ರಾಷ್ಟ್ರೀಯ

ಮಹಾದೇವ್ ಬೆಟ್ಟಿಂಗ್ ಆಪ್‌ ಕುರಿತಂತೆ ಯಾವುದೇ ಚರ್ಚೆಗೆ ನಾನು ಸಿದ್ದ: ಸಿಎಂ ಭೂಪೇಶ್ ಬಘೇಲ್

ನವದೆಹಲಿ : ಮಹಾದೇವ್ ಬೆಟ್ಟಿಂಗ್ ಆಪ್‌ ಕುರಿತಂತೆ ಯಾವುದೇ ಚರ್ಚೆಗೆ ನಾನು ಸಿದ್ದ ಎಂದು ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಬಿಜೆಪಿ ಪಂಥಾಹ್ವಾನ ನೀಡಿದ್ದಾರೆ.

ಛತ್ತೀಸ್‍ಗಢ ವಿಧಾನಸಭೆಗೆ ಮೊದಲ ಹಂತದ ಮತದಾನ ಆರಂಭವಾಗುತ್ತಿದ್ದಂತೆ ಮಹಾದೇವ್ ಆಪ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಬಘೇಲ್, ತಮ್ಮ ಸರ್ಕಾರದ ಸಾಧನೆಗಳ ಕುರಿತು ಚರ್ಚೆಗೆ ಆಹ್ವಾನ, ದಿನಾಂಕ, ಸಮಯ ಮತ್ತು ಸ್ಥಳವನ್ನು ಹೆಸರಿಸಲು ಕೇಂದ್ರ ಗೃಹ ಸಚಿವರನ್ನು ಕೇಳಿಕೊಂಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರೇ, ನಾನು ನಿಮ್ಮ ಸವಾಲನ್ನು ಸ್ವೀಕರಿಸಿದ್ದೇನೆ, ಅದೇ ಪಾಂಡರಿಯಾ ಅಸೆಂಬ್ಲಿಗೆ (ಆಸನ) ನೀವು ನನಗೆ (ನನ್ನ ಸರ್ಕಾರ ಮಾಡಿದ ಕೆಲಸದ ಬಗ್ಗೆ) ಚರ್ಚೆಗೆ ಹೋಗುತ್ತೇನೆ. ನೀವು ಇನ್ನೂ ವೇದಿಕೆ, ದಿನಾಂಕ ಮತ್ತು ಸಮಯವನ್ನು ಹೇಳಿಲ್ಲ. ಆದರೆ ಸಾರ್ವಜನಿಕರು ವೇದಿಕೆಯನ್ನು ಸಿದ್ಧಪಡಿಸಿದ್ದಾರೆ ಎಂದು ಬಘೆಲ್ ಹೇಳಿದರು.

ಎರಡು ಆಸನಗಳ ಕಪ್ಪು ಸೋಫಾದ ಛಾಯಾಚಿತ್ರ – ಇಬ್ಬರು ನಾಯಕರ ಹೆಸರನ್ನು ಹೊಂದಿರುವ ಫಲಕಗಳಿರುವ ಚಿತ್ರ ಹಾಕಿ ದಯವಿಟ್ಟು ದಿನಾಂಕ ಮತ್ತು ಸಮಯವನ್ನು ನನಗೆ ತಿಳಿಸಿ… ಎಂದು ಅವರು ಎಕ್ಸ್ ಮಾಡಿದ್ದಾರೆ. ಆದರೆ, ಬಘೇಲ್ ಅವರ ಈ ಸವಾಲಿಗೆ ಅಮಿತ್ ಶಾ ಇನ್ನು ಪ್ರತಿಕ್ರಿಯೆ ನೀಡಿಲ್ಲ.

andolanait

Recent Posts

2026ರ ಮೈಸೂರು ದಸರಾಗೆ ಡಿಜಿಟಲ್ ಸ್ಪರ್ಶ!

ಕೆ.ಎಸ್.ಚಂದ್ರಶೇಖರ್‌ಮೂರ್ತಿ ಅರಮನೆಯಿಂದ ಪಂಜಿನ ಕವಾಯತುವರೆಗೂ ಅಂಗೈಯ ವೀಕ್ಷಣೆಗೆ ಅವಕಾಶ  ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ೨೦೨೬ರ ವರ್ಷದಲ್ಲಿ ಹತ್ತು ಹಲವು…

3 mins ago

ಮಡಿಕೇರಿ ದಸರಾ ಶೋಭಾಯಾತ್ರೆ ದಿನಾಂಕ ಗೊಂದಲ

ನವೀನ್ ಡಿಸೋಜ ಅ.೨೦, ೨೧ರ ಕುರಿತು ಭಿನ್ನ ನಿರ್ಧಾರ; ದೇವಪ್ರಶ್ನೆ ಮೂಲಕ ಪರಿಹಾರಕ್ಕೆ ಕರಗ ಸೇವೆದಾರರ ಮನವಿ ಮಡಿಕೇರಿ: ಐತಿಹಾಸಿಕ…

9 mins ago

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

11 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

17 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

20 hours ago