ಹೈದರಾಬಾದ್: ಖ್ಯಾತ ಕವಿ ಅಂದೇ ಅವರು ಬರೆದಿರುವ “ಜಯ ಜಯ ಹೇ ತೆಲಂಗಾಣ” ಗೀತೆಯನ್ನು ರಾಜ್ಯಗೀತೆಯನ್ನಾಗಿ ಅನುಮೋದಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
ಜೂನ್.2ರಂದು ರಾಜ್ಯ ರಚನಾ ದಿನವಾಗಿದ್ದು, ಈ ಸಂಬಂಧ ಅದ್ಧೂರಿ ಆಚರಣೆ ವೇಳೆ ರಾಜ್ಯಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಗುರುವಾರ ತಡರಾತ್ರಿ ತೆಲಂಗಾಣ ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
20ವರ್ಷಗಳ ಹಿಂದೆ ಅಂದೇ ಶ್ರೀ ಅವರು ಈ ಗೀತೆಯನ್ನು ರಚನೆ ಮಾಡಿದ್ದರು. ಈ ಗೀತೆಯಲ್ಲಿ ಯಾವುದೇ ಬದಲಾವಣೆಯನ್ನು ಸಹಾ ಮಾಡದೇ ರಾಜ್ಯಗೀತೆಯನ್ನಾಗಿ ಸ್ವೀಕರಿಸಲಾಗಿದೆ. ಮತ್ತು ಈ ಹಾಡಿಗೆ ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಹೇಳಿದೆ.
ರಾಜ್ಯಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಮೊದಲ ಆವೃತ್ತಿ ಎರಡೂವರೆ ನಿಮಿಷಗಳ ವರೆಗೆ ಇರುತ್ತದೆ. ಎರಡನೇ ಆವೃತ್ತಿ ಸೇರಿದಂತೆ ಪೂರ್ಣ ಹದಿಮೂರು ನಿಮಿಷಗಳ ವರೆಗೆ ನಿರೂಪಣೆಯಿದೆ. ಮತ್ತು ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುವುದು. ಎರಡು ಆವೃತ್ತಿಗಳನ್ನು ರಾಜ್ಯ ಗೀತೆಯನ್ನಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…