ದೇಶ- ವಿದೇಶ

ಚುನಾವಣೆಯಲ್ಲಿ ಸ್ಪರ್ಧಿಸುವಾಗ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಚರ್ಚಿಸಬೇಕು: ಕಪಿಲ್‌ ಸಿಬಲ್‌

ನವದೆಹಲಿ: ಇಂಡಿಯಾ ಮೈತ್ರಿಕೂಟದ ಪಕ್ಷಗಳು ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಬೇಕು ಎಂಬುದನ್ನು ಕುಳಿತು ತೀರ್ಮಾನಿಸಬೇಕು. ಆ ಮಾತ್ರ ಮೈತ್ರಿಯಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಲು ಸಾಧ್ಯ ಎಂದು ಸಂಸದ ಕಪಿಲ್‌ ಸಿಬಲ್‌ ಸಲಹೆ ನೀಡಿದ್ದಾರೆ.

ಇಂದು(ಫೆಬ್ರವರಿ.11) ಇತ್ತೀಚಿನ ಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಹೀನಾಯವಾಗಿ ಸೋಲು ಅನುಭವಿಸುತ್ತಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದಲ್ಲಿನ ಗೊಂದಲವೂ ಬಿಜೆಪಿಗೆ ಲಾಭ ಮಾಡಿಕೊಡುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ಒಮ್ಮತದಿಂದ ಎಲ್ಲಾ ಪಕ್ಷಗಳನ್ನು ಪ್ರಯತ್ನಿಸುತ್ತದೆ. ಆದರೆ ಇದೇ ನಿರ್ಧಾರ ಕಾಂಗ್ರೆಸ್‌ ಪಕ್ಷ ಕೆಲವೊಂದು ಬಾರಿ ಮುಳುವಾಗುತ್ತದೆ ಎಂದರು.

ಬಿಹಾರದ ಆರ್‌ಜೆಡಿ ವರದಿ ನೀಡಿರುವ ಪ್ರಕಾರ, ಬಿಹಾರ ವಿಧಾನಸಭೆ ಚುನಾವಣೆಯ ವೇಳೆ ನಿರೀಕ್ಷಿಸದ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ನಮ್ಮ ಪಕ್ಷಕ್ಕೆ ಕಾಂಗ್ರೆಸ್‌ನಿಂದಲೇ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್‌ ವಿರುದ್ಧ ಗೋವಾ, ಹರಿಯಾಣ, ಗುಜರಾತ್‌ ಹಾಗೂ ಇತರ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗ ಅರವಿಂದ ಕೇಜ್ರಿವಾಲ್‌ ಅವರಿಗೂ ಇದೇ ರೀತಿ ಪ್ರಶ್ನೆ ಕೇಳಬೇಕಿತ್ತು ಎಂದು ಹೇಳಿದರು.

ಇನ್ನೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ಮೈತ್ರಿ ಯಶಸ್ವಿಯಾಗಿತ್ತು. ತಮಿಳುನಾಡಿನಲ್ಲಿಯೂ ಇದು ಯಶಸ್ಸು ಕಂಡಿತ್ತು. ಹಾಗಾಗಿ ದೇಶದಲ್ಲಿ ಮುಂದಿನ ಚುನಾವಣೆಗಳು ಬಂದಾಗ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಹೇಗೆ ಮುಂದುವರಿಯಬೇಕು ಎಂಬುದನ್ನು ಚರ್ಚಿಸಬೇಕು. ಜೊತೆಗೆ ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಸೇರಿ ಎಲ್ಲರೂ ನಿರ್ಧರಿಸಬೇಕು. ಇಲ್ಲವಾದರೆ ಇದರ ಲಾಭವನ್ನು ಬಿಜೆಪಿ ಪಕ್ಷ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.

ಅರ್ಚನ ಎಸ್‌ ಎಸ್

Recent Posts

ಪಿಎನ್‌ಜಿ ಬಳಕೆದಾರರಿಗೆ ಎಚ್ಚರಿಕೆ

ಹೆಚ್.ಎಸ್.ದಿನೇಶ್‌ಕುಮಾರ್ ಸಿಲಿಂಡರ್ ಹಿಂತಿರುಗಿಸದಿದ್ದರೆ ಎಫ್ಐಆರ್ ದಾಖಲು ಸಿಲಿಂಡರ್‌ಗಳ ಕಾಳಸಂತೆ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ; ೫ಕೆಜಿ ಸಿಲಿಂಡರ್‌ಗೂ ಇನ್ನು ಮುಂದೆ…

3 mins ago

120 ಕಿಮೀ ಯುಜಿ ಕೇಬಲ್ ಅಳವಡಿಕೆಗೆ 400 ಗುಂಡಿ

ಕೆ.ಬಿ.ರಮೇಶನಾಯಕ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣಕ್ಕೆ ಮಂಜೂರಾದ ೪೦೦ ಕೋಟಿ ರೂ.ಅನುದಾನದಲ್ಲಿ ೯೦ ಕೋಟಿರೂ. ಯುಜಿಡಿ, ನೀರಿನ ಪೈಪ್‌ಲೇನ್‌ಗೆ ಮೀಸಲು…

8 mins ago

ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರು ಕಂಗಾಲು

ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…

14 hours ago

ಹನೂರು| ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಳೆ ನಾಶ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…

14 hours ago

ಗುಂಡ್ಲುಪೇಟೆ| ಭಾರೀ ಗಾಳಿ ಮಳೆಗೆ ಬಾಳೆ ಬೆಳೆ ನಾಶ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ‌ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…

14 hours ago