಿದ್ದೇವೆ. ಇದರಿಂದಾಗಿ ನಾವು ಈ ಕೃತ್ಯವೆಸಗಲು ಮುಂದಾಗಿದ್ದೆವು ಎಂದು ವಿಚಾರಣೆ ಸಂದರ್ಭದಲ್ಲಿ ಆರೋಪಿ ಅಮೂಲ್‌ ವಿಚಾರಣಾಧಿಕಾರಿಗೆ ತಿಳಿಸಿದ್ದಾನೆ.

andolanait

Recent Posts

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ‘ಅರಸು, ಸಿದ್ದರಾಮಯ್ಯ ಎದುರಿಸಿದ ಸವಾಲುಗಳು ವಿಭಿನ್ನ’

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ…

3 hours ago

ಕೇರಳ ಸರ್ಕಾರ ಭಾಷಾ ಸೌಹಾರ್ದತೆ ಕಾಪಾಡಲಿ

ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ…

3 hours ago

ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆಯಲು ಹಿಂದೇಟು

ದೂರ ನಂಜುಂಡಸ್ವಾಮಿ ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ  ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ…

3 hours ago

ಬಿಎಂಸಿಸಿ ರಚನೆ: ಅಭಿವೃದ್ಧಿಗೆ ಹಸಿರು ನಿಶಾನೆ

ಕೆ.ಬಿ.ರಮೇಶನಾಯಕ ಮೈಸೂರು: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ನಡೆಸಿದ ದೀರ್ಘಾವಧಿ ಆಡಳಿತವನ್ನು ಹಿಂದಿಕ್ಕಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು…

3 hours ago

137 ವರ್ಷ ದಾಟಿ ಮುನ್ನಡೆದ ಸರ್ಕಾರಿ ಶಾಲೆ!

ಹೇಮಂತ್ ಕುಮಾರ್ ಮಂಡ್ಯ: ಈ ಸರ್ಕಾರಿ ಶಾಲೆಗೆ ೧೩೭ ವರ್ಷ... ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ೪೧... ಒಂದು ಕಾಲದಲ್ಲಿ ೫೦೦ಕ್ಕೂ…

3 hours ago

ಚಿಕ್ಕಣ್ಣ, ಜಯಪ್ರಕಾಶ್ ಬಿಜೆಪಿಗೆ?

ಮಂಜು ಕೋಟೆ ಕೋಟೆ ರಾಜಕೀಯದಲ್ಲಿ ಹೊಸ ಬದಲಾವಣೆ; ಜಾ.ದಳಕ್ಕೆ ಶಾಕ್ ನೀಡಿದ ಮುಖಂಡರು ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು…

3 hours ago