ಕೇರಳ: ಮೆದುಳು ತಿನ್ನುವ ವಿಚಿತ್ರ ಸೂಕ್ಷ್ಮಾಣು ಜೀವಿಗೆ ಕೇರಳದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.
ಮಲಪ್ಪುರಂನ ಮೂಲದ ಬಾಲಕ ತೀವ್ರ ಅಸ್ವಸ್ಥತೆಯಿಂದ ನರಳುತ್ತಿದ್ದ ಕೇರಳದ ಕೋಳಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು,ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿದ್ದಾನೆ.
ಇದೊಂದು ನೀರಿನಿಂದ ಹರಡುವ ಸೋಂಕಾಗಿದ್ದು, ಈ ಸೋಂಕಿಗೆ ಒಳಗಾದವರು ಕೇವಲ ಐದು ದಿನಗಳ ಒಳಗಾಗಿ ಕೊನೆಯುಸಿರೆಳೆಯುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಲಪ್ಪುರಂ ಕೆರೆಯೊಂದರಲ್ಲಿ ಸ್ಥಳೀಯ ಬಾಲಕ ಈಜಾಡಿದ್ದಾನೆ. ಈ ವೇಳೆ ವೈರಸ್ ಬಾಲಕನ ದೇಹ ಪ್ರವೇಶಿಸಿದೆ. ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೇ ತಿಂಗಳಿನಿಂದಾಚೆಗೆ ಈ ರೀತಿಯ ಸಾವು ನೋವುಗಳು ಪದೇ ಪದೇ ಸಂಭವಿಸುತ್ತಿದ್ದವು. ಕಳೆದ ಒಂದು ತಿಂಗಳಿನಲ್ಲಿಯೇ ಈ ರೀತಿಯಾಗಿ ಸಂಭವಿಸಿದ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ನೀರಿನ ಮೂಲಕ ಮನುಷ್ಯನ ದೇಹ ಒಕ್ಕುವ ಈ ವೈರಾಣು ಮೂಗಿನ ಮೂಲಕ ನೇರವಾಗಿ ಮೆದುಳನ್ನು ಪ್ರವೇಶಿಸುತ್ತದೆ. ಮೆದುಳಿನ ಜೀವಕೋಶದ ಮೇಲೆ ನೇರವಾಗಿ ದಾಳಿ ಮಾಡುವ ಈ ವೈರಾಣು ಕ್ರಮೇಣ ಇದರಿಂದಾಗಿ ಅಮೀಬಾಯಿಕ್ ಮೆನಿನ್ ಜೋ ಎನ್ ಕೆಫಾಲಿಟೀಸ್ ಎಂಬ ಕಾಯಿಲೆಗೆ ತುತ್ತಾಗಿ ರೋಗಿ ಸಾವನ್ನಪ್ಪುತ್ತಾನೆ.
ಈ ಬಗ್ಗೆ ಜಾಗೃತಿ ವಹಿಸಲು ಕೆರೆ, ನದಿ ಹಾಗೂ ಕೊಳಗಳಲ್ಲಿ ಈಜಾಡುವುದರಿಂದ ದೂರ ಉಳಿದರೆ ಈ ಸಮಸ್ಯೆ ಬಾರದಂತೆ ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…