ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹನೂರು ಸಮೀಪದ ಹುಲಸುಗುಡ್ಡೆ ಬೋರೆ ಸಮೀಪದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಜನ ಶ್ರಮಜೀವಿಗಳು. ಈ ಜಿಲ್ಲೆ ಇತಿಹಾಸ ಮತ್ತು ಸಂಸ್ಕಾರದ ಆಸ್ತಿ. ಇಲ್ಲಿನ ದೇವಾಲಯಗಳು ಬಡ ಜನತೆಯ ನಂಬಿಕೆಯ ಕೇಂದ್ರವಾಗಿದ್ದು, ಅವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿವೆ ಎಂದರು.
ನನ್ನ ಕ್ಷೇತ್ರದಿಂದ ಪ್ರತಿ ವರ್ಷ ಸಾವಿರಾರು ಜನ ಕಾವೇರಿ ನದಿ ದಾಟಿ ಭಕ್ತಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಾರೆ. ಬಿಳಿಗಿರಿ ರಂಗನಾಥಸ್ವಾಮಿ ಮತ್ತು ಗೋಪಾಲಸ್ವಾಮಿ ಬೆಟ್ಟದ ದೇವಾಲಯಗಳಿಗೂ ಭಕ್ತರು ಹೋಗುತ್ತಾರೆ. ನಾನು ಚಿಕ್ಕಂದಿನಲ್ಲಿ ನನ್ನ ತಂದೆಯವರ ಜೊತೆ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯಕ್ಕೆ ಬಂದಿದ್ದೆ ಎಂದು ಸ್ಮರಿಸಿದರು.
ಇಡೀ ರಾಜ್ಯದಲ್ಲಿ ಭೀಕರ ಬರ ಇದೆ. ಆದರೆ ಈ ಭಾಗದಲ್ಲಿ ಮಳೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಜಲಾಶಯಗಳು ತುಂಬುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಮತ ಶಿಕಾರಿ ಅಲ್ಲ, ಪಕ್ಷ ಸಂಘಟನೆ: ಭಾರತ್ ಜೋಡೋ 2.0 ಇಂದಿನಿಂದ ಶಿಕಾರಿಪುರದಲ್ಲಿ ಚಾಲನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋ ಅದು ಒಂದೇ, ಅದು ರಾಹುಲ್ ಗಾಂಧಿಯವರದ್ದು ಮಾತ್ರ. ಈಗ ನಡೆಯುತ್ತಿರುವುದು ಪಕ್ಷ ಸಂಘಟನೆಗೆ ಹರಿಪ್ರಸಾದ್ ಅವರು ರೂಪಿಸಿರುವ ಕಾರ್ಯಕ್ರಮ. ಭಾರತ್ ಜೋಡೋ ಹೆಸರು ಶಾಶ್ವತವಾಗಿ ಉಳಿಯಲಿ ಎಂದು ಆ ಹೆಸರನ್ನು ಇಟ್ಟಿದ್ದೇವೆ. ಶಿಕಾರಿಪುರದಿಂದಲೇ ಮತ ಶಿಕಾರಿ ಆರಂಭ ಎಂಬ ಪ್ರಶ್ನೆಗೆ ಇದು ಪಕ್ಷದ ಸಂಘಟನೆಗಾಗಿ ಮತ್ತು ಹೆಸರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬ ದೃಷ್ಟಿಯಿಂದ ಮಾಡುತ್ತಿರುವ ಕಾರ್ಯಕ್ರಮ ಎಂದು ಹೇಳಿದರು.
30 ಸಾವಿರ ಕೋಟಿ ಬಿಲ್ ಬಾಕಿ ಮತ್ತು ಕಮಿಷನ್ ಆರೋಪಕ್ಕೆ ಸವಾಲು: ಗುತ್ತಿಗೆದಾರರ ಸಂಘ 30 ಸಾವಿರ ಕೋಟಿ ರೂ.ಗೂ ಅಧಿಕ ಬಿಲ್ ಬಾಕಿ ಇದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಇಲ್ಲದಿದ್ದರೂ ಬೇಕಾದಷ್ಟು ಗುತ್ತಿಗೆ ಕೆಲಸಗಳನ್ನು ನೀಡಿದ್ದಾರೆ. ಆ ಕೆಲಸಗಳು ಈಗ ಮುಗಿಯುತ್ತಿವೆ. ಅವುಗಳ ಬಿಲ್‌ಗಳೇ ಇನ್ನೂ ಬಾಕಿ ಇವೆ. ಈ ಬಗ್ಗೆ ಹಣಕಾಸು ಇಲಾಖೆಯಲ್ಲಿ ಚರ್ಚೆಯಾಗಿದೆ. ಇಂತಹ ಅವೈಜ್ಞಾನಿಕ ಕೆಲಸಗಳಿಂದ ಅನಾಹುತಗಳಾಗಿವೆ, ಅದು ಅವರ ಕಾಲದ್ದು ಇರಲಿ. ಗುತ್ತಿಗೆದಾರರು ಉಳಿಯಬೇಕು, ಅವರ ಬದುಕಿಗೆ ಮಾಡಿಕೊಡಬೇಕು. ಒಂದೊಂದಾಗಿ ಕ್ಲಿಯರ್ ಮಾಡುತ್ತಿದ್ದೇವೆ, ಸದ್ಯದಲ್ಲೇ ಚರ್ಚೆ ಮಾಡುತ್ತೇನೆ ಎಂದರು.
ಇನ್ಸೆಂಟಿವ್ ನೀಡಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ಯಾರಿಗೆ ಕೊಟ್ಟಿದ್ದಾರೆ ಎಂದು ಪ್ರಮಾಣಪತ್ರದೊಂದಿಗೆ ದೂರು ಕೊಡಲಿ ಎಂದು ಸವಾಲು ಹಾಕಿದರು.
490 ಕೋಟಿ ನೀರಾವರಿ ಯೋಜನೆ: ಹನೂರು ಕ್ಷೇತ್ರಕ್ಕೆ ಬಜೆಟ್‌ನಲ್ಲಿ 490 ಕೋಟಿ ರೂ. ನೀರಾವರಿ ಯೋಜನೆ ಘೋಷಣೆಯಾಗಿದೆ ಎಂಬ ಪ್ರಶ್ನೆಗೆ, ಎಲ್ಲವನ್ನೂ ಮಾಡುತ್ತೇವೆ. ಇನ್ನೂ ಕ್ಯಾಬಿನೆಟ್‌ಗೆ ಬರಬೇಕು, ಪ್ರೊಸೀಜರ್ ಇದೆ, ಕಂಪನಿಗಳಿವೆ. ಅವೆಲ್ಲದರಲ್ಲೂ ಚರ್ಚೆಯಾಗಿ ನಂತರ ತೀರ್ಮಾನವಾಗುತ್ತದೆ ಎಂದರು.
ಎಸ್‌ಐಆರ್ ವಿರೋಧ: ಎಸ್‌ಐಆರ್ ರದ್ದತಿಗೆ ಕಾಂಗ್ರೆಸ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅವರ ಜೊತೆ ಇರುವವರೇ ಆರೋಪಿಸುತ್ತಿದ್ದಾರೆ. ಬಿಜೆಪಿಯವರೇ ಅವರನ್ನು ಆಯ್ಕೆ ಮಾಡಿದ್ದು, ಈಗ ಅವರೇ ದೂರುತ್ತಿದ್ದಾರೆ. ಜನರ ಹಕ್ಕು ಕಸಿಯುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಕೆ.ಹೆಚ್ ಮುನಿಯಪ್ಪ, ಯು.ಟಿ ಖಾದರ್, ಪುಟ್ಟರಂಗಶೆಟ್ಟಿ, ಅಜಯ್ ಧರ್ಮಸಿಂಗ್, ಚೆಲುವರಾಯಸ್ವಾಮಿ, ಶಾಸಕ ಎಂ.ಆರ್ ಮಂಜುನಾಥ್, ಮಾಜಿ ಶಾಸಕ ಆರ್ ನರೇಂದ್ರ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…
ಶಿವಮೊಗ್ಗ: ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…
ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…