ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರು ಹಿಂದಿನಿಂದಲೂ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡುತ್ತಲೆ ಬರುತ್ತಿದೆ. ಕರುಣಾನಿಧಿ ಅವರಿಂದ ಹಿಡಿದು, ಉದಯನಿಧಿ ಸ್ಟಾಲಿನ್ ವೆರೆಗೂ ಸನಾತನ ಧರ್ಮವನ್ನು ವಿರೋಧಿಸಿದ ಹಲವಾರು ಪ್ರಕರಣಗಳು ಕಣ್ಣಮುಂದಿದೆ. ಈ ಮಧ್ಯೆ ಸ್ಟಾಲಿನ್ ಕುಟುಂಬದಿಂದ ರಾಮ ಮಂದಿರಕ್ಕೆ 613 ಕೆ.ಜಿ ತೂಕದ ಗಂಟೆ ನೀಡಲಾಗಿದ್ದು, ಅದರಲ್ಲಿ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.
613 ಕೆ.ಜಿ ತೂಕದ ಗಂಟೆಯನ್ನು ತಮಿಳುನಾಡು ಸಂಸದೆ ಕನಿಮೋಳಿ ಅವರ ಕುಟುಂಬ ಸದಸ್ಯರು ಕಳುಹಿಸಿದ್ದಾರೆ ಎಂದು ಅದರಲ್ಲಿ ಬರೆಯಲಾಗಿದೆ. ಆ ಗಂಟೆಯನ್ನು ಬಾರಿಸಿದಾಗ ಓಂಕಾರ ಹೊರ ಹೊಮ್ಮುತ್ತದೆ. ಈ ಗಂಟೆಯಿಂದ ಹೊರಹೊಮ್ಮುವ ಓಂ ಶ್ರೀರಾಮನ ನೆಲೆಯಲ್ಲಿ ಅವರ ಆರಾಧ್ಯ ದೈವವಾದ ಮಹಾದೇವನ ಉಪಸ್ಥಿತಿಯನ್ನು ಕೂಡಾ ಪ್ರತಿಧ್ವನಿಸುತ್ತದೆ ಎಂದು ಹೇಳಲಾಗುತ್ತದೆ.
ಕನಿಮೊಳಿ ಯಾರು? : ಡಿಎಂಕೆ ಸಂಸದೆ ಕನಿಮೊಳಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮಲಸಹೋದರಿ. ಕನಿಮೊಳಿ ಅವರ ಪತಿ ಸಿಂಗಾಪುರದ ಪ್ರಜೆ. ಕಳೆದ ವರ್ಷದವರೆಗೂ ಅವರ ಬಳಿ ಪಾನ್ ಕಾರ್ಡ್ ಇರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಡಿಎಂಕೆ ನಾಯಕ ಉದಯನಿಧಿ ಮತ್ತೊಮ್ಮೆ ಸನಾತನ ಸಂಸ್ಥೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಸನಾತನ ಧರ್ಮವನ್ನು ‘ಡೆಂಗ್ಯೂ’ ಮತ್ತು ‘ಮಲೇರಿಯಾ’ಕ್ಕೆ ಹೋಲಿಸಿದ್ದರು. ಈ ಹೇಳಿಕೆ ಭಾರೀ ವಿವಾದ ಉಂಟು ಮಾಡಿದ ಮೇಲೆಯೂ ತನ್ನ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದರು. ಇದರ ನಡುವೆ ಕನಿಮೊಳಿ ಕುಟುಂಬದವರು ರಾಮ ಮಂದಿರಕ್ಕೆ ಗಂಟೆ ಉಡುಗೊರೆಯಾಗಿ ನೀಡಿದ್ದು, ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…