ಮೈಸೂರು: ಮೈಸೂರಿನ ಐರನ್ ಮ್ಯಾನ್ ಖ್ಯಾತಿಯ ಡಾ.ಉಷಾ ಹೆಗ್ಡೆ ವಿಶ್ವದ ಅತಿ ಎತ್ತರದ ಹಿಮ ಪರ್ವತ ಏರುವ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ನಾಗರೀಕ ಮಹಿಳೆ ಎನಿಸಿದ್ದಾರೆ.
52 ವರ್ಷದ ಉಷಾ ಹೆಗ್ಡೆ ಅವರು ಜೆಎಸ್‌ಎಸ್ ಡೆಂಟಲ್ ಕಾಲೇಜಿನ ಪ್ರೊಫೆಸರ್ ಆಗಿದ್ದಾರೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಓದಿದ್ದು, ಮೈಸೂರಿನ ಜೆಎಸ್‌ಎಸ್ ಡೆಂಟಲ್ ಕಾಲೇಜಿನಲ್ಲಿ. ಅದೇ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದುಕೊಂಡು ಹಿಮಾಲಯ ಪರ್ವತ ಏರಿ ಮಹೋನ್ನತ ಸಾಧನೆ ಮಾಡಿದ್ದಾರೆ.
52 ದಿನಗಳ ಕಾಲ ಸುದೀರ್ಘ ಪ್ರವಾಸ ಮಾಡಿ ಬಂದ ಧೀರ ವನಿತೆ ಡಾ.ಉಷಾ ಹೆಗ್ಡೆಯವರ ಪರ್ವಾರೋಹಣ ಮೈನವಿರೇಳಿಸಿದೆ.
ಮೊದಲ ದಿನ ಏಪ್ರಿಲ್.2ರಂದು ಮೈಸೂರಿನಿಂದ ಹೊರಟ ಉಷಾ ಅವರು ವಾಪಸ್ ಬಂದಿದ್ದು ಮೇ.25ರಂದು. ಏಪ್ರಿಲ್ 6ರಿಂದ ಹಿಮಾಲಯ ಚಾರಣ ಆರಂಭಿಸಿದ್ದಾರೆ. ನೇಪಾಳದ ಲುಕ್ಲಾ ಜಾಗದಿಂದ ನಡಿಗೆ ಆರಂಭಿಸಿ ಏಪ್ರಿಲ್ 8ರಂದು ಟ್ರಕ್ಕಿಂಗ್ ಬೇಸ್ ಕ್ಯಾಂಪ್ ರೀಚ್ ಆಗಿದ್ದಾರೆ.
ಒಂದು ರಾತ್ರಿ ಕ್ಯಾಂಪ್‌ನಲ್ಲಿ ಕಳೆದ ಬಳಿಕ ಕ್ಯಾಂಪ್ 2 ತಲುಪಿ ಎರಡು ದಿನ ಕಳೆದಿದ್ದಾರೆ. ನಂತರ 3ನೇ ದಿನ ಎರಡನೇ ಕ್ಯಾಂಪ್‌ನಿಂದ ಹೊರಟು 3ನೇ ಕ್ಯಾಂಪ್‌ನಲ್ಲಿ ಒಂದು ದಿನ ಕಳೆದಿದ್ದಾರೆ. ನಂತರ ಕ್ಯಾಂಪ್ 4ಕ್ಕೆ ತಲುಪಿ 3 ಗಂಟೆ ಅಲ್ಲೇ ತಂಗಿದ ಬಳಿದ ರಾತ್ರಿಯಿಡೀ ನಡೆದು ಮೇ.19 ಬೆಳಿಗ್ಗೆ 6.10ಕ್ಕೆ ತುದಿ ತಲುಪಿದ್ದಾರೆ.
ಇದಕ್ಕಾಗಿ ಎಡು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದ ಡಾ.ಉಷಾ ಹೆಗ್ಡೆ ಅವರು, ಈ ಮೊದಲು ದೇಶದ ಇತರ ಸ್ಥಳಗಳಲ್ಲಿ ಪರ್ವತ ಹತ್ತಿ ತಯಾರಿ ನಡೆಸಿದ್ದರು.
ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…
ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…
ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…
ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…
ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಿಎಂ ಡಿ.ಕೆ.ಶಿವಕುಮಾರ್…
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…