ದೇಶ- ವಿದೇಶ

ನವೋದ್ಯಮ ಕ್ಷೇತ್ರದಲ್ಲಿನ ರಾಜ್ಯದ ಪ್ರಗತಿಯನ್ನಷ್ಟೇ ಉಲ್ಲೇಖಿಸಿದ್ದೇನೆ: ಶಶಿ ತೂರೂರ್‌ ಸ್ಪಷ್ಟನೆ

ತಿರುವನಂತಪುರ: ನನ್ನ ಲೇಖನದಲ್ಲಿ ನಾನು ಕೇರಳದ ಸಿಪಿಐ ನೇತತ್ವದ ಸರ್ಕಾರವನ್ನು ಹೊಗಳಿಲ್ಲ. ಬದಲಿಗಡ ನವೋದ್ಯಮ ಕ್ಷೇತ್ರದಲ್ಲಿನ ರಾಜ್ಯದ ಪ್ರಗತಿಯನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದು ಸಂಸದ ಶಶಿ ತರೂರ್‌ ಸ್ಪಷ್ಟನೆ ನೀಡಿದ್ದಾರೆ.

ತಿರುವಂತಪುರದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆಂಗ್ಲ ದಿನಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಯಾವುದೇ ರಾಜಕೀಯ ಉಲ್ಲೇಖ ಇರಲಿಲ್ಲ. ಕೇರಳದ ಉದ್ಯಮಶೀಲತೆ ಹಾಗೂ ನಾವೀನ್ಯತೆಯ ಬೆಳವಣಿಗೆಯ ಬಗ್ಗೆ ಪ್ರತಿಪಾದಿಸಿದ್ದೇನೆ ಅಷ್ಟೇ. ರಾಜ್ಯದ ಅಭಿವದ್ಧಿಯನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ನಾನು ಗ್ಲೋಬಲ್‌ ಸ್ಟಾರ್ಟ್‌ಅಪ್‌ ಇಕೊಸಿಸ್ಟಂ 2024 ವರದಿ ಆಧರಿಸಿ ನಾನು ಲೇಖನವನ್ನು ಬರೆದಿದ್ದೇನೆ. ಕೇರಳವು 18 ತಿಂಗಳಲ್ಲಿ 1.7 ಶತಕೋಟಿ ಅಮೆರಿಕನ್‌ ಡಾಲ್‌ ಹೂಡಿಕೆಯನ್ನು ಆಕರ್ಷಸಿದೆ ಎಂದು ವರದಿಯಲ್ಲಿದೆ. ಅಲ್ಲದೇ ಕೇರಳದಲ್ಲಿನ ಒಟ್ಟಾರೆ ಕೈಗಾರಿಕಾ ವಾತಾವರಣ ಎಂದು ನಂಬುವುದಿಲ್ಲ. ಕೇರಳ ಈಗಲೂ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಶೇ.80 ರಷ್ಟು ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆ ಎಂದು ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಮಾಜಿ ಸಿಎಂ ಉಮ್ನನ್‌ ಚಾಂಡಿ ಅವರು ರಾಜ್ಯದ ಅಡಿಪಾಯ ಹಾಕಿದರು. ಅವರೇ ಸ್ಟಾರ್ಟ್‌ಅಪ್‌ ವಿಲ್ಲೇಜ್‌ ಮತ್ತು ಸ್ಟಾರ್ಟ್‌ಅಪ್‌ ಮಿಷನ್‌ ಸೇರಿದಂತೆ ಅನೇಕ ಉಪಕ್ರಮಗಳನ್ನು ಪ್ರಾರಂಭಿಸಿದು. ಆದರೆ ಈಗಿನ ಸರ್ಕಾರ ಅದನ್ನು ಅಭಿವೃದ್ಧಿ ಪಡಿಸಿ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಸಿದ್ದರಾಮಯ್ಯ ಪೂರ್ಣವಧಿ ಸಿಎಂ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆ ಪರ ಯಂತ್ರೀಂದ್ರ ಬ್ಯಾಟಿಂಗ್‌

ಬೆಳಗಾವಿ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್‌ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…

10 mins ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ಡಿಕೆಶಿ ಆಪ್ತ ಇನಾಯತ್‌ ಅಲಿಗೆ ದಿಲ್ಲಿ ಪೊಲೀಸರಿಂದ ನೋಟಿಸ್‌

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…

29 mins ago

ಇಂಡಿಗೋ ಬಿಕ್ಕಟ್ಟು : ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ : ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು…

37 mins ago

ಜನವರಿಯಿಂದ ಇಂದಿರಾ ಕಿಟ್‌ ವಿತರಣೆ

ಬೆಳಗಾವಿ : ಮುಂಬರುವ ಜನವರಿಯಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ರಾಜ್ಯಾದ್ಯಂತ ಇಂದಿರಾ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು…

1 hour ago

ಲ್ಯಾಂಡ್‌ ಲಾರ್ಡ್‌ ಚಿತ್ರದ ಟೀಸರ್‌ ರಿಲೀಸ್‌

ಬೆಂಗಳೂರು: ನಟ ದುನಿಯಾ ವಿಜಯ್‌ ಅಭಿನಯದ ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ನಟ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದು, ಇಂದು ಸಿನಿಮಾದ…

1 hour ago

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು.!

ಬೆಳಗಾವಿ: ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಮಸ್ಯೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಪ್ರಾಥಮಿಕ…

2 hours ago