ದೇಶ- ವಿದೇಶ

ದಳಪತಿ ವಿಜಯ್‌ಗೆ ಮತ್ತೆ ಸಂಕಷ್ಟ : ಬಿಡುಗಡೆಗೂ ಮೊದಲೆ ʻಜನ ನಾಯಗನ್‌ʼ ಸೋರಿಕೆ.

ಚೆನ್ನೈ : ನಟ ಹಾಗೂ ರಾಜಕಾರಣಿ ದಳಪತಿ ವಿಜಯ್‌ ಅವರ ವೃತ್ತಿ ಜೀವನದ ಕೊನೆಯ ಹಾಗೂ ಬಹುನಿರೀಕ್ಷಿತ ʻಜನ ನಾಯಗನ್‌ʻ ಸಿನಿಮಾಗೆ ಪ್ರತಿನಿತ್ಯ ಒಂದೊಂದು ಸಂಕಷ್ಟಗಳು ಎದುರಾಗುತ್ತಿವೆ.

ಜನವರಿ 9 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಸಿನಿಮಾದ ದೃಶ್ಯಗಳುಳ್ಳ ಐದು ನಿಮಿಷದ ವಿಡಿಯೊ ಕ್ಲಿಪ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿರುವುದಾಗಿ ವರದಿಯಾಗಿದೆ.

ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಷ್ಟರಲ್ಲೇ ಸಿನಿಮಾದ ವಿಡಿಯೋ ಲೀಕ್‌ ಆಗಿರುವುದು ರಾಜಕೀಯ ವಲಯದಲ್ಲಿ ಸಂಚಲನಕ್ಕೂ ಕಾರಣವಾಗಿದೆ. ಚಿತ್ರವು ಸೆನ್ಸಾರ್ ನಲ್ಲಿರುವಾಗ ಸೋರಿಕೆ ಹೇಗೆ ಸಾಧ್ಯವಾಯಿತು? ಚಿತ್ರ ಲೀಕ್ ಆದ ನಂತರ, ಚುನಾವಣೆಯಲ್ಲಿ ಆಗುವ ಪರಿಣಾಮಗಳೇನು ಎನ್ನುವುದು ಸದ್ಯ ತಮಿಳುನಾಡಿನಲ್ಲಿ ಜನರ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ವೃತ್ತಿಜೀವನದ ಕೊನೆಯ ಸಿನಿಮಾ
ಜನನಾಯಗನ್ ಸಿನಿಮಾ ತನ್ನ ವೃತ್ತಿ ಜೀವನದ ಕೊನೆಯ ಸಿನಿಮಾ ಎಂದೇ ದಳಪತಿ ವಿಜಯ್ ಹೇಳಿದ್ದರು. ರಾಜಕೀಯ ಎಂಟ್ರಿಗೆ ಲಾಭವಾಗಲಿ ಎನ್ನುವ ಕಾರಣಕ್ಕಾಗಿಯೇ ಮತ್ತು ಇದಕ್ಕೆ ಹೊಂದಿಕೊಳ್ಳುವ ಚಿತ್ರಕಥೆಯನ್ನ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಚಿತ್ರದ ವಿಜಯ್ ಎಂಟ್ರಿ ಮತ್ತು ಕ್ಲೈಮ್ಯಾಕ್ಸ್’ನಲ್ಲಿ ಮತಯಾಚಿಸುವ ದೃಶ್ಯಗಳು ಈಗಾಗಲೇ ಲೀಕ್ ಆಗಿದ್ದವು. ಈಗ, ಚಿತ್ರದ ಇಡೀ ಹೆಚ್‌ಡಿ ಪ್ರಿಂಟ್, ಪೈರೇಟೆಡ್ ಸೈಟ್ ಗಳಲ್ಲಿ ಸೋರಿಕೆಯಾಗಿದೆ.

ವಿಜಯ್ ಅಭಿನಯದ ಜನನಾಯಗನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಂ ಮೆನನ್, ಪ್ರಕಾಶ್ ರಾಜ್, ನಾಸರ್, ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ.

ʻಜನನಾಯಗನ್ʼʼ ಬೆನ್ನಿಗೆ ನಿಂತ ಸ್ಟಾರ್‌ ನಟರು
ಜನನಾಯಗನ್‌ ಸಿನಿಮಾದ ವಿಡಿಯೋ ತುಣುಕುಗಳು ಸೋರಿಕೆಯಾದ ಬಳಿಕ ಪೈರಸಿ ವಿರುದ್ಧ ಸೌತ್‌ನ ಸ್ಟಾರ್‌ ನಟರು ಆಕ್ರೋಶ ಹೊರಹಾಕಿದ್ದಾರೆ. ನಟ ಚಿರಂಜೀವಿ, ಶಿವಕಾರ್ತಿಕೇಯನ್‌, ವಿಜಯ್‌ ಆಂಟೊನಿ ಸೇರಿ ಹಲವು ನಟರು #KillPiracy ಎನ್ನುವ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಹಂಚಿಕೊಂಡಿದ್ದು, ಪೈರಸಿ ಕೊಂದು ಸಿನಿಮಾ ಉಳಿಸಬೇಕೆಂದು ಕರೆ ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ: ಇರಾನಿನ ಕೆಲ ಬೇಡಿಕೆಗಳಿಗೆ ಅಮೇರಿಕಾ ತಾತ್ವಿಕ ಒಪ್ಪಿಗೆ

ಇಸ್ಲಾಮಾಬಾದ್:‌ ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್‌ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್‌ ಮೊಹಮ್ಮದ್‌…

9 hours ago

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

12 hours ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

13 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

13 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

13 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

13 hours ago