ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯಡಿ(ಸಿಎಎ) ಇದೇ ಮೊದಲ ಬಾರಿಗೆ ೧೪ ಮಂದಿಗೆ ಭಾರತದ ಪೌರತ್ವ ನೀಡಲಾಗಿದೆ.
ಇಂದು(ಮೇ.೧೫) ಸಿಎಎ ಕಾಯ್ದೆಯಡಿ ಮೊಟ್ಟ ಮೊದಲ ಬಾರಿಗೆ ಭಾರತದ ಪೌರತ್ವಗಳಿಸಿರುವ ೧೪ ಮಂದಿಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ವಿತರಿಸಿದೆ. ಆ ಮೂಲಕ ಕೇಂದ್ರ ಸರ್ಕಾರವು ಕಾಯ್ದೆ ಜಾರಿಗೊಳಿಸುವ ಬಗ್ಗೆ ತನ್ನ ನಿಲುವಿಗೆ ಬದ್ಧವಾಗಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರ ೧೪ ಜನರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುವಾರ್ ಭಲ್ಲಾ ಅವರು ಪ್ರವಾಣ ಪತ್ರ ಹಸ್ತಾಂತರಿಸಿದ್ದಾರೆ. ಆ ಮೂಲಕ ವಲಸಿಗರಲ್ಲಿ ಪೌರತ್ವದ ಭರವಸೆ ಮೂಡಿಸಿದ್ದಾರೆ. ಪೌರತ್ವ ಪಡೆದವರಲ್ಲಿ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ.
ಸಿಎಎ ಕಾಯ್ದೆಯಡಿ ಭಾರತದ ಪೌರತ್ವ ಪಡೆಯುವ ಅರ್ಹತಾ ಅವಧಿಯನ್ನು ೧೧ ವರ್ಷಗಳಿಂದ ೫ ವರ್ಷಕ್ಕೆ ಇಳಿಸಲಾಗಿದೆ. ಈ ಕಾಯ್ದೆ ಅನ್ವಯ ೨೦೧೪ ಡಿಸೆಂಬರ್ ೩೧ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರರು ಪೌರತ್ವಕ್ಕೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ವೊಂದನ್ನು ಆರಂಭಿಸಲಾಗಿತ್ತು.
ಬೆಂಗಳೂರು : ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ…
ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…
ಚಿತ್ರದುರ್ಗಾ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದ…
ಮೈಸೂರು : ಮೈಸೂರು ಅರಮನೆ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು…
ಮೈಸೂರು : ಮೈಸೂರಿನ ಅರಮನೆ ಬಳಿ ಹಿಲೀಯಂ ಗ್ಯಾಸ್ ಸಿಲಿಂಡರ್ ಸ್ಪೋಟ ದುರಂತ ಪ್ರಕರಣ ಸಂಬಂಧ ಶುಕ್ರವಾರ ಜಿಲ್ಲಾ ಉಸ್ತುವಾರಿ…