ದೇಶ- ವಿದೇಶ

ಟ್ರೆಂಡ್‌ ಸೃಷ್ಟಿಸಿದ ಕಾಕ್ರೋಚ್‌ ಜನತಾ ಪಾರ್ಟಿ ; ಚಳವಳಿಯಾಗಿ ಬದಲಾದ ಸಿಜೆಪಿ

ಹೊಸದಿಲ್ಲಿ : ಜೆನ್‌ಝೀಗಳ ನೆಚ್ಚಿನ ತಾಣವಾಗಿರುವ ಇನ್‌ಸ್ಟಾಗ್ರಾಂ ಈಗ ಕೇವಲ ಮನರಂಜನೆಯ ತಾಣವಾಗಂತೂ ಇಲ್ಲ. ಬದಲಾಗಿ ಸಂಚಲನ ಸೃಷ್ಟಿಸುವ ಬಹುದೊಡ್ಡ ಮಾಧ್ಯಮವಾಗಿ ಬದಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರಾತ್ರೋ ರಾತ್ರಿ ಹುಟ್ಟಿದ ಕಾಕ್ರೋಜ್‌ ಜನತಾ ಪಾರ್ಟಿ(ಸಿಜೆಪಿ) ಎನ್ನುವ ರಾಜಕೀಯ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ ದೇಶದಲ್ಲೂ ಸದ್ದು ಮಾಡಿತ್ತಿದೆ.

ರಾಜಕೀಯ ಸಂವಹನ ತಜ್ಞ ಅಭಿಜೀತ್ ದೀಪ್ಕೆ ಅವರು ಮೇ 16 ರಂದು ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹೆಸರಿನಲ್ಲಿ ಅಣಕು ಗೂಗಲ್ ಫಾರ್ಮ್‌ನ್ನು ಆರಂಭಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕೆಲ ನಿರುದ್ಯೋಗಿ ಕಾರ್ಯಕರ್ತರನ್ನು ‘ಜಿರಳೆ’ ಮತ್ತು ‘ಪರಾವಲಂಬಿ’ ಎಂದು ಹೋಲಿಸಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ವಿಡಂಬನೆ ಹುಟ್ಟಿತು ಎಂದು ಹೇಳಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಂತರ ಈ ಮಾತು ಮೋಸದ ಪದವಿಗಳನ್ನು ಬಳಸಿ ಮೋಸಮಾಡುವವರ ಬಗ್ಗೆ ಮಾತ್ರ ಎಂದು ಹೇಳಿದರು, ಆದರೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಾನಿ ಆಗಿತ್ತು. ಈ ಕಿಚ್ಚಿನಲ್ಲಿ ಹುಟ್ಟಿದ ಈ ಪಕ್ಷವೇ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ.

ಕಾಕ್ರೋಚ್​ ಜನತಾ ಪಕ್ಷ ಸ್ಥಾಪನೆಯಾದ ಕೂಡಲೇ ಲಕ್ಷಾಂತರ ಫಾಲೋವರ್ಸ್​!
ಅದಾದ ಕೇವಲ 90 ಗಂಟೆಗಳಲ್ಲಿ ಈ ನೋಂದಣಿ ಲಿಂಕ್‌ ಮೂಲಕ 3,50,000 ಕ್ಕೂ ಹೆಚ್ಚು ಜನರು ಸದಸ್ಯತ್ವಕ್ಕೆ ಹೆಸರು ನೋಂದಾಯಿಸಿದರು, ಇನ್ಸ್ಟಾಗ್ರಾಮ್ ನಲ್ಲಿ ಕೆಲವೇ ಗಂಟೆಗಳಲ್ಲಿ 8 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳು ಸೇರ್ಪಡೆಯಾದರು.‌ ಇದೀಗ 12 ಮಿಲಿಯನ್‌ಗೂ ಹೆಚ್ಚು ಅನುಯಾಯಿಗಳು ಇದ್ದಾರೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಮೇ 16 ರಂದು ಮಾತನಾಡುತ್ತ ʼನಿರುದ್ಯೋಗಿ ಯುವ ಜನತೆ ಜಿರಳೆಗಳಿದ್ದಂತೆʼ ಎಂದಿದ್ದರು. ಇದನ್ನೇ ಹಿಡಿದು CJP ‘ಹಾನ್ ಮೈ ಹೂಂ ಜಿರಳೆ’ ಎಂಬ ಪ್ರತಿಭಟನಾ ಹಾಡನ್ನು ಬಿಡುಗಡೆ ಮಾಡಿತು. ಪ್ರಶ್ನೆ ಪತ್ರಿಕೆ ಸೋರಿಕೆ, ಮರುಪರೀಕ್ಷೆ ಶುಲ್ಕದ ಭಾರ, ಕೋಚಿಂಗ್ ಇಂಡಸ್ಟ್ರಿಯ ಒತ್ತಡ ಎಲ್ಲವನ್ನೂ ಈ ಹಾಡು ತೀವ್ರವಾಗಿ ಹೇಳುತ್ತದೆ. ಕ್ಷಣಾರ್ಧದಲ್ಲಿ ಈ ಗೀತೆ ದೆಹಲಿಯಿಂದ ಕೋಟಾದವರೆಗಿನ ವಿದ್ಯಾರ್ಥಿ ಪ್ರತಿಭಟನಗಳ ಹಿಂದಿನ ಘೋಷವಾಗಿಬಿಟ್ಟಿತು.

ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ ಎಂದು ಪರಿಚಯಿಸಿಕೊಂಡ CJP
‘ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ’ ಎಂದು ತಮಗೆ ತಾವೇ ಪರಿಚಯಿಸಿಕೊಂಡಿರುವ (ಕಾಕ್ರೋಚ್​​ ಜನತಾ ಪಾರ್ಟಿ) CJP, ಕೇವಲ ಹಾಸ್ಯದಲ್ಲೇ ನಿಲ್ಲದೆ 5 ಅಂಶಗಳ ಗಂಭೀರ ನೀತಿ ಪ್ರಣಾಳಿಕೆಯನ್ನು ತಯಾರಿಸಿದೆ. ಅದರ ಪ್ರಮುಖ ಬೇಡಿಕೆ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ಸುಧಾರಣೆ. NEET, CBSE ಮುಂತಾದ ಪರೀಕ್ಷೆಗಳಲ್ಲಿ ವಂಚನೆ ನಡೆದರೆ ಜವಾಬ್ದಾರ ಅಧಿಕಾರಿಗಳಿಗೆ ಕಠಿಣ, ಜಾಮೀನು ಸಿಗದ ಕ್ರಿಮಿನಲ್ ಶಿಕ್ಷೆ ಇರಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ. ಮರುಮೌಲ್ಯಮಾಪನದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ವಸೂಲಾಗುವ ಹೆಚ್ಚುವರಿ ಶುಲ್ಕವನ್ನು ಕೂಡ ತಕ್ಷಣ ರದ್ದುಗೊಳಿಸಬೇಕು ಎಂಬುದು ಅವರ ಇನ್ನೊಂದು ಬೇಡಿಕೆ.

ಸಿಜೆಪಿ ಉದ್ದೇಶ ಏನು?
ಇದರ ಹಿಂದಿನ ದೊಡ್ಡ ಅಂಶ, ಸಾಂಸ್ಥಿಕ ಭ್ರಷ್ಟಾಚಾರವನ್ನು ಗುರಿಯಾಗಿಸಿಕೊಂಡಿರುವುದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ನಿವೃತ್ತಿಯ ನಂತರ ರಾಜ್ಯಸಭಾ ಸ್ಥಾನಗಳು ಅಥವಾ ಸರ್ಕಾರಿ ಹುದ್ದೆಗಳನ್ನು ನೀಡುವುದನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯಾಂಗದ ತಟಸ್ಥತೆ ಉಳಿಸಿಕೊಳ್ಳಲು ಇದು ಅಗತ್ಯ ಎಂಬ ವಾದ ಅವರದ್ದಾಗಿದೆ. ಜೊತೆಗೆ, ಮಾಹಿತಿ ಹಕ್ಕು (RTI) ಕಾಯ್ದೆಯಡಿ ಪಾರದರ್ಶಕತೆಯನ್ನು ಪಾಲಿಸುವುದಾಗಿ, ಅನಾಮಧೇಯ ದೇಣಿಗೆಗಳು ಅಥವಾ ಕಾರ್ಪೊರೇಟ್ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…

12 hours ago

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

12 hours ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

12 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

13 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

13 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

13 hours ago