ದೇಶ- ವಿದೇಶ

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ: ತಜ್ಞರ ಎಚ್ಚರಿಕೆ ಏನಂದ್ರೆ?

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ತೀವ್ರವಾಗಿ ಕುಸಿದಿದೆ.

ದೆಹಲಿ-ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ಮಾಲಿನ್ಯದ ಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ದಟ್ಟವಾದ ಹೊಗೆಯಿಂದಾಗಿ ದೆಹಲಿಯ ಪ್ರದೇಶದಾದ್ಯಂತ ಗೋಚರತೆಯನ್ನು ಕಡಿಮೆ ಮಾಡಿದೆ. ಜೊತೆಗೆ ಉಸಿರಾಟದ ಸ್ಥಿತಿಯನ್ನು ಹದಗೆಡಿಸಿದೆ.

ನಗರದ ಹಲವಾರು ಭಾಗಗಳಲ್ಲಿ ಮಾಲಿನ್ಯದ ಮತ್ತಷ್ಟು ಹದಗೆಟ್ಟಿದ್ದು, ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400 ಅಂಕವನ್ನು ದಾಟಿದ್ದು, ಇದು ವಿಷಕಾರಿ ಗಾಳಿಯ ಗಂಭೀರತೆಯನ್ನು ಸೂಚಿಸುತ್ತದೆ.

ಇದನ್ನು ಓದಿ: ದೆಹಲಿಯಲ್ಲಿ ಧಾರಾಕಾರ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ

ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ವಜೀರ್‌ಪುರ, ಬವಾನಾ, ರೋಹಿಣಿ, ಆರ್‌.ಕೆ.ಪುರ, ದ್ವಾರಕಾ ಸೇರಿದ್ದು, ಇವೆಲ್ಲವೂ ಅಪಾಯಕಾರಿ ಮಟ್ಟದ ಮಾಲಿನ್ಯವನ್ನು ದಾಖಲಿಸಿವೆ.

ಮಂಜು ಹಾಗೂ ಹೊಗೆಯ ಮಿಶ್ರಣದಿಂದಾಗಿ ವಾಯು ಗುಣಮಟ್ಟ ಸಂಪೂರ್ಣ ಹದಗೆಟ್ಟಿದ್ದು, ಬಲವಾದ ವಾಯುವ್ಯ ಗಾಳಿ ಅಥವಾ ಮಳೆ ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಗಾಳಿಯ ಗುಣಮಟ್ಟ ಹದಗೆಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಎಲ್‌ಪಿಜಿ ಸಿಲಿಂಡರ್‌ ಸಿಗುತ್ತದೆ, ಜನರಲ್ಲಿ ಭೀತಿ ಬೇಡ : ಕೇಂದ್ರ

ಹೊಸದಿಲ್ಲಿ : ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಉದಿಸಿದ ಆತಂಕದ ನಡುವೆ, ಕೇಂದ್ರ ಸರ್ಕಾರವು…

3 hours ago

IPL 2026 | ಮಾ.28ರಿಂದ ಪಂದ್ಯ ಆರಂಭ, ಬೆಂಗಳೂರಿನಲ್ಲಿ ಉದ್ಘಾಟನೆ, ಹೀಗಿದೆ ವೇಳಾಪಟ್ಟಿ

ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು…

4 hours ago

“ಸಂಶೋಧನೆಗೆ AI ನಿಂದಲ್ಲ, ಸ್ವಂತಿಕೆಯಿಂದ ಕೂಡಿರಲಿ” : ಕುಲಪತಿ ಶರಣಪ್ಪ ಹಲಸೆ ಸಲಹೆ

ಮೈಸೂರು : ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ…

4 hours ago

ಖಾತೆ ಮಾಡಿಕೊಡದ ಅಧಿಕಾರಿಗಳು : ರೈತನಿಂದ ವಿಷ ಸೇವನೆ ಯತ್ನ

ಸಾಲಿಗ್ರಾಮ : ತನ್ನ ಜಮೀನಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಕೊಡದೆ ಸಾಲಿಗ್ರಾಮ ನಾಡಕಚೇರಿ ಅವರು ಸತಾಯಿಸುತ್ತಿದ್ದಾರೆ ಎಂದು ಮನನೊಂದು ಸಾಲಿಗ್ರಾಮದ ನಾಡ…

4 hours ago

ಹಡುಗುಗಳ ಮೇಲೆ ದಾಳಿ : ಇಬ್ಬರು ಭಾರತೀಯರ ಸಾವು

ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…

5 hours ago

ಗುಂಡ್ಲುಪೇಟೆ | ಕತ್ತು ಕೂಯ್ದು ವ್ಯಕ್ತಿಯ ಬರ್ಬರ ಹತ್ಯೆ

ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…

5 hours ago