ಹೊಸದಿಲ್ಲಿ: ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನದಲ್ಲಿ 242 ಜನ ಪ್ರಯಾಣಿಕರಿದ್ದರು. ಇವರಲ್ಲಿ 169 ಜನ ಭಾರತೀಯ ಪ್ರಜೆಗಳು, 53 ಜನ ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾದವರು ಹಾಗೂ 7 ಮಂದಿ ಪೋರ್ಚುಗಲ್ ಪ್ರಜೆಗಳಿದ್ದರು ಎಂದು ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ.
ಭಾರತದಲ್ಲಿ ಈ ಹಿಂದೆ ನಡೆದ ವಿಮಾನ ದುರಂತಗಳು
ಮುಂಬೈ ವಿಮಾನ ದುರಂತ
1962 ಜುಲೈ 7 ರಂದು ಮುಂಬೈ ಈಶಾನ್ಯದಲ್ಲಿ ಬೆಟ್ಟಕ್ಕೆ ಅಪ್ಪಳಿಸಿದ ಏರ್ ಇಂಡಿಯಾದ ವಿಮಾನದಲ್ಲಿ 94 ಮಂದಿ ಸಾವು ಸಾವನ್ನಪ್ಪಿದ್ದರು.
ಪಾಲಂ ವಿಮಾನ ದುರಂತ
1973 ಮೇ 31 ರಂದು ಮದ್ರಾಸ್‌ನಿಂದ (ಇದೀಗ ಚೆನ್ನೈ) ದೆಹಲಿಗೆ ಪ್ರಯಾಣಿಸಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ, ಪಾಲಂ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ನೆಲಕ್ಕಪ್ಪಳಿಸಿ 65 ಜನರ ಪೈಕಿ 48 ಮಂದಿ ಅಸು ನೀಗಿದ್ದರು. ಧೂಳು ಮತ್ತು ಭಾರಿ ಮಳೆಯಿಂದಾಗಿ ವಾತಾವರಣ ದುರಂತಕ್ಕೆ ಕಾರಣವಾಗಿತ್ತು. ನೆಲಕ್ಕಪ್ಪಳಿಸುತ್ತಲೇ ಬೆಂಕಿಯುಂಡೆಯಾದ ವಿಮಾನದಲ್ಲಿದ್ದ 48 ಮಂದಿ ಸಾವನ್ನಪ್ಪಿದ್ದರು.
ಅರಬ್ಬಿಯನ್ ಸಮುದ್ರ ಅಪಘಾತ
1978 ಜನವರಿ 1 ರಂದು ಹೊಸ ವರ್ಷದ ಸಂಭ್ರಮದ ನಡುವೆ ಮುಂಬೈನ ಬಾಂದ್ರಾ ಕರಾವಳಿಯಿಂದ ಮೂರು ಕಿಮೀ ದೂರದಲ್ಲಿ ಏರ್ ಇಂಡಿಯಾದ ವಿಮಾನ ಅರಬ್ಬಿ ಸಮುದ್ರಕ್ಕೆ ಬಿದ್ದು ಭೀಕರ ದುರಂತ ಸಂಭವಿಸಿತ್ತು. ಎಲ್ಲ 213 ಪ್ರಯಾಣಿಕರು ಹಾಗೂ ಸಿಬ್ಬಂದಿ ಜಲ ಸಮಾಧಿಯಾಗಿದ್ದರು.
ಏರ್ ಇಂಡಿಯಾ ಫೈಟ್ 182
1985 ಜೂನ್ 23 ರಂದು ಏರ್ ಇಂಡಿಯಾ ಫ್ಲೈಟ್ 182, ಟೊರೊಂಟೊ ಮತ್ತು ಮಾಂಟ್ರಿಯಲ್‌ನಿಂದ ಲಂಡನ್ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುತ್ತಿತ್ತು. ಬೋಯಿಂಗ್ 747 ವಿಮಾನದ ಕಾರ್ಗೋ ಹೋಲ್ಡ್‌ನಲ್ಲಿ ಬಾಂಬ್ ಸ್ಛೋಟಗೊಂಡ ಪರಿಣಾಮ ಐರ್ಲೆಂಡ್‌ನ ನೈಋತ್ಯ ಕರಾವಳಿಯಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ 302 ಪ್ರಯಾಣಿಕರು ಮತ್ತು 22 ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 329 ಜನರು ಸಾವನ್ನಪ್ಪಿದ್ದರು. ‘ಎಂ ಸಿಂಗ್‘ ಹೆಸರಿನಲ್ಲಿ ಚೆಕ್ ಇನ್ ಮಾಡಿದ್ದ ಓರ್ವ ಪ್ರಯಾಣಿಕ, ಬಾಂಬ್ ಇರುವ ಅವರ ಸೂಟ್‌ಕೇಸ್‌ನ್ನು ವಿಮಾನಕ್ಕೆ ಲೋಡ್ ಮಾಡಿದ್ದ ಎಂಬುದು ನಂತರ ಗೊತ್ತಾಗಿತ್ತು. ಆದರೆ ಈ ಅನಾಮಧೇಯ ವ್ಯಕ್ತಿಯನ್ನು ಎಂದಿಗೂ ಪತ್ತೆ ಹಚ್ಚಲಾಗಲಿಲ್ಲ. ಇದು ಭಯೋತ್ಪಾದಕರಿಂದ ನಡೆಸಿದ ಪ್ರಮುಖ ಭೀಕರ ವಿಮಾನ ದಾಳಿ ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಮುಂಬೈ -ಅಹಮದಾಬಾದ್ ವಿಮಾನ ದುರಂತ
1988 ಅಕ್ಟೋಬರ್ 19 ರಂದು ಮುಂಬೈನಿಂದ ಅಹಮದಾಬಾದ್‌ಗೆ ಪ್ರಯಾಣಿಸುತ್ತಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ ಅಹಮದಾಬಾದ್ ನಿಲ್ದಾಣ ತಲುಪುವ ವೇಳೆ ನೆಲಕ್ಕಪ್ಪಳಿಸಿ ಅದರಲ್ಲಿದ್ದ 135 ಜನರ ಪೈಕಿ 133 ಮಂದಿ ಸಾವನ್ನಪ್ಪಿದ್ದರು. ಪ್ರತಿಕೂಲ ಹವಾಮಾನ ಅದಕ್ಕೆ ಕಾರಣ ಎನ್ನಲಾಗಿತ್ತು.
ಬಿಹಾರ
2000 ಜುಲೈ 17 ರಂದು ಬಿಹಾರದ ಟಪನಾದ ವಸತಿ ಸಮುಚ್ಚಯದ ಮೇಲೆ ಬಿದ್ದ ಅಲಯನ್ಸ್ ಏರ್ ಫ್ಲೈಟ್ ಕೆಳಗಡೆಯಿದ್ದ ಐವರ ಸಹಿತ ಒಟ್ಟು 55 ಮಂದಿ ಸಾವನ್ನಪ್ಪಿದ್ದರು.
ಮಂಗಳೂರು ವಿಮಾನ ದುರಂತ :
2010 ಮೇ 22ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾದ ಬೋಯಿಂಗ್ 737-800 ವಿಮಾನ ರನ್-ವೇ ಯಿಂದ ದೂರ ಸಾಗಿ ಕಣಿವೆಗೆ ಉರುಳಿ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ 158 ಪ್ರಯಾಣಿಕರ ಪೈಕಿ 152 ಪ್ರಯಾಣಿಕರು ಮತ್ತು ಎಲ್ಲ ಆರು ಸಿಬ್ಬಂದಿ ಮೃತಪಟ್ಟಿದ್ದರು. ಇದು ಕರ್ನಾಟಕದಲ್ಲಿ ನಡೆದ ಅತೀ ಘೋರ ವಾಯು ದುರಂತ ಎಂಬ ಕುಖ್ಯಾತಿಯನ್ನು ಪಡೆದಿದೆ. ಇದು ದೇಶದ ಮೂರನೇ ಅತಿ ದೊಡ್ಡ ವಿಮಾನ ದುರಂತವಾಗಿತ್ತು.
ಕೋಝಿಕ್ಕೋಡ್
2020ರ ಆಗಸ್ಟ್ 7 ರಂದು ದುಬೈನಿಂದ ಕೇರಳದ ಕೋಝಿಕ್ಕೋಡ್‌ಗೆ ಬರುತ್ತಿದ್ದ ಬೋಯಿಂಗ್ 737 ವಿಮಾನವು ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಪತನವಾಗಿತ್ತು. ವಿಮಾನಲ್ಲಿ 190 ಮಂದಿ ಇದ್ದರು. 20 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ತನಿಖೆ ಇನ್ನು ಮುಂದುವರೆಯುತ್ತಿದೆ.
ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…
ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…
ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್…
ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವರಾಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾರ್ವಜನಿಕರು ಆಗಮಿಸುವ…
ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…