ದೇಶ- ವಿದೇಶ

ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ವಹಿಸುವ ಸಮಯ ಮುಗಿದಿದೆ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್: ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ವಹಿಸುವ ಸಮಯ ನನ್ನ ಆಡಳಿತದಲ್ಲಿ ಮುಗಿದಿದೆ. ಈ ಹತ್ಯೆಯನ್ನು ನಾನು ಖಂಡಿಸುತ್ತೇನೆ ಎಂದು ಪತ್ನಿ ಮತ್ತು ಮಗನ ಎದುರೇ ವಲಸಿಗನಿಂದ ಶಿರಚ್ಚೇದನಕ್ಕೊಳಗಾದ ಕರ್ನಾಟಕ ಮೂಲದ ಚಂದ್ರ ನಾಗ ಮಲ್ಲಯ್ಯ ಅವರ ಹತ್ಯೆಗೆ ಸಂಬಂಧಪಟ್ಟಂತೆ ಆರೋಪಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

ಈ ಅಪರಾಧಿ ನಮ್ಮ ದೇಶದಲ್ಲಿ ಇರಬಾರದಿತ್ತು. ನನ್ನ ಆಡಳಿತದಲ್ಲಿ ಅಕ್ರಮ ವಲಸೆ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವ ಸಮಯ ಮುಗಿದಿದೆ.ಅಮೆರಿಕವನ್ನು ಮತ್ತೆ ಸುರಕ್ಷಿತವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿರುವ ಡೊನಾಲ್ಡ್ ಟ್ರಂಪ್, ತಮ್ಮ ಆಡಳಿತದಲ್ಲಿ ಅಕ್ರಮ ವಲಸಿಗ ಅಪರಾಧಿಗಳ ಬಗ್ಗೆ ಮೃದುವಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Asia cup | ಭಾರತಕ್ಕೆ ಸುಲಭ ಜಯ : ಪಾಕಿಸ್ತಾನಕ್ಕೆ ಮುಖಭಂಗ

ಈ ಕುರಿತು ತಮ್ಮ ಟ್ರೋತ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಚಂದ್ರ ನಾಗಮಲ್ಲಯ್ಯ ಅವರನ್ನು ಕ್ಯೂಬಾದ ವಲಸಿಗರೊಬ್ಬರು ಬರ್ಬರವಾಗಿ ಶಿರಚ್ಛೇದನ ಮಾಡಿದ್ದಾರೆ. ಈ ವ್ಯಕ್ತಿ ನಮ್ಮ ದೇಶದಲ್ಲಿ ಎಂದಿಗೂ ಇರಬಾರದಿತ್ತು . ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಟೆಕ್ಸಾಸ್ ನ ಡಲ್ಲಾಸ್‌ನಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದ ಚಂದ್ರ ನಾಗಮಲ್ಲಯ್ಯ ಅವರನ್ನು ಪತ್ನಿ ಮತ್ತು ಮುಂದೆಯೇ ಕ್ರೂರವಾಗಿ ಶಿರಚ್ಛೇದ ಮಾಡಿ ಕೊಲೆ ಮಾಡಿದ ಘಟನೆಯ ಭಯಾನಕ ವರದಿಗಳು ನನಗೆ ತಿಳಿದಿವೆ. ಆರೋಪಿಯನ್ನು ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಭಯಾನಕ ಕ್ರಿಮಿನಲ್ ಕೇಸ್‌ಗಳ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಆದರೆ, ಕ್ಯೂಬಾ ಅಂತಹ ದುಷ್ಟರನ್ನು ತಮ್ಮ ದೇಶಕ್ಕೆ ಬಯಸಲಿಲ್ಲ ಎಂದು ಅಸಮರ್ಥ ಜೋ ಬೈಡನ್ ನೇತೃತ್ವದಲ್ಲಿ ಆರೋಪಿ ನಮ್ಮ ತಾಯ್ನಾಡಿಗೆ ಮರಳಿದರು ಎಂದು ತಿಳಿಸಿದ್ದಾರೆ.

ಭಾರತೀಯ ಮೂಲಕ ವ್ಯಕ್ತಿ ಚಂದ್ರ ನಾಗಮಲ್ಲಯ್ಯ ಕೊಲೆಯ ಆರೋಪಿಯಾದ ಕ್ಯೂಬಾದ ಅಕ್ರಮ ವಲಸಿ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್(37) ವಿರುದ್ಧ ಪ್ರಥಮ ದರ್ಜೆಯ ಕೊಲೆ ಆರೋಪ ಹೊರಿಸಿ, ಕಾನೂನಿನ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸುವುದಾಗಿ ಟ್ರಂಪ್? ಘೋಷಿಸಿದ್ದಾರೆ. ಈ ಘಟನೆಯು ಅಮೆರಿಕದ ಅಕ್ರಮ ವಲಸೆ ನೀತಿಯ ಬಗ್ಗೆ ರಾಷ್ಟ್ರೀಯ ಚರ್ಚೆಯನ್ನು ಉಂಟುಮಾಡಿದ್ದು, ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ಆಘಾತವನ್ನುಂಟುಮಾಡಿದೆ.

ವರದಿ ಪ್ರಕಾರ 50 ವರ್ಷದ ಚಂದ್ರ ನಾಗಮಲ್ಲಯ್ಯ (ಬಾಬ್) ಅವರನ್ನು ಸೆಪ್ಟೆಂಬರ್ 10ರಂದು ಡಲ್ಲಾಸ್‍ನ ಡೌನ್‍ಟೌನ್ ಸೂಟ್ಸ್ ಮೋಟೆಲ್‍ನಲ್ಲಿ ಕೊಬೋಸ್-ಮಾರ್ಟಿನೆಜ್ ಚಾಕು ದಾಳಿ ಮಾಡಿ ಶಿರಚ್ಛೇದನ ಮಾಡಿ ಕೊಂದಿದ್ದಾರೆ. ಈ ದಾಳಿಯನ್ನು ಅವರ ಪತ್ನಿ ನಿಶಾ ಮತ್ತು ಮಗ ಗೌರವ್ ಕಣ್ಣಾರೆ ನೋಡಿದ್ದಾರೆ. ದಾಳಿಯು ಒಂದು ವಾಷಿಂಗ್ ಮೆಷಿನ್ ಮುರಿದ ವಿವಾದದಿಂದ ಆರಂಭವಾಗಿತ್ತು. ಆರೋಪಿ ಕ್ಯೂಬಾದ ಅಕ್ರಮ ವಲಸಿಯಾಗಿದ್ದು, ಇದ್ದಕ್ಕಿದ್ದಂತೆ ಕೊಲೆ ಮಾಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

1 hour ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

2 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

2 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

2 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

5 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

11 hours ago