ದೇಶ- ವಿದೇಶ

ನಾಮಪತ್ರ ಸಲ್ಲಿಸಿದ ರಾಹುಲ್‌ ಗಾಂಧಿ; ʼರಾಗಾʼ ಪರ ʼಮೋದಿʼ ವಿರುದ್ಧ ಘೋಷಣೆ.

ವಯನಾಡ್: ಬೃಹತ್‌ ರೋಡ್‌ ಶೋ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು ( ಏಪ್ರಿಲ್‌ 3 ) ನಾಮಪತ್ರ ಸಲ್ಲಿಸಿದರು.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಕೇರಳದ ವಯನಾಡ್ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಹುಲ್‌ ಗಾಂಧಿ ಅವರು ನಾಮಪತ್ರ ಸಲ್ಲಿಸುವ ಮೊದಲು ಕ್ಷೇತ್ರದಾದ್ಯಂತ ಮೆಗಾ ರೋಡ್‌ ಶೋ ನಡೆಸಿದರು. ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಹ ಸಾಥ್‌ ನೀಡಿದರು.

ಹೆಲಿಕಾಪ್ಟರ್‌ ಮೂಲಕ ಇಂದು (ಏಪ್ರಿಲ್‌3) 10:30ಕ್ಕೆ ಕಣ್ಣೂರಿನಿಂದ ವಯಾನಂದ್‌ ಗ್ರಾಮದ ಮುಪ್ಪೈನಾಡ್‌ನಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿದರು. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಹೆಲಿಪ್ಯಾಡ್‌ ಸುತ್ತಮುತ್ತ ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ರೋಡ್‌ಶೋ ಆರಂಭವಾಗುತ್ತಿದ್ದಂತೆ ತೆರೆದ ವಾಹನದಲ್ಲಿ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ಕಾರ್ಯಕರ್ತರತ್ತ ಕೈ ಬೀಸಿದರು.

ರಸ್ತೆ ಬದಿ ನೆರೆದಿದ್ದ ಸಾವಿರಾರು ಜನರು ರಾಹುಲ್‌ ಗಾಂಧಿ ಪರ ಘೋಷಣೆ ಕೂಗಿದರು. ಜೊತೆಗೆ ʼಡೌನ್‌ ಡೌನ್‌ ನರೇಂದ್ರ ಮೋದಿʼ ಅಂತಲೂ ಘೋಷಣೆ ಕೂಗಿದರು.

ಮೆರವಣಿಗೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್‌, ದೀಪಾ ದಾಸ್‌, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಎಐಸಿಸಿ ಉಸ್ತುವಾರಿ ಕನ್ಹಯ್ಯಾ ಕುಮಾರ್‌, ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂ.ಎಂ ಹಾಸನ್‌ ರಾಹುಲ್‌ ಗಾಂಧಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್‌ ಮತ್ತಿತರ ಮುಖಂಡರು ಇದ್ದರು.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ರಾಹುಲ್‌ ಗಾಂಧಿ ಒಟ್ಟು 7,06,367 ಮತ ಗಳಿಸುವ ಮೂಲಕ ಪ್ರತಿಸ್ಪರ್ಥಿ ಸಿಪಿಐ ಅಭ್ಯರ್ಥಿಯನ್ನು ಸೋಲಿಸಿದರು. ಕೇರಳದ ವಯನಾಡ್‌ ಕ್ಷೇತ್ರಕ್ಕೂ ಏಪ್ರಿಲ್‌ 26 ರಂದು ಚುನಾವಣೆ ನಡೆಯಲಿದೆ.

andolana

Recent Posts

ಹಂಗಾಮಿ ನೌಕರರ ಬದುಕಿಗೆ ಭದ್ರತೆ ನೀಡಿದ ಮಂಡ್ಯ ಜಿಪಂ

ಬಿ.ಟಿ.ಮೋಹನ್‌ಕುಮಾರ್ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯಿತಿಗಳಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಾ, ನಮ್ಮ ಹಳ್ಳಿಗಳ ಪ್ರತಿ…

3 mins ago

ಶ್ರೀಕಂಠನ ಸನ್ನಿಧಿಯಲ್ಲಿ ವ್ಯಾಪಾರೀಕರಣವಾದ ಶಿವರಾತ್ರಿ ಜಾಗರಣೆ

ಎಸ್.ಎಸ್.ಭಟ್ ಈ ಬಾರಿ ೫೦ ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧವಾಗಿರುವುದಕ್ಕೆ ಭಕ್ತರ ಆಕ್ರೋಶ ನಂಜನಗೂಡು: ಶಿವರಾತ್ರಿಯ ಮುನ್ನಾ…

9 mins ago

ಪರವಾನಗಿ ಅಮಾನತ್ತು : ನಾಲ್ವರ ವಿರುದ್ಧ ಶಿಸ್ತು ಕ್ರಮ

ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…

9 hours ago

ಸಿ.ಟಿ.ರವಿ ಯಾವ ಕಡೆಯಿಂದಲೂ ಒಳಗೆ ಬರತಕ್ಕದ್ದಲ್ಲ : ಚೀಫ್ ಮಾರ್ಷಲ್​​ಗೆ ಸಭಾಪತಿ ಸೂಚನೆ

ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…

9 hours ago

ಮಂಡ್ಯ | 60 ಲಕ್ಷ ಲಂಚಕ್ಕೆ ಬೇಡಿಕೆ ; ಅಬಕಾರಿ ಉಪ ಆಯುಕ್ತ ಅಮಾನತು

ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…

10 hours ago