ದೇಶ- ವಿದೇಶ

ನೇಪಾಳ ದುರಂತ | ಮೃತದೇಹದ ಮೇಲಿದ್ದ ಚಿನ್ನ ಕಳವು ; ಇಬ್ಬರು ಆರೋಪಿಗಳ ಬಂಧನ

ಎಚ್ಚೆತ್ತ ಪೊಲೀಸ್ ಆಡಳಿತ ; ಇಬ್ಬರು ಆರೋಪಿಗಳ ಬಂಧನ

ಕಠ್ಮಂಡು : ನೇಪಾಳದಲ್ಲಿ ಸಂಭವಿಸಿರುವ ಭೀಕರ ಮಹಾಪೂರ ಹಾಗೂ ಭೂಕುಸಿತದಿಂದಾಗಿ ನೂರಾರು ಜನ ಜೀವ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಕರುಣಾಜನಕ ಹಾಗೂ ನೋವಿನ ಪರಿಸ್ಥಿತಿಯಲ್ಲೂ ಕೆಲವರು ತಮ್ಮ ಕ್ರೂರ ಮನಸ್ಥಿತಿಯನ್ನು ಮೆರೆದಿದ್ದಾರೆ.

ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮೃತದೇಹದ ಮೇಲಿದ್ದ ಆಭರಣಗಳನ್ನು ಕಳವು ಮಾಡುವ ಮೂಲಕ ಅಮಾನವೀಯತೆಯ ಪರಮಾವಧಿ ಮೆರೆದಿರುವ ಕೃತ್ಯವೊಂದು ಕ್ಯಾಮೆರಾಗೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನೇಪಾಳದ ನದಿ ತೀರದಲ್ಲಿ ಪ್ರವಾಹದ ಅಬ್ಬರಕ್ಕೆ ಸಿಲುಕಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹ ತೇಲಿಬಂದಿತ್ತು. ಈ ವೇಳೆ ಸ್ಥಳದಲ್ಲಿದ್ದ ಕೆಲಕಾಲ ಕರುಣೆ ತೋರುವಂತೆ ನಟಿಸಿದ ವ್ಯಕ್ತಿಗಳು, ವಾಸ್ತವದಲ್ಲಿ ಮೃತದೇಹದ ಜೊತೆ ವಿಕೃತವಾಗಿ ವರ್ತಿಸಿದ್ದಾರೆ.

ಕೂದಲು ಹಿಡಿದು ಎಳೆದ ವಿಕೃತಿ:
ಪ್ರವಾಹದಲ್ಲಿ ತೇಲಿಬಂದ ಮಹಿಳೆಯ ಮೃತದೇಹವನ್ನು ದಡಕ್ಕೆ ಸೇರಿಸುವ ನೆಪದಲ್ಲಿ, ಆಕೆಯ ತಲೆಯ ಕೂದಲನ್ನು ಹಿಡಿದು ಬಲವಂತವಾಗಿ ಎಳೆದುಕೊಂಡು ಬರಲಾಗಿದೆ.

ಆಭರಣ ಕಳವು:
ಅಸಹಾಯಕ ಸ್ಥಿತಿಯಲ್ಲಿದ್ದ ಮೃತದೇಹದ ಕಿವಿಯಲ್ಲಿದ್ದ ಸೋಂಬಿನ/ಚಿನ್ನದ ಓಲೆಗಳನ್ನು ಕೀಳಲು ಈ ನೀಚರು ಈ ಕೃತ್ಯ ಎಸೆಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ

ಮೂಕಪ್ರೇಕ್ಷಕರಾದ ಜನ:
ಈ ಅಮಾನವೀಯ ಕೃತ್ಯ ನಡೆಯುತ್ತಿದ್ದರೂ, ಸುತ್ತಮುತ್ತಲಿನಲ್ಲಿ ನಿಂತಿದ್ದ ಕೆಲವರು ಇದನ್ನು ತಡೆಯುವ ಬದಲು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ವೀಡಿಯೋ ಚಿತ್ರೀಕರಿಸುತ್ತಾ ನಿಂತಿರುವುದು ಮತ್ತಷ್ಟು ಆಘಾತಕಾರಿ ಸಂಗತಿಯಾಗಿದೆ.

ಎಚ್ಚೆತ್ತ ಪೊಲೀಸ್ ಆಡಳಿತ : ಇಬ್ಬರು ಆರೋಪಿಗಳ ಬಂಧನ
ಈ ಅಸಹ್ಯಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹಬ್ಬುತ್ತಿದ್ದಂತೆ ನೇಪಾಳ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ವಿಡಿಯೋ ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಮೃತಳ ಕಿವಿಯೋಲೆ ಕಳವಿಗೆ ಯತ್ನಿಸಿದ ಪಾಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಪ್ರಕೃತಿ ವಿಕೋಪದಂತಹ ದಾರುಣ ಸಂದರ್ಭದಲ್ಲೂ ಮಾನವೀಯತೆಯನ್ನು ಮರೆತು ಸತ್ತವರ ಮೇಲೂ ಕಣ್ಣಿಡುವ ಇಂತಹ ವಿಕೃತಿಗಳಿಗೆ ಕಾನೂನಿನ ಮೂಲಕ ತಕ್ಕ ಶಾಸ್ತಿ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ತೀವ್ರ ಒತ್ತಡ ಕೇಳಿಬಂದಿದೆ.

ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ನಟ ರವಿಚಂದ್ರನ್‌ ಚಾಲನೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…

12 hours ago

ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…

13 hours ago

ಮತದಾರರ ಹೆಸರು ಡಿಲೀಟ್‌ ವಿವಾದ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್‌ ಗಾಂಧಿ ಹಾಗೂ ‘ಇಂಡಿಯಾ’…

14 hours ago

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…

16 hours ago

ರೇಣುಕಾಸ್ವಾಮಿಯ ಹೆಣ ಬಿಸಾಡಲು ಜಾಗ ಹುಡುಕಾಟ

ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…

16 hours ago

ನೋಟಿನ ಕಂತೆಗಳನ್ನು ತಂದಿಟ್ಟ ದರ್ಶನ್

ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…

16 hours ago