india pakistan military
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಅಮಾಯಕರನ್ನು ಕೊಂದ ನಂತರ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಸಿಂಧೂ ಜಲ ಒಪ್ಪಂದ ರದ್ದು, ವೀಸಾ ರದ್ದು, ಅಟ್ಟಾರಿ ಗಡಿ ಬಂದ್ ಸೇರಿದಂತೆ ಹಲವು ಕ್ರಮಗಳನ್ನು ಭಾರತ ಕೈಗೊಂಡಿದೆ. ಇದರಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಸನ್ನಿವೇಶ ಉದ್ಭವಿಸಿದೆ.
ಮತ್ತೊಂದೆಡೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬುಧವಾರ(ಏ.30) ರಾಜಕೀಯ ವ್ಯವಹಾರಗ ಸಂಪುಟ ಸಮಿತಿ ಸಭೆ ನಡೆಯುತ್ತಿದ್ದು, ಎಲ್ಲರಲ್ಲೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈಗಾಗಲೇ ಎರಡು ದೇಶಗಳ ನಡುವೆ ನಾಲ್ಕು ಯುದ್ಧಗಳು ನಡೆದಿವೆ, ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಐದನೇ ಯುದ್ಧ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಯುದ್ಧದ ಪ್ರಸ್ತಾಪ ಬಂದಾಗ, ಯಾವ ದೇಶ ಬಲಿಷ್ಠ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ಬಲಾಬಲ ಸಂಖ್ಯೆಯ ಸಮಗ್ರ ಮಾಹಿತಿ ಇಲ್ಲಿದೆ.
ಭಾರತ-ಪಾಕಿಸ್ತಾನ ಬಲಾಬಲ
ಭಾರತ ಸೈನಿಕರು ; 14,55,550
(ವಿಶ್ವದ 2ನೇ ಅತಿ
ದೊಡ್ಡ ಸೈನ್ಯ).
ಮೀಸಲು ಸಿಬ್ಬಂದಿ ;
9,60,000
ಪ್ಯಾರಾಮಿಲಿಟರಿ ;
25,27,000
ಟ್ಯಾಂಕ್‌ಗಳು ;
4,201
ಒಟ್ಟು ವಿಮಾನಗಳು;
2,229 (ವಿಶ್ವದಲ್ಲಿ 4ನೇ ಸ್ಥಾನ).
ಫೈಟರ್ ಜೆಟ್ಗಳು;
513
ಫೈಟರ್ ಜೆಟ್ಗಳು: ರಫೇಲ್, ಸುಖೋಯ್ 30, ತೇಜಸ್
ಹೆಲಿಕಾಪ್ಟರ್‌ಗಳು ;
899
ಅಟ್ಯಾಕ್ ಹೆಲಿಕಾಪ್ಟರ್ಗಳು ;
80
ವಿಮಾನವಾಹಕ ನೌಕೆಗಳು ; 2
ಫಿರಂಗಿಗಳು ;
9,719
ಆರ್ಮರ್ಡ್ ವೆಹಿಕಲ್‌ಗಳು ;
1,48,594
ಸಬ್‌ಮರೀನ್ ;
18
ಡಿಸ್ಟ್ರಾಯರ್ ನೌಕೆಗಳು ;
13
ಪರಮಾಣು ಶಕ್ತಿ
130-150 (ಸಿಡಿತಲೆಗಳು)
ಪಾಕಿಸ್ತಾನ
ಸೈನಿಕರು ;
6,54,000
ರಿಸರ್ವ್ ಸಿಬ್ಬಂದಿ ;
6,50,000
ಪ್ಯಾರಮಿಲಿಟರಿ ;
5,00,000
ಟ್ಯಾಂಕ್‌ಗಳು ;
2,627
ಫಿರಂಗಿಗಳು ;
4,472
ಆರ್ಮಡ್ ವೆಹಿಕಲ್‌ಗಳು ;
17,516
ಒಟ್ಟು ವಿಮಾನಗಳು ;
1,399
ಫೈಟರ್ ಜೆಟ್ಗಳು ;
328
ಫೈಟರ್ ಜೆಟ್‌ಗಳು ;
ಎಫ್-16, ಜೆಎಫ್-17
ಹೆಲಿಕಾಪ್ಟರ್‌ಗಳು; 373
ಅಟ್ಯಾಕ್ ಹೆಲಿಕಾಪ್ಟರ್ಗಳು ;
57
ವಿಮಾನವಾಹಕ ನೌಕೆಗಳು ;
0
ಸಬ್ ಮರೀನ್‌ಗಳು ;
8
ಡಿಸ್ಟಾಯರ್ ನೌಕೆಗಳು 0
ಪರಮಾಣು ಶಕ್ತಿ ;
140-150(ಸಿಡಿತಲೆಗಳು)
ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…
ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…
ಬೆಂಗಳೂರು : ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವ ಲಕ್ಷಣಗಳು ಗೋಚರಿಸಿದ್ದು,…
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ…
ಮದ್ದೂರು : ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು…
ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…