ದೇಶ- ವಿದೇಶ

ವೆನಿಜುವೆಲಾ ಭೂಕಂಪ ; ಮೃತರ ಸಂಖ್ಯೆ 235ಕ್ಕೆ ಏರಿಕೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ ಪರಿಣಾಮವಾಗಿ ಮೃತರ ಸಂಖ್ಯೆ ೨೩೫ಕ್ಕೆ ಏರಿಕೆಯಾಗಿದೆ. ಸುಮಾರು ೪,೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

ವೆನಿಜುವೆಲಾದ ಆರೋಗ್ಯ ಸಚಿವ ಕಾರ್ಲೋಸ ಅಲ್ವಾರಾಡೊ ನೀಡಿದ ಮಾಹಿತಿ ಪ್ರಕಾರ, ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತೆಗೆದು ರಕ್ಷಿಸಲು ಯತ್ನಿಸಲಾಗುತ್ತಿದೆ.

ಬುಧವಾರ ಸಂಜೆ ಸಂಭವಿಸಿದ ೭.೨ ಮತ್ತು ೭.೫ ರಷ್ಟು ಭೂಕಂಪ ತೀವ್ರತೆಯ ಎರಡು ಭೂಕಂಪಗಳು ಕಳೆದ ಶತಮಾನದಲ್ಲಿ ವೆನಿಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿದ್ದು, ದೇಶದ ಹಲವು ಭಾಗಗಳಲ್ಲಿ ಅದರ ಕಂಪನ ಅನುಭವಿಸಲಾಯಿತು.

ಧೂಳು ಹಾಗೂ ರಕ್ತದಲ್ಲಿ ಮುಳುಗಿದ್ದ ಗಾಯಾಳುಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗುತ್ತಿದ್ದು, ಮಕ್ಕಳೂ ಸೇರಿದಂತೆ ಸಾಕು ಪ್ರಾಣಿಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿವೆ.

ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ ದೃಶ್ಯಗಳಲ್ಲಿ, ಕಾಂಕ್ರೀಟ್‌ಗಳ ಅಡಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದ ದೃಶ್ಯ ಗಮನ ಸೆಳೆಯಿತು.

ಲಾ ಗುವೈರಾದಲ್ಲಿ ಭಾರೀ ಹಾನಿ:
ರಾಜಧಾನಿ ಕಾರಕಾಸ ಉತ್ತರದಲ್ಲಿರುವ ಕರಾವಳಿ ಪ್ರದೇಶ ಲಾ ಗುವೈರಾ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ವೆನಿಜುವೆಲಾದ ಪ್ರಮುಖ ವಿಮಾನ ನಿಲ್ದಾಣವೂ ಇದೇ ಪ್ರದೇಶದಲ್ಲಿದ್ದು, ಭೂಕಂಪದಿಂದ ಹಾನಿಗೊಳಗಾದ ಕಾರಣ ಮುಚ್ಚಲಾಗಿದೆ. ಇದರಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.
ನಗರಗಳಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಹಲವೆಡೆ ಕಟ್ಟಡಗಳ ಗೋಡೆಗಳು ಮಾತ್ರ ಉಳಿದು, ಮನೆಯೊಳಗಿನ ಪೀಠೋಪಕರಣಗಳು ಕಿಟಕಿಗಳ ಮೂಲಕ ಹೊರಗೆ ಕಾಣಿಸುತ್ತಿವೆ.

ನಾಪತ್ತೆಯಾದವರಿಗಾಗಿ ಕುಟುಂಬಸ್ಥರು ಅವರ ಛಾಯಾಚಿತ್ರಗಳಿರುವ ಪೋಸ್ಟರ್‌ಗಳನ್ನು ಅಂಟಿಸಿ ಹುಡುಕಾಟ ನಡೆಸುತ್ತಿದ್ದಾರೆ. ವಿದೇಶದಲ್ಲಿರುವ ವೆನೆಜುವೆಲಾ ಮೂಲದ ಜನರು ದೂರವಾಣಿ ಸಂಪರ್ಕ ಕಡಿತಗೊಂಡಿರುವುದರಿಂದ ತಮ ಕುಟುಂಬದವರ ಸಂಪರ್ಕಕ್ಕೆ ಬರಲು ಹರ ಸಾಹಸ ಪಡುತ್ತಿದ್ದಾರೆ.
ಕಾರಕಾಸ್ ನಗರದಲ್ಲಿ ನೂರಾರು ಜನರು ಭೂಕಂಪದ ಭೀತಿಯಿಂದ ಉದ್ಯಾನಗಳು, ವಾಹನ ನಿಲುಗಡೆ ಪ್ರದೇಶಗಳು ಹಾಗೂ ತೆರೆದ ಸ್ಥಳಗಳಲ್ಲಿ ರಾತ್ರಿ ಕಳೆದಿದ್ದಾರೆ.

ನನ್ನ ಮಗ ಎಲ್ಲಿದ್ದಾನೆ? ತಾಯಿಯ ಕಣ್ಣೀರು:
ಮೂರು ಮಕ್ಕಳ ತಾಯಿ ಡಯಾನಾ ಡೆಲ್ಗಾಡೊ ತಮ ಎಂಟು ವರ್ಷದ ಮಗ ಕಾಣೆಯಾಗಿದ್ದು, ಅವನು ಅವಶೇಷಗಳಡಿ ಸಿಲುಕಿದ್ದಾನೆಯೋ ಅಥವಾ ಸುರಕ್ಷಿತ ಆಶ್ರಯ ಕೇಂದ್ರದಲ್ಲಿದ್ದಾನೆಯೋ ತಿಳಿಯುತ್ತಿಲ್ಲ ಎಂದು ಅಲವತ್ತುಕೊಂಡರು.

ಮತ್ತೊಬ್ಬ ತಾಯಿ ತನ್ನ ೩ ಮತ್ತು ೧೦ ವರ್ಷದ ಮಕ್ಕಳ ಮೃತದೇಹಗಳನ್ನು ಹೊದಿಕೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಕುಸಿದು ಅತ್ತರೆ, ಹಲವರು ತಮ್ಮ ಪ್ರೀತಿಪಾತ್ರರ ಹೆಸರನ್ನು ಕೂಗಿ ಹುಡುಕುತ್ತಿರುವ ದೃಶ್ಯಗಳು ಮನಕಲಕುವಂತಿದ್ದವು.

ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಹಾನಿಗೊಳಗಾದ ಆಸ್ಪತ್ರೆಗಳು ಮತ್ತು ಮನೆಗಳು ಪುನಃ ನಿರ್ಮಾಣಕ್ಕಾಗಿ ೨೦೦ ಮಿಲಿಯನ್ ಅಮೆರಿಕನ್ ಡಾಲರ್‌ಗಳ ವಿಶೇಷ ನಿಽ ರಚಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಭಾರೀ ನಿರ್ಮಾಣ ಯಂತ್ರೋಪಕರಣಗಳನ್ನು ಒದಗಿಸುವಂತೆ ಖಾಸಗಿ ಸಂಸ್ಥೆಗಳಿಗೆ ಅವರು ಮನವಿ ಮಾಡಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸಜಿಎಸ ) ಪ್ರಕಾರ, ಎರಡೂ ಭೂಕಂಪಗಳ ಕೇಂದ್ರಬಿಂದು ಕ್ಯಾರಿಬಿಯನ್ ಕರಾವಳಿಯ ಮೊರೊನ್ ಸಮೀಪವಾಗಿದ್ದು, ಕಾರಕಾಸ್‌ನಿಂದ ಸುಮಾರು ೧೭೦ ಕಿ.ಮೀ. ದೂರದಲ್ಲಿತ್ತು.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

1 day ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

1 day ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

1 day ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

1 day ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

1 day ago