ನವದೆಹಲಿ: 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಅಗ್ನಿಶಾಮಕ, ನಾಗರೀಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗೆ ವಿವಿಧ ಶೌರ್ಯ ಹಾಗೂ ಸೇವಾ ಪದಕಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ಸರ್ಕಾರವೂ ಇಂದು(ಜನವರಿ.25) ಅಧಿಕೃತವಾಗಿ ಘೋಷಣೆ ಹೊರಡಿಸಿದ್ದು, ಇದರಲ್ಲಿ 95 ಶೌರ್ಯ ಪ್ರಶಸ್ತಿಗಳಿವೆ. ಅಲ್ಲದೇ ಪದಕ ಪುರಸ್ಕೃತರಲ್ಲಿ ವೈಯಕ್ತಿಕ ಸಿಬ್ಬಂದಿ, ಅಗ್ನಿಶಾಮಕ, ಹೋಮ್ ಗಾರ್ಡ್ ಹಾಗೂ ನಾಗರೀಕ ಸೇವಾ ಸಿಬ್ಬಂದಿ ಸೇರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಈ ಪ್ರಶಸ್ತಿಯಲ್ಲಿ ತಲಾ 28 ಜನ ಎಡಪಂಥೀಯ ತೀವ್ರಗಾಮಿ ಹೋರಾಟಗಾರರು ಇರುವ ಪ್ರದೇಶದಲ್ಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು. ಈಶಾನ್ಯ ಭಾರತದ ಮೂರು ಜನ ಹಾಗೂ ಉಳಿದ 26 ಜನ ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದೆ.
ಇನ್ನೂ 101 ಜನರಿಗೆ ರಾಷ್ಟ್ರಪತಿ ಪದಕ, 85 ಜನ ಪೊಲೀಸ್ ಸಿಬ್ಬಂದಿ, 5 ಜನ ಅಗ್ನಿಶಾಮಕ ಸಿಬ್ಬಂದಿ, 7 ನಾಗರೀಕ ಸೇವಾ ಸಿಬ್ಬಂದಿ, ಹೋಮ್‌ಗಾರ್ಡ್‌ಗಳು ಹಾಗೂ 4 ಇತರೆ ಸಿಬ್ಬಂದಿಗಳಿದ್ದಾರೆ. ಜೊತೆಗೆ 746 ಸೇವಾ ಪದಕಗಳ ಪೈಕಿ, 37 ಅಗ್ನಿಶಾಮಕ, 39 ನಾಗರೀಕ ರಕ್ಷಣಾ, 634 ಪೊಲೀಸ್, ಹೋಮ್‌ಗಾರ್ಡ್ ಹಾಗೂ 36 ಇತರೆ ಸಿಬ್ಬಂದಿಗಳಿಗೆ ವಿತರಿಸಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಗೋಣಿಕೊಪ್ಪ: ಪಟ್ಟಣದಲ್ಲಿ ಇಂದು ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಧಾರಾಕಾರ ಮಳೆಗೆ ಶಾಲಾ-ಕಾಲೇಜುಗಳ ಮೈದಾನಗಳು ಕೆರೆಯಂತಾಗಿದ್ದು, ಮಕ್ಕಳು…
ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಈ ಮೊದಲು ನಿಗದಿಗೊಳಿಸಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏಪ್ರಿಲ್.18ಕ್ಕೆ ಬದಲಾಗಿ ಏಪ್ರಿಲ್.15ರಂದೇ…
ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶ್ಯಾಂಪು ಬಳಕೆಗೆ ನಿಷೇಧ ವಿಧಿಸಲಾಗಿದೆ. ಅಂತರಗಂಗೆಯ 500…
ಮಡಿಕೇರಿ: ಫ್ರೆಂಡ್ಸ್ ಹುಲಿತಾಳ ಇವರ ವತಿಯಿಂದ ಪ್ರಥಮ ವರ್ಷದ ಹುಳಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಮಾರ್ಚ್ 21,22,23ರಂದು ಮಡಿಕೇರಿಯ…
ಬೆಂಗಳೂರು: 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು. ನೀವು ಬ್ರಿಟಿಷರ ಏಜೆಂಟರು ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಈ…
ಪಿರಿಯಾಪಟ್ಟಣ: ನಿತ್ಯ ಮನೆ ಕೆಲಸ, ಕೃಷಿ ಕೆಲಸದಲ್ಲಿಯೇ ಸಂಪೂರ್ಣ ಸಮಯ ಕಳೆಯುತ್ತಿದ್ದ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳಂತೆ ಸಂಭ್ರಮಿಸಿದ್ದಾರೆ.…