ನವದೆಹಲಿ: ದೇಶದ ಪ್ರಥಮ ಆತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ʼವಂದೇ ಮೆಟ್ರೋʼ ರೈಲಿಗೆ ಗುಜರಾತ್‌ನ ಭುಜ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಅಹಮದಾಬಾದ್‌ನಿಂದ ವರ್ಚುವಲ್ ಆಗಿ ಚಾಲನೆ ನೀಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವಾಲಯ, ವಂದೇ ಮೆಟ್ರೊ ರೈಲು ಸುಮಾರು 359 ಕಿ.ಮೀ.ದೂರದ ಪ್ರಯಾಣವನ್ನು 5.45 ಗಂಟೆಗಳಲ್ಲಿ ತಲುಪಲಿದೆ. ಈ ರೈಲು ಭೂಜ್‌ನಿಂದ ಹೊರಟಯ ಅಹಮದಾಬಾದ್ ತಲುಪಲಿದೆ. ರೈಲಿನ ಟಿಕೆಟ್ ದರ 455 ಆಗಿದ್ದು, ರೈಲಿನಲ್ಲಿ ಸಂಚಾರಿಸಲು ಸಾರ್ವಜನಿಕರಿಗೆ ಸೆ.17ರಿಂದ ಅನುವು ಮಾಡಿಕೊಡಲಾಗುವುದು. ಇದು ಗರಿಷ್ಠ 100 ಮೀ.ವೇಗದಲ್ಲಿ ಚಲಿಸುವ ರೈಲಾಗಿದ್ದು, ಪ್ರಯಾಣಿಕರ ಖರ್ಚುನ್ನು ತಗ್ಗಿಸಿ, ವೇಗದ ಪ್ರಯಾಣವನ್ನು ಖಚಿತಪಡಿಸುತ್ತದೆ ಹೇಳಿದೆ.
ಈ ರೈಲಿನಲ್ಲಿ ಅತ್ಯುತ್ತಮ ದರ್ಜೆಯ ಸೀಟುಗಳು, ಹವಾನಿಯಂತ್ರಿತ ಕ್ಯಾಬಿನ್, ಮಾಡ್ಯುಲರ್ ಇಂಟೀರಿಯರ್ಸ್ ಹೊಂದಿದ್ದು, ಇತರೆ ಮೆಟ್ರೋ ರೈಲುಗಳಿಗಿಂತ ಉನ್ನತ ದರ್ಜೆಯ ರೈಲಾಗಿದೆ. ಅಲ್ಲದೆ, ಅಪಘಾತದ ಸಂದರ್ಭದಲ್ಲಿ ತಡೆ ತಂತ್ರಜ್ಞಾನ ಕವಚ, ಬೆಂಕಿ ಅವಘಡ ಪತ್ತೆ ತಂತ್ರಜ್ಞಾನ, ತುರ್ತು ಲೈಟ್‌ಗಳು, ಏರೋಸಾಲ್ ಆಧಾರಿತ ಬೆಂಕಿ ನಂದಿಸುವ ವ್ಯವಸ್ಥೆಯಂತಹ ಆತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ.
ವಂದೇ ಮೇಟ್ರೋ ರೈಲಿಗಿಂತ ಇತರೆ ಮೆಟ್ರೊ ರೈಲುಗಳು ಕಡಿಮೆ ಅಂತರದಲ್ಲಿ ಸಂಚರಿಸುತ್ತವೆ. ಮೆಟ್ರೋ ಎಂಬ ಪದ ನಗರದ ಭೂದೃಶ್ಯದ ಪರಿಕಲ್ಪನೆ ನೀಡಿದ್ದು, ಅದರಂತೆಯೇ ಈ ರೈಲು ನಗರದ ಹೃದ
ಯಭಾಗದಿಂದ ಬಾಹ್ಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ವಾಷಿಂಗ್ಟನ್ : ಇವತ್ತಿನ ರಾತ್ರಿ ಇರಾನ್‌ನ ಇಡೀ ನಾಗರಿಕತೆಯೇ ನಾಶವಾಗಲಿದೆ ಎಂದು ಬೆದರಿಕೆ ಒಡ್ಡಿದ ಕೆಲವೇ ಹೊತ್ತಲ್ಲಿ ಅಮೆರಿಕ ಅಧ್ಯಕ್ಷ…
ಬೆಂಗಳೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ…
ಇಂಪಾಲ: ಮಣಿಪುರದಲ್ಲಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯ…
ಹುಬ್ಬಳ್ಳಿ: ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬ ಸಚಿವ ಜಮೀರ್ ಅಹ್ಮಮದ್ ಖಾನ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.…
ಬೆಂಗಳೂರು: ನಮ್ಮ ಅಣ್ಣ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ ಇವತ್ತೇ ಸಿಎಂ ಆಗಬೇಕು ಅಂತೇನಿಲ್ಲ. ಇನ್ನೂ ಸಮಯವಿದೆ…
ಮಡಿಕೇರಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್.17ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ…