ನವದೆಹಲಿ: ದೇಶದಾದ್ಯಂತ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಟರ್‌ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, 2025ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಹಾಗೂ ಸಮೃದ್ಧಿಯನ್ನು ತರಲಿ. ಈ ಸಂದರ್ಭದಲ್ಲಿ ಭಾರತ ಹಾಗೂ ವಿಶ್ವಕ್ಕೆ ಉಜ್ವಲ, ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವೀಟ್ ಮಾಡಿದ್ದು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಅಂತ್ಯವಿಲ್ಲದ ಸಂತೋಷವನ್ನು ತರಲಿ. ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಸಮೃದ್ಧಿ ಲಭಿಸಲಿ ಎಂದು ತಿಳಿಸಿದ್ದಾರೆ.
2025ರ ವರ್ಷ ನಿಮ್ಮ ಪಾಲಿಗೆ ಭರವಸೆ, ಸಂತೋಷ ಮತ್ತು ಬಹಳಷ್ಟು ಯಶಸ್ಸಿನಿಂದ ಕೂಡಿರಲಿ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸಿಗುವಂತಾಗಲಿ ಎಂದು ಆಸಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಸಂತೋಷ ತರಲಿ ಎಂದು ಆಶಿಸುತ್ತೇವೆ ಎಂದು ಜನತೆಗೆ ಶುಭಾಶಯ ಕೋರಿದ್ದಾರೆ.
ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪ್ರತೀಕಾರಿ ದಾಳಿಗಳನ್ನು ಕಂಡು "ನಾವು ನಿಜಕ್ಕೂ ಆಘಾತಗೊಂಡಿದ್ದೇವೆ" ಎಂದು…
ವಾಷಿಂಗ್ಟನ್ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್ ಜಲಸಂಧಿಯ ಮೂಲಕ…
ಮಂಚೇಗೌಡನಕೊಪ್ಪಲಿನ ಸ್ಮಶಾನ ಸರಿಪಡಿಸಲು ನಿವಾಸಿಗಳ ಆಗ್ರಹ ಎಚ್. ಎಸ್. ದಿನೇಶ್‌ಕುಮಾರ್ ಮೈಸೂರು : ದುರ್ವಾಸನೆ ಬೀರುವ ಶೌಚಾಲಯ.., ಎಲ್ಲೆಂದರಲ್ಲಿ ಹರಡಿಕೊಂಡಿರುವ…
ಮೈಸೂರಿನ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ರಾತ್ರಿಯ ಹೊತ್ತಿನಲ್ಲಿ ಒಂದೇ ಸಮನೆ ಬೊಗಳುತ್ತಿರುತ್ತವೆ. ದ್ವಿಚಕ್ರವಾಹನ…
ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ಅಡವಿ ಮಠದ ಸಮೀಪವಿರುವ…
ಬೇಸಿಗೆ ಆರಂಭವಾಗುವುದೇ ತಡ ಪ್ರತಿಯೊಬ್ಬರಿಗೂ ಬಾಯಾರಿಕೆ ಹೆಚ್ಚಾಗಿ, ಜಾಸ್ತಿ ನೀರು ಕುಡಿಯಬೇಕಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಎಂತಹವರಿಗೂ ವಿವಿಧ ರೀತಿಯ…