ಟೆಹರಾನ್: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಪರಿಣಾಮ ಇದೀಗ ಇರಾನ್ ಕೂಡ ಪ್ರತೀಕಾರವಾಗಿ ಇಸ್ರೇಲ್ ಅಮೆರಿಕಾ ಮೇಲೆ ದಾಳಿ ನಡೆಸುತ್ತಿದೆ. ಈ ರಾಷ್ಟ್ರಗಳ ಸಂಘರ್ಷದಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿ ತೈಲ ಉತ್ಪಾದನೆ, ಮತ್ತು ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿ ತೈಲ ಬೆಲೆ ಏರಿಕೆ ಆಗಬಹುದು. ಇನ್ನು ಭಾರತದ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಿ ಬಂಗಾರ ಬೆಳ್ಳಿ ಬೆಲೆಯಲ್ಲಿ ಸಹ ಏರಿಕೆ ಆಗಬಹುದು ಎಂದು ಚರ್ಚೆ ಆಗುತ್ತಿದೆ.
ಸದ್ಯಕ್ಕೆ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದು ಲಕ್ಷದ ಐವತ್ತು ಸಾವಿರದಿಂದ ಒಂದು ಲಕ್ಷದ ಅರವತ್ತು ಸಾವಿರದವರೆಗೆ ಇದ್ದು, ಬೆಳ್ಳಿ ದರ ಕೆಜಿಗೆ ಎರಡು ಲಕ್ಷ ತೊಂಬತ್ತು ಸಾವಿರ ಇದ್ದು, ಈ ಇರಾನ್ ಇಸ್ರೇಲ್ ಅಮೆರಿಕ ದೇಶಗಳ ಯುದ್ದದ ಪರಿಣಾಮ ಈ ತೈಲ ಬೆಲೆ ಹಾಗೂ ಚಿನ್ನದ ಬೆಲೆ ಏರಿಕೆ ಆಗಬಹುದು ಎಂದು ಹೇಳಲಾಗುತ್ತಿದೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಶಿರಗೋಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ರಥೋತ್ಸವ ಭಾನುವಾರ ಬೆಳಿಗ್ಗೆ…
ಕೊಡಗು: ಆನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮದೆ ಬೆಟ್ಟತ್ತೂರು ಗ್ರಾಮದ ಗಿರೀಶ್ ಎಂಬುವವರ ಪುತ್ರಿ ಪೂಜಾ…
ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟದ ಪಕ್ಷಗಳಿಗೆ ಸೀಟು ಹಂಚಿಕೆ…
ರಾಮನಗರ: ಚನ್ನಪಟ್ಟಣ-ರಾಮನಗರ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದೆ. ಚನ್ನಪಟ್ಟಣದ ಬಿ.ವಿ.ಹಳ್ಳಿ…
ಚಿಕ್ಕಬಳ್ಳಾಪುರ: ಇಸ್ರೇಲ್ ಹಾಗೂ ಅಮೇರಿಕಾ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಖನೇನಿಯ ಮಗಳು,…
ದುಬೈ: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಉದ್ವಿಗ್ನತೆಯು ತಾರಕ್ಕೇರಿರುವುದರಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಈ…