ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಮಖ್ಯಸ್ಥ ಅಖಿಲೇಶ್ ಯಾದವ್ ಅವರ ಚುನಾವಣೆ ತಂತ್ರಗಾರಿಕೆ ಉತ್ತರ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಫಲ ನೀಡಿದೆ. ಪಕ್ಷದಿಂದ ಹೊಸದಾಗಿ ಆಯ್ಕೆಯಾದ ಸಂಸದರ ಪೈಕಿ ಶೇ.೮೬ರಷ್ಟು ಸಂಸದರು ದಲಿತ, ಹಿಂದುಳಿದ ವರ್ಗ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರನ್ನು (ಪಿಡಿಎ) ಕೇಂದ್ರವಾಗಿಟ್ಟುಕೊಂಡು ಚುನಾವಣೆ ತಂತ್ರಗಾರಿಕೆ ಹೆಣೆದಿದ್ದರು. ಈ ಪಿಡಿಎ ತಂತ್ರಗಾರಿಗೆ ಅವರನ್ನ ಕೈಹಿಡಿದಿದೆ. ಸಮಾಜವಾದಿ ಪಕ್ಷದಿಂದ ಆಯ್ಕೆಯಾದ ೩೭ ಸಂಸದರ ಪೈಕಿ ೨೦ ಮಂದಿ ಹಿಂದುಳಿತ ವರ್ಗದವರು. ಪರಿಶಿಷ್ಟ ಜಾತಿಯ ೮ ಮಂದಿ ಮತ್ತು ಮುಸ್ಲಿಂ ಸಮುದಾಯದ ೪ ಮಂದಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣ, ವೈಶ್ಯ ಹಾಗೂ ಭುಮಿಹಾರ್ ಸಮುದಾಯದವರು ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಮುಖ ಸಮುದಾಯವಾದ ಠಾಕೂರ ಸಮುದಾಯದಿಂದ ಆನಂದ್ ಭಡೋರಿಯಾ ಹಾಗೂ ಬೀರೇಂದ್ರ ಸಿಂಗ್ ಗೆಲುವು ಸಾಧಿಸಿದ್ದಾರೆ.
ದೇಶಾದ್ಯಂತ ಅಯೋಧ್ಯ ರಾಮಮಂದಿರ ನಿರ್ಮಾಣವನ್ನು ಪ್ರಮುಖ ಚುನಾವಣಾ ವಿಷಯವಾಗಿ ಬಿಜೆಪಿ ಬಿಂಬಿಸಿದ್ದರೂ, ರಾಮ ಜನ್ಮಭೂಮಿ ಮಾತ್ರ ಬಿಜೆಪಿಯನ್ನು ತಿರಸ್ಕರಿಸಿದೆ. ಇಲ್ಲಿ ಅಖಿಲೇಶ್ ಯಾದವ್ ಅವರ ದಲಿತ ಮಂತ್ರ ಕೈಹಿಡಿದಿದ್ದು, ಅಯೋಧ್ಯ ಪ್ರದೇಶ ಒಳಗೊಂಡಿರುವ ಫೈಝಾಬಾದ್‌ನಲ್ಲಿ ಎಸ್ಪಿಯ ದಲಿತ ಅಭ್ಯರ್ಥಿಗೆ ಜಯ ದೊರಕಿದೆ.
ಸಮಾಜವಾದಿ ಪಕ್ಷ ಇದೇ ಮೊದಲ ಬಾರಿಗೆ ಸಾಮಾನ್ಯ ಕ್ಷೇತ್ರದಿಂದ ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹೊಸ ಪ್ರಯೋಗ ಮಾಡಿ, ಯಶಸ್ಸು ಕಂಡಿದೆ. ಉತ್ತರ ಪ್ರದೇಶದ ಮೀರಠ್ ಮತ್ತು ಫೈಝಾಬಾದ್ ಕ್ಷೇತ್ರದಿಂದ ಪರಿಶಿಷ್ಟ ವರ್ಗದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಅದರಲ್ಲೂ ಆಯೋಧ್ಯ ಒಳಗೊಂಡಿರುವ ಫೈಝಾಬಾದ್ ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿ ಪಾಸಿ ಸಮುದಾಯದ ಅವಧೇಶ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿ ರಾಮನ ನೆಲೆಯಲ್ಲಿ ಬಿಜೆಪಿಯನ್ನು ನೆಲಕಚ್ಚಿಸಿದೆ.
ಫೈಝಾಬಾದ್ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು ೫೪೫೬೭ ಮತಗಳಿಂದ ಸೋಲಿಸಿದ್ದಾರೆ. ಮೀರಠ್‌ನಲ್ಲಿ ಪಕ್ಷದ ಸುನಿತಾ ವರ್ಮ ಎಂಬ ದಲಿತ ಮಹಿಳೆಯನ್ನು ಕಣಕ್ಕೆ ಇಳಿಸಿ ಬಿಜೆಪಿಯ ಅರುಣ್ ಗೋವಿಲ್ ಅವರನ್ನು ೧೦೫೦೦ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಇನ್ನೂ ಮಿತ್ರ ಪಕ್ಷವಾದ ಕಾಂಗ್ರೆಸ್ ಕೂಡ ೬ ಕ್ಷೇತ್ರ ಗೆದ್ದಿದ್ದು, ಇವರಲ್ಲಿ ಹಿಂದುಳಿತ ವರ್ಗ, ದಲಿತ ಮತ್ತು ಮುಸ್ಲಿಂ ಸಮುದಾಯವರು ತಲಾ ಓರ್ವರು. ಕಾಶ್ಮೀರಿ ಬ್ರಹ್ಮಣ ರಾಹುಲ್ ಗಾಂಧಿ, ಭುಮಿಹಾರ್ ಸಮುದಾಯ್ ಉಜ್ವಲ್ ರೆಯೋತಿ ರಮಣ್ ಸಿಂಗ್ ಹಾಗೂ ಪಂಜಾಬಿ ಸಮುದಾಯದ ಕೆ.ಎಲ್ ಶರ್ಮ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಎಸ್ಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ೩೩ ಮಂದಿ ಹಿಂದುಳಿದ ವರ್ಗದವರು, ೧೯ ಮಂದಿ ಪರಿಶಿಷ್ಟ ಹಾಗೂ ಆರು ಮುಸ್ಲಿಂ ಸಮುದಾಯದವರು ಸೇರಿದ್ದರು.
ಇನ್ನು ಬಿಜೆಪಿಯ ಅಭ್ಯರ್ಥಿಗಳಲ್ಲಿ ಸಾಂಪ್ರದಾಯಿಕ ಮತದಾರರಾಗಿರುವ ಮೇಲ್ವರ್ಗದವರೇ ಅಧಿಕವಾಗಿದ್ದರು.
ಗುಂಡ್ಲುಪೇಟೆ: ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಚಿರತೆ ಹಾಗೂ ಆನೆಗಳಿರುವ ತಾಣ. ಈ ಅರಣ್ಯದಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್…
ಬೆಳಗಾವಿ: ಬೆಳಗಾವಿಯಲ್ಲಿ ನಾಳೆಯಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ…
ಪಣಜಿ: ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವನ್ನಪ್ಪಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ…
ನವದೆಹಲಿ: ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸಬೇಕು ಎಂದು ಪುನರುಚ್ಚರಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ತಮ್ಮನ್ನು ಮನುವಾದಿ ಎಂದ ಮುಖ್ಯಮಂತ್ರಿ…
ಬೆಂಗಳೂರು: ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತನಿಗೂ ನೋಟಿಸ್ ನೀಡಲಾಗಿದೆ. ಮಂಗಳೂರಿನ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಅವರಿಗೆ…