ದೇಶ- ವಿದೇಶ

ಕರ್ನೂಲ್‌ ಖಾಸಗಿ ಬಸ್‌ ಅಗ್ನಿ ದುರಂತ ಪ್ರಕರಣ: ನಕಲಿ ಅಂಕಪಟ್ಟಿ ನೀಡಿ ಡಿಎಲ್‌ ಪಡೆದಿದ್ದ ಚಾಲಕ ಅರೆಸ್ಟ್‌

ಆಂಧ್ರಪ್ರದೇಶ: ಕರ್ನೂಲ್‌ ಖಾಸಗಿ ಬಸ್‌ ಅಗ್ನಿ ದುರಂತದಲ್ಲಿ 20 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಚಾಲಕ ಲಕ್ಷ್ಮಯ್ಯ ಪಲ್ಯಾಡ್‌ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಈತ ನಕಲಿ ಅಂಕಪಟ್ಟಿ ನೀಡಿ ಡ್ರೈವಿಂಗ್‌ ಲೈಸೆನ್ಸ್‌ ಪಡೆದಿದ್ದನು ಎನ್ನಲಾಗಿದೆ.

10ನೇ ತರಗತಿ ಪಾಸ್‌ ಆಗಿರುವ ನಕಲಿ ಅಂಕಪಟ್ಟಿ ಸಲ್ಲಿಸಿ ಡಿಎಲ್‌ ಪಡೆದಿದ್ದನು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಬಸ್‌ ಚಾಲಕನನ್ನು ಬಂಧಿಸಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಇದನ್ನು ಓದಿ: ಕರ್ನೂಲ್‌ ಬಸ್‌ ದುರಂತ : 11 ಜನರ ಗುರುತು ಪತ್ತೆ..

ಪ್ರಕರಣದ ಹಿನ್ನೆಲೆ: ಕರ್ನೂಲ್‌ ಬಳಿ ಬಸ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್‌ ಹೊತ್ತಿ ಉರಿದಿದ್ದು, 19 ಪ್ರಯಾಣಿಕರು ಸಜೀವ ದಹನವಾಗಿದ್ದರು. 12 ಜನರು ಗಂಭೀರ ಗಾಯಗೊಂಡಿದ್ದಾರೆ.

ದುರಂತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ಆಂಧ್ರಪ್ರದೇಶ ಸಾರಿಗೆ ಸಂಸ್ಥೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಗಾಯಾಳುಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ಆಂದೋಲನ ಡೆಸ್ಕ್

Recent Posts

ಎಲ್‌ಪಿಜಿ ಸಿಲಿಂಡರ್‌ ಸಿಗುತ್ತದೆ, ಜನರಲ್ಲಿ ಭೀತಿ ಬೇಡ : ಕೇಂದ್ರ

ಹೊಸದಿಲ್ಲಿ : ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಉದಿಸಿದ ಆತಂಕದ ನಡುವೆ, ಕೇಂದ್ರ ಸರ್ಕಾರವು…

2 hours ago

IPL 2026 | ಮಾ.28ರಿಂದ ಪಂದ್ಯ ಆರಂಭ, ಬೆಂಗಳೂರಿನಲ್ಲಿ ಉದ್ಘಾಟನೆ, ಹೀಗಿದೆ ವೇಳಾಪಟ್ಟಿ

ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು…

2 hours ago

“ಸಂಶೋಧನೆಗೆ AI ನಿಂದಲ್ಲ, ಸ್ವಂತಿಕೆಯಿಂದ ಕೂಡಿರಲಿ” : ಕುಲಪತಿ ಶರಣಪ್ಪ ಹಲಸೆ ಸಲಹೆ

ಮೈಸೂರು : ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ…

2 hours ago

ಖಾತೆ ಮಾಡಿಕೊಡದ ಅಧಿಕಾರಿಗಳು : ರೈತನಿಂದ ವಿಷ ಸೇವನೆ ಯತ್ನ

ಸಾಲಿಗ್ರಾಮ : ತನ್ನ ಜಮೀನಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಕೊಡದೆ ಸಾಲಿಗ್ರಾಮ ನಾಡಕಚೇರಿ ಅವರು ಸತಾಯಿಸುತ್ತಿದ್ದಾರೆ ಎಂದು ಮನನೊಂದು ಸಾಲಿಗ್ರಾಮದ ನಾಡ…

2 hours ago

ಹಡುಗುಗಳ ಮೇಲೆ ದಾಳಿ : ಇಬ್ಬರು ಭಾರತೀಯರ ಸಾವು

ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…

3 hours ago

ಗುಂಡ್ಲುಪೇಟೆ | ಕತ್ತು ಕೂಯ್ದು ವ್ಯಕ್ತಿಯ ಬರ್ಬರ ಹತ್ಯೆ

ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…

3 hours ago