bsf-jawan-detained-by-pakistan-border- kumar sha
ಹೊಸದಿಲ್ಲಿ : ಪಂಜಾಬ್‌ನ ಫೀರೋಝ್‌ಪುರದ ಬಳಿ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿ ದಾಟಿದ ಗಡಿ ಭದ್ರತಾ ಪಡೆ ಕಾನ್ಸ್‌ಟೇಬಲ್ ಅನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿ 100 ಗಂಟೆಗಳಿಗೂ ಅಧಿಕ ಸಮಯ ಕಳೆದಿದೆ. ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ಮೂರು ಸುತ್ತಿನ ಫ್ಲಾಗ್ ಮೀಟಿಂಗ್ ನಡೆದಿದೆ. ಆದರೆ ಯೋಧನನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಯೋಧನನ್ನು ವಾಪಸ್ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಪಾಕಿಸ್ತಾನ ರೇಂಜರ್‌ಗಳೊಂದಿಗೆ ಮತ್ತೊಂದು ಸುತ್ತಿನ ಫೀಲ್ಡ್ ಕಮಾಂಡರ್ ಮಟ್ಟದ ಫ್ಲಾಗ್ ಮೀಟಿಂಗ್‌ಗೆ ಬಿಎಸ್‌ಎಫ್ ವಿನಂತಿ ಮಾಡಿದೆ. ಶೀಘ್ರದಲ್ಲೇ ಸಭೆ ನಡೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್‌ಎಫ್‌ನ 182ನೇ ಬೆಟಾಲಿಯನ್ ಸದಸ್ಯ ಪೂರ್ಣಮ್ ಕುಮಾರ್ ಶಾ ಗಡಿ ಬಳಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನದ ಪ್ರದೇಶವನ್ನು ದಾಟಿದ್ದರು. ಆ ಸಮಯದಲ್ಲಿ ಅವರು ಸೇನಾ ಸಮವಸ್ತ್ರದಲ್ಲಿದ್ದರು ಜೊತೆಗೆ ಸೇವಾ ರೈಫಲ್ ಅನ್ನು ಹೊಂದಿದ್ದರು.
ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…
ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…
ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ಇದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ…
ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ೮ ರೂ. ಏರಿಕೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಲಿನ ದರವನ್ನು ಒಂದೇ…
ರಾಜ್ಯದಲ್ಲಿ ಬಳಕೆಯಲ್ಲಿರುವ ಒಟ್ಟು ೩೦ ಸಾವಿರ ಜಲಮೂಲಗಳಲ್ಲಿ ಕೇವಲ ಶೇ.೨೦ರಷ್ಟು ಮಾತ್ರ ಅಂತರ್ಜಲ ಮರುಪೂರಣಕ್ಕಾಗಿ ಬಳಕೆಯಾಗುತ್ತಿರುವುದು ಸರ್ಕಾರ ಹಾಗೂ ಸಾರ್ವಜನಿಕರ…
ಟಿ. ಕೆ.ಹರೀಶ್, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಭ್ರಮದ ಜೊತೆಗೆ ಸ್ವಚ್ಛತೆ, ಸುರಕ್ಷತೆ ಮತ್ತು…