ನವದೆಹಲಿ: ಪುರಾತನ ಮುತ್ತಿನ ನಗರಿಯೊಂದು ಪತ್ತೆಯಾಗಿರುವುದಾಗಿ ಪುರಾತತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ.
ತನ್ನ ಮುತ್ತಿನ ಉದ್ಯಮಕ್ಕೆ ಹಸರುವಾಸಿಯಾಗಿದ್ದ ಪುರಾತನ ನಗರವಾದ ತುವಾಯ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕರಾವಳಿಯಲ್ಲಿ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯಾದ ಉಮ್-ಅಲ್-ಕ್ವಿನ್ ಪ್ರಕಾರ ಪುರಾತನ ಕಾಲದ ಕಟ್ಟಡಗಳನ್ನು ನಗರದಲ್ಲಿ ಶಾಸ್ತ್ರಜ್ಞರು ಪತ್ತೆಹಚ್ಚಿದ್ದು, ಇದು ತುವಾಯ್‌ನ ಐತಿಹಾಸಿಕ ನಗರದ ಭಾಗವಾಗಿತ್ತು ಎಂದು ತಿಳಿಸಿದ್ದಾರೆ.
ತುವಾಯ್ ನಗರವು ಐತಿಹಾಸಿಕವಾಗಿ ದಾಖಲಾಗಿದ್ದರೂ ಸ್ಥಳದ ಬಗ್ಗೆ ಈ ಹಿಂದೆ ಮಾಹಿತಿ ಇರಲಿಲ್ಲ. ಯುಎಇಯಲ್ಲಿ ಈ ಕಟ್ಟಡಗಳು ಹಂಚಿಹೋಗಿರಲೂಬಹುದು ಎಂದು ಸಂಶೋಧಕರು ತಿಳಿಸಿದ್ದು, ಸಿನಿಯಾಹ್ ದ್ವೀಪದಲ್ಲಿನ ಇತ್ತೀಚಿನ ದ್ವೀಪದಲ್ಲಿನ ಉತ್ಖನನಗಳು ಹಿಂದಿನ ಊಹೆಗಳನ್ನು ತಳ್ಳಿಹಾಕು ಮೂಲಕ ಇದು ನಿಜವಾಗಿಯೂ ತುವಾಯ್‌ನ ಸ್ಥಳವಾಗಿರಬಹುದು ಎಂಬುದಕ್ಕೆ ಬಲವಾದ ಪುರಾವೆಗಳನ್ನು ಒದಗಿಸುತ್ತದೆ.
ಉಮ್-ಅಲ್-ಕ್ವಿನ್‌ನಲ್ಲಿ ಇಟಾಲಿಯನ್ ಪುರಾತತ್ವ ಮಿಷನ್ ಮುನ್ನಡೆಸುವ ಮತ್ತು ಪೊಲೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಮೈಕೆಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ನಿಜವಾಗಿಯೂ ರೋಮಾಂಚನಕಾರಿಯಾಗಿದೆ. ಈ ಸ್ಥಳ ನಂಬಲಾರದಷ್ಟು ಭರವಸೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಮುತ್ತು ಮೀನುಗಾರಿಕೆಗೆ ತುವಾಯ್ ಹೆಸರುವಾಸಿಯಾಗಿದೆ. ತುವಾಯ್‌ನ ಇತಿಹಾಸವು ಕನಿಷ್ಠ ನಾಲ್ಕನೇ ಶತಮಾನಕ್ಕೆ ಹಿಂದಿನದಾಗಿದ್ದು, ಆರನೇ ಶತಮಾನದಲ್ಲಿ ನಗರ ತನ್ನ ಉತ್ತುಂಗವನ್ನು ತಲುಪಿ ಅಭಿವೃದ್ಧಿ ಹೊಂದುತ್ತಿರುವ ಮುತ್ತು ಮೀನುಗಾರಿಗೆ ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳು ತುವಾಯ್ ಅನ್ನು ಕರಾವಳಿ ಪ್ರದೇಶದ ರಾಜಧಾನಿಯಾಗಿ ಅದರ ಮುತ್ತುಗಳಿಗಾಗಿ ಉಲ್ಲೇಖಿಸಲಾಗಿದೆ.
ಆರನೇ ಶತಮಾನದಲ್ಲಿ ಸಿನಿಯಾಹ್ ದ್ವೀಪದಲ್ಲಿ ಇತ್ತೀಚಿನ ಪುರಾತತ್ವ ಶಾಸ್ತ್ರದ ತನಿಖೆಗಳು ಪುರಾತನ ವಸತಿ ಕಟ್ಟಡಗಳನ್ನು ಮಾತ್ರ ಬಹಿರಂಗಪಡಿಸಿಲ್ಲ. ಆದರೆ ಅದೇ ಯುಗದ ಮುತ್ತುಗಳ ಹಳ್ಳಿ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳ ಅವಶೇಷಗಳನ್ನು ಬಹಿರಂಗಪಡಿಸಿವೆ. ಇದು ಸ್ಪಷ್ಟವಾಗಿ ಯಾರೂ ಈ ಹಿಂದೆ ಗುರುತಿಸದ ಮಹತ್ವದ ತಾಣವಾಗಿದೆ.
ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಒಳಗೊಂಡ…
ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…