ದೇಶ- ವಿದೇಶ

ನಿತೀಶ್ ಕುಮಾರ್ ರಾಜೀನಾಮೆ; ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ

ಪಾಟ್ನಾ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುತ್ತಿದೆ.

ಬಿಹಾರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಮಂಗಳವಾರ (ಏಪ್ರಿಲ್ 14) ಮುಖ್ಯಮಂತ್ರಿ ಪದವಿಯಿಂದ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತುತ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿರುವ ಸಾಮ್ರಾಟ್ ಚೌಧರಿ ಅವರನ್ನು ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಬುಧವಾರ(ಏ.15)ಬಿಹಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಹೊಸ ಮುಖ್ಯಮಂತ್ರಿಯ ಜೊತೆಗೆ, ಇಬ್ಬರು ಶಾಸಕರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಂದೋಲನ ಡೆಸ್ಕ್

Recent Posts

ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…

22 mins ago

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…

42 mins ago

ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…

46 mins ago

ಕಾಡಾನೆ ದಾಳಿ: ರೈತ ಸಾವು

ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…

1 hour ago

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

4 hours ago

ಓದುಗರ ಪತ್ರ: ಶೇ. ೭.೫ರಷ್ಟು ಮೀಸಲಾತಿ: ಜನ ಮೆಚ್ಚುವ ನಿರ್ಧಾರ

ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ…

5 hours ago