ಶ್ರೀನಗರ : ಭಾರೀ ಮಳೆಯಿಂದಾಗಿ ಇಂದು ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಳೆದ ಶುಕ್ರವಾರ ರಾತ್ರಿಯಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಯಾತಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದುವರೆಗೂ ೧ ಲಕ್ಷದ ೫೦ ಕ್ಕೂ ಹೆಚ್ಚು ಮಂದಿ ಭಕ್ತರು ೩೮೦೦ ಮೀಟರ್ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ಲಿಂಗ ದರ್ಶನ ಮಾಡಿದ್ದಾರೆ.
ಆಗಸ್ಟ್ ೧೯ ರವರೆಗೆ ಯಾತ್ರೆ ಮುಂದುವರಿಯಲಿದ್ದು, ಮೊದಲ ವಾರದಲ್ಲಿ ೧.೫೦ ಲಕ್ಷಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. ಆದರೆ ಗುಹೆಯಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕರಗಿದ ಕಾರಣ ಈಗಷ್ಟೆ ಬಂದಿರುವ ಯಾತ್ರಿಕರು ನಿರಾಸೆಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಅತೀ ಹೆಚ್ಚು ತಾಪಮಾನದಿಂದಾಗಿ ಶಿವಲಿಂಗ ಕರಗುವ ಪ್ರಕ್ರಿಯೆ ವೇಗಗೊಂಡಿದೆ. ೨೦೦೮ ರ ನಂತ್ರ ಯಾತ್ರೆಯ ಮೊದಲ ೧೦ ದಿನಗಳಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಇದೇ ಮೊದಲ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ,…
ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್…
ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…
ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…
ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…