ಮಧ್ಯಪ್ರದೇಶ: ಹೆಂಡತಿಯನ್ನು ಚುಡಾಯಿಸಿದ ಎಂದು ಆರೋಪಿಸಿ ವೃದ್ಧ ದಲಿತ ದಂಪತಿಗಳ ಮೇಲೆ ಹಲ್ಲೆ ಮಾಡಿ, ಶೂಗಳ ಹಾರ ಹಾಕಿಸಿರುವ ಘಟನೆ ಮಧ್ಯಪ್ರದೇಶದ ಅಶೋಕನಗರದಲ್ಲಿ ನಡೆದಿದೆ.
ಮುಂಗೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲೋರಾ ಹಳ್ಳಿಯಲ್ಲಿ ಶನಿವಾರ ಸಂಜೆ(ಮೇ.18) ಈ ಘಟನೆ ನಡೆದಿದ್ದು, ಈ ಬಗ್ಗೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ದ ದಂಪತಿಯ ಮಗ ಆರೋಪಿಗಳಲ್ಲಿ ಒಬ್ಬನ ಹೆಂಡತಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, 65 ವರ್ಷದ ದಲಿತ ವ್ಯಕ್ತಿ ಮತ್ತು ಆತನ ಹೆಂಡತಿ 60 ವರ್ಷದ ಪತ್ನಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಬಳಿಕ ದಲಿತ ಕುಟುಂಬ ಊರು ತೊರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಶನಿವಾರ(ಮೇ.18) ೧೦ ಮಂದಿ ವಿರುದ್ಧ ಐಪಿಸಿ ಸೆಕ್ಸನ್ ೧೪೭(ಗಲಭೆ) ಹಾಗೂ ಎಸ್ಪಿ, ಎಸ್ಟಿ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಯುಗಾದಿ ಎಂದರೆ ಭಾರತೀಯರಿಗೆ ಹಿಂದೂ ಸಂಪ್ರದಾಯದಂತೆ ಹೊಸವರ್ಷ ಎಂಬುದು ಪ್ರತೀತಿ ಯುಗಾದಿಯ…
ನವದೆಹಲಿ: ಜಾಗತಿಕ ರಾಜಕೀಯ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ…
ಮೈಸೂರು: ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ಹೊಸತೊಡಕಿನ ಸಂಭ್ರಮ ಮನೆಮಾಡಿದ್ದು, ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಯುಗಾದಿ ಹಾಗೂ…
ಹಾಸನ: ಹಣಕಾಸು ವಿಚಾರಕ್ಕೆ ಯುವಕನನ್ನು ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರುಣ್ ಎಂಬಾತನೇ…
ಜೆರುಸೇಲಂ: ಯುದ್ಧದಲ್ಲಿ ನಾವು ಗೆಲುವು ಸಾಧಿಸುತ್ತಿದ್ದು, ಇರಾನ್ ತೀವ್ರ ಹಾನಿಗೊಳಗಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಸಾವಿನ…
ಕಾಂತಾರ ಚಾಪ್ಟರ್ 1 ಯಶಸ್ಸಿನಲ್ಲಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಯುಗಾದಿ ದಿನವೇ ಅಧ್ಯಾಯ ಎರಡು ಇಲ್ಲಿಂದ ಶುರು…