ದೇಶ- ವಿದೇಶ

ಹೊಸ ಸುಂಕ ಸಾರಿದ ಅಮೆರಿಕ, ಈ ಬಾರಿ ಯಾವುದರ ಮೇಲೆ ಟ್ರಂಪ್‌ ಕಣ್ಣು?

ವಾಷಿಂಗ್ಟನ್ : ಇರಾನ್ ವಿರುದ್ಧದ ಯುದ್ಧದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಸುಂಕ ಸಮರ ಆರಂಭಿಸಿದ್ದಾರೆ. ಈ ಬಾರಿ ಟ್ರಂಪ್ ಕಣ್ಣು ಬ್ರಾಂಡೆಡ್ ಔಷಧಗಳ ಮೇಲೆ ಬಿದ್ದಿದ್ದು ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕಂಪನಿಗಳ ಮೇಲೆ ಶೇ. 100 ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಅವರು ಸಹಿ ಹಾಕಿದ್ದಾರೆ.

ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರುವುದು, ಔಷಧಗಳಿಗಾಗಿ ಚೀನಾ ಅಥವಾ ಇತರ ದೇಶಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡುವುದು ಮತ್ತು ಅಮೆರಿಕದ ಒಳಗೇ ಉದ್ಯೋಗ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು ಈ ನೀತಿಯ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವ ಕಂಪನಿಗಳು ಮುಂದಿನ 4 ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆ ತೆರೆಯಲು ಒಪ್ಪುತ್ತವೆಯೋ ಅವುಗಳ ಮೇಲಿನ ಸುಂಕವನ್ನು ಶೇ. 20 ಕ್ಕೆ ಇಳಿಸಲು ಈ ಕಾರ್ಯಾದೇಶದಲ್ಲಿ ಅವಕಾಶ ನೀಡಲಾಗಿದೆ. ಅಮೆರಿಕದ ಹೊರಗೆ ತಯಾರಾದ ಮತ್ತು ಯಾವುದೇ ರಿಯಾಯಿತಿ ಒಪ್ಪಂದ ಮಾಡಿಕೊಳ್ಳದ ಪೇಟೆಂಟ್ ಅಥವಾ ಬ್ರಾಂಡೆಡ್ ಔಷಧಗಳ ಮೇಲೆ ಶೇ. 100 ಸುಂಕ ವಿಧಿಸಲಾಗುತ್ತದೆ.

ಒಂದು ಕಂಪನಿಯು ಅಮೆರಿಕದಲ್ಲಿ ಉತ್ಪಾದನಾ ಘಟಕ ತೆರೆಯುವುದರ ಜೊತೆಗೆ, ಅಮೆರಿಕಕ್ಕೆ ಅತಿ ಕಡಿಮೆ ಬೆಲೆಗೆ ಔಷಧ ನೀಡಲು ಒಪ್ಪಂದ ಮಾಡಿಕೊಂಡರೆ ಮಾತ್ರ ಯಾವುದೇ ಸುಂಕ ಇರುವುದಿಲ್ಲ. ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆ ತಿಳಿಸಲು 120 ದಿನಗಳ ಕಾಲಾವಕಾಶ ನೀಡಲಾಗಿದೆ, ಸಣ್ಣ ಕಂಪನಿಗಳಿಗೆ 180 ದಿನಗಳ ಗಡುವು ನೀಡಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜಲೆರ್ಂಡ್‍ನಂತಹ ದೇಶಗಳ ಔಷಧಗಳಿಗೆ ಒಪ್ಪಂದದ ಪ್ರಕಾರ ಕೇವಲ ಶೇ,15 ಸುಂಕ ಅನ್ವಯವಾಗುತ್ತದೆ. ಬ್ರಿಟನ್‍ಗೆ ಇದಕ್ಕಿಂತಲೂ ಕಡಿಮೆ ದರ ಅಥವಾ ಸಂಪೂರ್ಣ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಸದ್ಯಕ್ಕೆ ಈ ಕಾರ್ಯಾದೇಶವು ಸಾಮಾನ್ಯ ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಒಟ್ಟು ಔಷಧಗಳಲ್ಲಿ ಸುಮಾರು ಶೇ.90 ಜನರಿಕ್ ಆಗಿರುವುದರಿಂದ, ರೋಗಿಗಳಿಗೆ ತಕ್ಷಣದ ಬೆಲೆ ಏರಿಕೆಯ ಹೊರೆ ಬೀಳದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಭಾರತದಂತಹ ದೇಶಗಳಿಗೆ ಸದ್ಯಕ್ಕೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ವಿರಾಜಪೇಟೆ ಐತಿಹಾಸಿಕ ಕೆರೆಗಳ ಒತ್ತುವರಿ ಆರೋಪ

ಕಾಂಗೀರ ಬೋಪಣ್ಣ ವಿರಾಜಪೇಟೆ : ಪುರಸಭೆ ವ್ಯಾಪ್ತಿಗೆ ಒಳಪಡುವ ೨ ಐತಿಹಾಸಿಕ ಕೆರೆಗಳು ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ…

31 mins ago

ಪಿಯುಸಿ : ಗುಂಡ್ಲುಪೇಟೆಯಲ್ಲಿ ಬಾಲಕಿಯರೇ ಮೇಲುಗೈ

ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಟಾಪರ್ಸ್‌ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ತಾಲ್ಲೂಕಿನ…

42 mins ago

ಮೈಸೂರು ಜಿಲ್ಲೆಯ 147 ಗ್ರಾಪಂಗಳೀಗ ಕ್ಷಯ ಮುಕ್ತ!

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷಯರೋಗ ಮುಕ್ತ ಗ್ರಾಪಂ ಅಭಿಯಾನ ಮೈಸೂರು : ಜಿಲ್ಲೆಯಲ್ಲಿ ಕ್ಷಯ ರೋಗ ಮತ್ತು ಸಾವಿನ ಪ್ರಮಾಣ…

46 mins ago

ಓದುಗರ ಪತ್ರ | ಜನಗಣತಿ ಪಾರದರ್ಶಕ,ನಿಖರವಾಗಿರಲಿ. . .

ಭಾರತದ ಜನಗಣತಿ ಕಾಯ್ದೆ ೧೯೪೮ರ ಪ್ರಕಾರ ಈ ಬಾರಿಯ ಜನಗಣತಿ ೨೦೨೭ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು…

53 mins ago

ಬಾಪೂ ಆದರ್ಶ ಮಡದಿ ಕಸ್ತೂರ ಬಾ ಗಾಂಧಿ

ಡಾ.ಎಂ.ಡಿ.ಉಮೇಶ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಅವರು ಏ. ೧೧, ೧೮೬೯ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಗೋಕುಲ್‌ದಾಸ್ ಕಪಾಡಿಯಾ…

1 hour ago

ದಳಪತಿ ವಿಜಯ್‌ಗೆ ಮತ್ತೆ ಸಂಕಷ್ಟ : ಬಿಡುಗಡೆಗೂ ಮೊದಲೆ ʻಜನ ನಾಯಗನ್‌ʼ ಸೋರಿಕೆ.

ಚೆನ್ನೈ : ನಟ ಹಾಗೂ ರಾಜಕಾರಣಿ ದಳಪತಿ ವಿಜಯ್‌ ಅವರ ವೃತ್ತಿ ಜೀವನದ ಕೊನೆಯ ಹಾಗೂ ಬಹುನಿರೀಕ್ಷಿತ ʻಜನ ನಾಯಗನ್‌ʻ…

3 hours ago