ನವದೆಹಲಿ: ಏಳು ರಾಜ್ಯಸಭಾ ಸಂಸದರು ಪಕ್ಷವನ್ನು ತೊರೆದು ಬಿಜೆಪಿ ಸೇರುವ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ಸಂವಿಧಾನಬಾಹಿರ ಎಂದು ಕರೆದಿದೆ.
ಈ ಸಂಸದರನ್ನು ಮೇಲ್ಮನೆಯಿಂದ ಅನರ್ಹಗೊಳಿಸುವಂತೆ ಕೋರಿ ಪಕ್ಷವು ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆಯಲಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ರಾಜ್ಯಸಭಾ ಮತ್ತು ಲೋಕಸಭೆಯಲ್ಲಿ ಯಾವುದೇ ರೀತಿಯ ಬಂಡಾಯ ಅಥವಾ ಬಣಕ್ಕೆ ಮೂರನೇ ಎರಡರಷ್ಟು ಬಹುಮತವಿದ್ದರೂ ಸಹ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಪಕ್ಷಾಂತರ ವಿರೋಧಿ ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ಸಂಜಯ್ ಸಿಂಗ್ ಹೇಳಿದರು.
ಈ ಹಿನ್ನೆಲೆಯಲ್ಲಿ ಏಳು ಸಂಸದರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಉಪಾಧ್ಯಕ್ಷರು ಹಾಗೂ ರಾಜ್ಯಸಭೆಯ ಅಧ್ಯಕ್ಷರಿಗೆ ಪತ್ರ ಬರೆಯುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…
ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಮಕ್ಕಳಿಗೆ ನೈತಿಕ ಪಾಠ ಮಾಡಬೇಕಾದ ಶಿಕ್ಷಕರು ಸೇರಿಕೊಂಡು ಮಕ್ಕಳಿಗೆ ಪ್ರಚೋದನೆ ನೀಡಿ ತಮ್ಮ…
ರಾಜ್ಯ ರಾಜಕಾರಣ ಕುತೂಹಲಕಾರಿ ತಿರುವು ಪಡೆಯುತ್ತಿದೆ. ನಾಲ್ಕು ತಿಂಗಳ ಹಿಂದೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದೇ ಇದಕ್ಕೆ ಕಾರಣ. ಅಂದ…
ಲಕ್ಷ್ಮೀಕಾಂತ್ ಕೊಮಾರಪ್ಪ ವಾಡಿಕೆಯಂತೆ ಸುರಿಯದ ಮಳೆ; ಆತಂಕಗೊಂಡಿರುವ ರೈತರು ಸೋಮವಾರಪೇಟೆ: ಮಳೆ ಕೈಕೊಟ್ಟ ಪರಿಣಾಮ ಭತ್ತದ ಬೆಳೆಗೆ ನೀರಿನ ಕೊರತೆ…
ಮಹೇಂದ್ರ ಹಸಗೂಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಮೈಸೂರು- ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ…
ದಿನೇಶ್ ಕುಮಾರ್ ಎಚ್.ಎಸ್. ಅಶುಚಿತ್ವ ಮರೆಮಾಚಲು ಹಗಲು ಹೊತ್ತಿನಲ್ಲಿಯೇ ಪಾರ್ಕ್ ಬಂದ್; ಸಾರ್ವಜನಿಕರ ಆಕ್ರೋಶ ಮತ್ತೊಂದೆಡೆ ನಳನಳಿಸುತ್ತಿದೆ ಜಿಲ್ಲಾ ಪಂಚಾಯಿತಿ…