ನವದೆಹಲಿ : ರತನ್ ಟಾಟಾ ಅಂದ್ರೇನೆ ಬತ್ತದ ಉತ್ಸಾಹ, ಸಾಧನೆಗೆ ಪ್ರೇರಕ ಶಕ್ತಿ. ಹೊಸ ಉದ್ಯಮಕ್ಕೆ ಕೈ ಹಾಕುವ ಯುವಪಡೆಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುವ ರತನ್ ಟಾಟಾ ಸದ್ಯ ಅಂಥದ್ದೇ ಒಂದು ಕಾರ್ಯ ಮಾಡಿದ್ದಾರೆ. ಇಳಿವಯಸ್ಸಿನಲ್ಲಿ ಒಂಟಿತನದಿಂದ ಬಳಲುವ ವೃದ್ಧರಿಗೆ ಜೊತೆಯಾಗುವ ವಿನೂತನ ಸ್ಟಾರ್ಟಪ್ ಕಂಪನಿಯಲ್ಲಿ ಸ್ವತಃ ಹಿರಿಯ ನಾಗರಿಕರಾಗಿರುವ ರತನ್ ಟಾಟಾ ಹೂಡಿಕೆ ಮಾಡೋದಾಗಿ ಘೋಷಿಸಿದ್ದಾರೆ. ಆ.16ರಂದು ಪ್ರಾರಂಭವಾದ ಮುಂಬೈ ಮೂಲದ ಗುಡ್ ಫೆಲೋಸ್ ಎಂಬ ಸ್ಟಾರ್ಟ್ ಅಪ್ ಗೆ 84 ವರ್ಷದ ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಬೆನ್ನಲುಬಾಗಿ ನಿಂತಿದ್ದಾರೆ. ಈ ಆ್ಯಪ್ ನ ಸಂಸ್ಥಾಪಕ ಶಂತನು ನಾಯ್ಡು ರತನ್ ಟಾಟಾ ಅವರ ಸಹಾಯಕರಾಗಿ 2018ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ಶಂತನು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದಿದ್ದು, ಈ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಈ ಸ್ಟಾರ್ಟಪ್ ಯುವ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತದೆ. ಅವರು ಹಿರಿಯ ನಾಗರಿಕರಿಗೆ ಮೊಮ್ಮಕ್ಕಳ ಮಾದರಿಯಲ್ಲೇ ನೆರವು ನೀಡುತ್ತಾರೆ.
ಈ ಯುವ ಜನರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಇನ್ನು ಈ ಕಂಪನಿಯ ಸೇವೆ ಆಯ್ಕೆ ಮಾಡುವ ಹಿರಿಯ ನಾಗರಿಕರಿಗೆ ‘ಗ್ರ್ಯಾಂಡ್ ಪಲ್’ ಎನ್ನಲಾಗುತ್ತದೆ. ಪ್ರತಿ ಗ್ರ್ಯಾಂಡ್ ಪಲ್ ಗೆ ಅವರಿಗೆ ಹೊಂದಿಕೆಯಾಗುವ ಗುಡ್ ಫೆಲೋಸ್ ಅನ್ನು ಒದಗಿಸೋದೇ ಈ ಕಂಪನಿಯ ಉದ್ದೇಶ. ‘ಜೊತೆಗಾರಿಕೆ ಅನ್ನೋದು ವಿಭಿನ್ನ ಜನರಿಗೆ ವಿಭಿನ್ನ ಸಂಗತಿಯಾಗಿದ್ದು, ಈ ಸ್ಟಾರ್ಟಪ್ ಅದಕ್ಕೆ ಮಹತ್ವ ನೀಡುತ್ತದೆ. ಕೆಲವರಿಗೆ ಟಿವಿ ನೋಡೋದು, ಇನ್ನೂ ಕೆಲವರಿಗೆ ಹಳೆಯ ಕಥೆಗಳನ್ನು ಹೇಳಲು ಜೊತೆಗಾರರ ಅಗತ್ಯವಿರುತ್ತದೆ. ನಾವು ಅದೆಲ್ಲವನ್ನೂ ಒದಗಿಸುತ್ತೇವೆ. ಈ ಕಂಪನಿಯಲ್ಲಿ ಟಾಟಾ ಅವರ ಹೂಡಿಕೆ ಈ ಪರಿಲ್ಪನೆಗೆ ನಾವು ನೀಡಿರುವ ಶ್ರದ್ಧೆಗೆ ಸಿಕ್ಕ ಬಹುದೊಡ್ಡ ಪ್ರೋತ್ಸಾಹದ ಮೂಲ’ ಎಂದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಶಂತನು ಹೇಳಿದರು.
ಈ ಸ್ಟಾರ್ಟಪ್ ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿರಿಯ ನಾಗರಿಕರು ಈ ಆ್ಯಪ್ ಗೆ ಹಣ ನೀಡಿ ಚಂದಾದಾರರಾಗಬಹುದು. ಒಂದು ತಿಂಗಳು ಉಚಿತವಾಗಿ ಈ ಸಂಸ್ಥೆಯ ಸೇವೆಗಳ ಅನುಭವ ಪಡೆಯಲು ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಗುತ್ತದೆ. ಎರಡನೇ ತಿಂಗಳಿಂದ ಸೇವೆಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಚಂದಾದಾರಿಕೆ ಶುಲ್ಕ ವೈಯಕ್ತಿಕ ಯೋಜನೆ ಆಯ್ಕೆ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಶುಲ್ಕವನ್ನು ಸಮರ್ಥಿಸಿಕೊಂಡಿರುವ ಕಂಪನಿ, ತನ್ನ ಯುವ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಒದಗಿಸೋದು ಕೂಡ ಅಗತ್ಯವಾಗಿದೆ ಎಂದು ಹೇಳಿದೆ.
ಈ ವಿನೂತನ ಸ್ಟಾರ್ಟಪ್ ಕಂಪನಿಯಲ್ಲಿ ರತನ್ ಟಾಟಾ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯಿಲ್ಲ. ಆದ್ರೆ ಈ ಸ್ಟಾರ್ಟಪ್ ಬಗ್ಗೆ ರತನ್ ಟಾಟಾ ಆಸಕ್ತಿ ಹೊಂದಿರೋದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಅವರು ಆಡಿದ ಮಾತುಗಳಲ್ಲೇ ವ್ಯಕ್ತವಾಗಿತ್ತು. ‘ಜೊತೆಗಾರರಿಗಾಗಿ ಹಂಬಲಿಸುತ್ತ ಏಕಾಂಗಿಯಾಗಿ ಸಮಯ ಕಳೆಯುವ ತನಕ ನಿಮಗೆ ಒಂಟಿತನದ ಅನುಭವ ಗೊತ್ತಾಗಿರೋದಿಲ್ಲ’ ಎಂದು ಅವರು ಹೇಳಿದ್ದರು.
ಪ್ರಾರಂಭದಲ್ಲಿ ಕಂಪನಿ ಮುಂಬೈನಲ್ಲಿ ಕಾರ್ಯನಿರ್ವಹಿಸುವ ಯೋಜನೆ ಹೊಂದಿದೆ. ಆದರೆ, ನಿಧಾನವಾಗಿ ಪುಣೆ, ಚೆನ್ನೈ ಹಾಗೂ ಬೆಂಗಳೂರಿಗೆ ತನ್ನ ಕಾರ್ಯಗಳನ್ನು ವಿಸ್ತರಿಸುವ ಗುರಿ ಹೊಂದಿದೆ. ಆಸಕ್ತರು thegoodfellows.in ಸೈನ್ ಅಪ್ ಆಗಬಹುದು ಅಥವಾ 91 8779524307 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು.
ಯುವಜನರು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೊಳ್ಳಬಹುದು. ಇವರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಸೈಕಾಮೆಟ್ರಿ ಟೆಸ್ಟ್ ಮೂಲಕ ಅವರನ್ನು ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಮುಂಬಯಿಯಲ್ಲಿ 800 ಪದವೀಧರರು ಪರೀಕ್ಷೆಗೆ ಕೂತಿದ್ದರಂತೆ, ಅವರಲ್ಲಿ ತೇರ್ಗಡೆಯಾದವರು ಕೇವಲ 20 ಮಂದಿಯಷ್ಟೇ!
ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…
ಶಿವಮೊಗ್ಗ: ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…
ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…