ರಾಷ್ಟ್ರೀಯ

ಅಯೋಧ್ಯೆ ರಾಮಮಂದಿರದ ಲೋಗೊ ತಯಾರಿಸಿದ್ದು ಕನ್ನಡಿಗನೇ

ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಮಮಂದಿರಕ್ಕೆ ಬಾಲರಾಮನ ಮೂರ್ತಿ ತಲುಪಿದ್ದು, ಜನವರಿ 22ರಂದು ಈ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವಿಧ ಕ್ಷೇತ್ರಗಳ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈ ಆಮಂತ್ರಣ ಪತ್ರಿಕೆಯ ಮೇಲೆ ರಾಮಮಂದಿರದ ಲೋಗೊವನ್ನೂ ಸಹ ಮುದ್ರಿಸಲಾಗಿದೆ. ಸೂರ್ಯನ ಮಧ್ಯ ರಾಮನ ಭಾವಚಿತ್ರವಿದ್ದು, ಕೆಳಗೆ ಎರಡು ಬದಿಗಳಲ್ಲಿ ಹನುಮಂತ ನಮಸ್ಕರಿಸುತ್ತಾ ಕುಳಿತಿರುವ ಚಿತ್ರವಿದೆ. ಈ ಲೋಗೊವನ್ನು ಕಲಬುರಗಿಯ ಕಲಾವಿದ ರಮೇಶ್‌ ತಿಪ್ಪನೂರ್‌ ಎಂಬುವವರು ಡಿಸೈನ್‌ ಮಾಡಿದ್ದಾರೆ.

ಶ್ರೀ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಲೋಗೊವನ್ನು ತಯಾರಿಸಲು ಕರೆ ನೀಡಿತ್ತು. ದೇಶದ ವಿವಿಧ ಕಲಾವಿದರು ಲೋಗೊ ತಯಾರಿಸಿ ಕಳುಹಿಸಿದ್ದರು. ಹೀಗೆ ದೇಶದ ವಿವಿಧ ಕಲಾವಿದರು ಕಳುಹಿಸಿದ ಲೋಗೊಗಳನ್ನೆಲ್ಲಾ ಪರಿಶೀಲಿಸಿದ ಟ್ರಸ್ಟ್‌ ಕೊನೆಗೆ ರಮೇಶ್‌ ತಿಪ್ಪನೂರು ಕಳುಹಿಸಿದ ಲೋಗೊವನ್ನು ಅಂತಿಮಗೊಳಿಸಿದೆ. ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ತಯಾರಿಸಿದ್ದು ಕನ್ನಡಿಗ ಎಂಬ ವಿಷಯ ತಿಳಿದು ಹೆಮ್ಮೆ ಪಟ್ಟಿದ್ದ ಕನ್ನಡಿಗರು ಇದೀಗ ಲೋಗೊವನ್ನೂ ಸಹ ಕನ್ನಡಿಗನೇ ತಯಾರಿಸಿದ್ದು ಎಂಬ ವಿಷಯಕ್ಕೆ ಮತ್ತಷ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 

andolana

Recent Posts

ಬೆಂಗಳೂರು | 4 ವರ್ಷದ ಬಾಲಕಿ ಬರ್ಬರ ಹತ್ಯೆ ; ಅತ್ಯಾಚಾರ ಶಂಕೆ

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ನಾಲ್ಕೂವರೆ ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಈ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ.…

19 mins ago

ಇರಾನ್‌ ಮೇಲೆ ರಣಭೀಕರ ದಾಳಿಗೆ ಅಮೆರಿಕ ಪ್ಲ್ಯಾನ್‌

ವಾಷಿಂಗ್ಟನ್‌ : ಅಮೆರಿಕ ತನ್ನ ಮೇಲೆ ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ…

36 mins ago

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ…

2 hours ago

ಕಾಡಾನೆ ದಾಳಿ ; ಜಮೀನಿನ ಶೀಟಿನ ಮನೆ, ಟೊಮೆಟೊ ಬೆಳೆ ನಾಶ

ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಮಂಜುನಾಥ ಎಂಬವರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆ ನುಗ್ಗಿ ಕಟಾವು ಮಾಡಿ ಜಮೀನಿನ…

3 hours ago

ಏಪ್ರಿಲ್.‌11ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಜನತಾ ಸಮಾವೇಶ

ಬೆಂಗಳೂರು: ಹಾಸನ ಹಾಗೂ ವಿಜಯಪುರದಲ್ಲಿ ನಡೆಸಿದ ಮಾದರಿಯಲ್ಲೇ ಬೆಂಗಳೂರಿನಲ್ಲೂ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಹಾಗೂ ಜನತಾ ಸಮಾವೇಶವನ್ನು ನಡೆಸಲು…

4 hours ago

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು

ಬೆಂಗಳೂರು: ಸಾಲಗಾರರ ಕಾಟದಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು ತಾಯಿ-ಮಗಳು ಸಾವನ್ನಪ್ಪಿದರೆ, ಮತ್ತಿಬ್ಬರು ಸಾವು ಬದುಕಿನ ನಡುವೆ…

4 hours ago