ರಾಷ್ಟ್ರೀಯ

ಶಬರಿಮಲೆಗೆ ಬಂದಿದ್ದ ಬಾಲಕಿ ಸರತಿ ಸಾಲಿನಲ್ಲೇ ಸಾವು; ಆಕ್ರೋಶ ಹೊರಹಾಕಿದ ಯಾತ್ರಾರ್ಥಿಗಳು

ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆಗೆ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಡಿಸೆಂಬರ್‌ 6ರಿಂದ ಪ್ರತಿದಿನ ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಭಕ್ತಸಾಗರವನ್ನು ನಿಯಂತ್ರಿಸುವುದು ಸದ್ಯ ಕೇರಳ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇನ್ನು ಶಬರಿಮಲೆ ಕ್ಷೇತ್ರದಲ್ಲಿ ಭಕ್ತರದಟ್ಟಣೆ ಹೆಚ್ಚಿದ್ದು ಅನೇಕ ಭಕ್ತಾದಿಗಳು ದೇವರ ದರ್ಶನ ಪಡೆಯದೇ ಹಿಂದಿರುಗುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಇಂದು ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತಿದ್ದ ತಮಿಳುನಾಡು ಮೂಲದ 12 ವರ್ಷದ ಬಾಲಕಿ ಪದ್ಮಶ್ರೀ ಎಂಬಾಕೆ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ.

ದೇವಸ್ಥಾನದ ಅಪ್ಪಾಚಿಮೇಡು ಎಂಬ ಸ್ಥಳದಲ್ಲಿ ಬಾಲಕಿ ಕುಸಿದುಬಿದ್ದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ. ಬಾಲಕಿಗೆ ಈ ಹಿಂದಿನಿಂದಲೂ ಉಸಿರಾಟದ ಸಮಸ್ಯೆಯಿದ್ದು, ಮೂರು ವರ್ಷಗಳಿಂದ ಹೃದ್ರೋಗ ಚಿಕಿತ್ಸೆ ಪಡೆಯುತ್ತಿದ್ದಳು ಹಾಗೂ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಲೇ ಶಬರಿಮಲೆ ಏರಲು ನಿರ್ಧರಿಸಿದ್ದಳು ಎನ್ನಲಾಗಿದೆ. ಬಾಲಕಿಯ ಸಾವಿನ ಬೆನ್ನಲ್ಲೇ ದೇವಾಲಯದ ಆಡಳಿತ ಮಂಡಳಿ ಹಾಗೂ ಕೇರಳ ರಾಜ್ಯ ಸರ್ಕಾರದ ವಿರುದ್ಧ ಯಾತ್ರಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

andolana

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: 24 ರೂ. ಹಿಡಿದು ಮುಂಬೈಗೆ ಬಂದ ಮುನ್ನಾ ಈಗ ಸೆಲೆಬ್ರೆಟಿ ಫೋಟೋಗ್ರಾಫರ್!

ಪ್ರಸಿದ್ಧ ಬಾಲಿವುಡ್ ತಾರೆಗಳ ಜೊತೆಯಲ್ಲಿ ಕೆಲಸ ಮಾಡಿದ ಅನುಭವ ಮುಂಬೈ ಎಂಬ ಮಾಯಾನಗರಿಗೆ ಪ್ರತಿ ದಿನ ಬದುಕು ಹುಡುಕಿಕೊಂಡು, ಕನಸುಗಳನ್ನು…

47 mins ago

ಟಿ-20 ವಿಶ್ವಕಪ್: ಕೌಂಟ್‌ಡೌನ್ ಶುರು

ಆರ್.ಎಲ್.ಮಂಜುನಾಥ್ ಮೈಸೂರು: ಕ್ರಿಕೆಟ್ ಪ್ರಿಯರಿಗೆ ಈಗ ಹಬ್ಬವೋ ಹಬ್ಬ. ಅದರಲ್ಲೂ ಕ್ರಿಕೆಟ್‌ನ ಭಾಷ್ಯವನ್ನೇ ಬದಲಿಸುತ್ತಿರುವ ಟಿ-೨೦ ಪಂದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು.…

1 hour ago

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ..!

ಕೃಷ್ಣ ಸಿದ್ದಾಪುರ ಪೊಲೀಸರು ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು ಹೂಡಿಕೆ ಹಣ ದೋಚುತ್ತಿರುವ ಖದೀಮರು  ಸಿದ್ದಾಪುರ: ಸೈಬರ್ ಅಪರಾಧ ಪ್ರಕರಣಗಳ…

1 hour ago

ಫೆ.6ರಂದು ಮಹದೇಶ್ವರ ದೇವಾಲಯದ ಉದ್ಘಾಟನೆ

ಎಂ.ಯೋಗಾನಂದ್ ಹಿರಿಕ್ಯಾತನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇಗುಲ; ಭಕ್ತರಿಂದ ಅನ್ನಸಂತರ್ಪಣೆ  ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮಹದೇಶ್ವರ…

1 hour ago

ರೈಲ್ವೆ ಕಂಬಿಗಳಿಗೆ ತಂತಿ ಜಾಲರಿ ಅಳವಡಿಕೆ ಪ್ರಯೋಗ ಯಶಸ್ವಿ

ಮಂಜು ಕೋಟೆ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ; ರೈತರು, ಸಾರ್ವಜನಿಕರು ನಿರಾಳ  ಎಚ್.ಡಿ.ಕೋಟೆ: ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಗಟ್ಟಲು…

1 hour ago

ಕ್ಯಾನ್ಸರ್ ಚಿಂತೆ ಬಿಡಿ, ಚಿಕಿತ್ಸೆ ಬಗ್ಗೆ ಗಮನ ಕೊಡಿ

ಫೋನ್ ಇನ್ ಕಾರ್ಯಕ್ರಮಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಹಲವು ಸಲಹೆ  ಕುಮಾರ್, ಬೆಂಗಳೂರು: ರೊಬೊಟಿಕ್ಸ್ ಶಸಚಿಕಿತ್ಸೆಗೂ, ಸಾಮಾನ್ಯ ಶಸ್ತ್ರಚಿಕಿತ್ಸೆಗೂ ಇರುವ…

1 hour ago