ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಶುಕ್ರವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯು ಸಂವಿಧಾನ ಮತ್ತು ಪ್ರಜಪ್ರಭುತ್ವವನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವ ಹಾಗೂ ಅವುಗಳನ್ನು ರಕ್ಷಿಸುವ ಹೋರಾಡಿತ್ತಿರುವ ನಡುವೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದಕ್ಕಿಂತಲೂ ವಾಸ್ತವದಲ್ಲಿ ಹೆಚ್ಚು ನಿಕಟ ಸ್ಪರ್ಧೆಯಾಗಿದೆ ಎಂದಿರುವ ಅವರು ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
2004ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್ಡಿಎಯ ಆಕ್ರಮಣಕಾರಿ ಇಂಡಿಯಾ ಶೈನಿಂಗ್ ಅಭಿಯಾನವನ್ನು ಉಲ್ಲೇಖಿಸಿದ ಅವರು, ಆ ಅಭಿಯಾನವನ್ನು ಯಾರು ಗೆದ್ದಿದ್ದಾರೆಂದು ನೆನಪಿಸಿಕೊಳ್ಳಿ ಎಂದು ಹೇಳಿದರು. ಅಂದಿನ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಇಂಡಿಯಾ ಮೈತ್ರಿಕೂಟವು ಸೈದ್ಧಾಂತಿಕ ಚುನಾವಣೆಯನ್ನು ಎದುರಿಸುತ್ತಿದೆ ಎಂದು ನಿರ್ಧರಿಸಿದೆ ಮತ್ತು ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇಂಡಿಯಾ ಒಕ್ಕೂಟ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ: ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಡಿ.ಕೆ. ಶಿವಕುಮಾರ್ ವಿಡಿಯೋ ಕರೆ…
ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ದೀಪಾವಳಿ ಹಬ್ಬದ ಪ್ರಯುಕ್ತ 2,600 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಿದೆ. ನ.8 ರಂದು…
ಬೆಂಗಳೂರು: ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ, ಸರ್ಕಾರದ ನಿರ್ಧಾರವನ್ನು ಡಿ.ಕೆ. ಶಿವಕುಮಾರ್…
ಮೈಸೂರು ನಗರದ, ಪ್ರತಿಷ್ಠಿತ ಔಷಧಿ ಸಂಸ್ಥೆಯಾದ ರಘುಲಾಲ್ ಅಂಡ್ ಕಂಪೆನಿಯ ಮಾಲೀಕರಾದ ರಾಘವನ್ ಅವರು ಮೈಸೂರು ನಗರವನ್ನು ಹಸಿರೀಕರಣ ಮಾಡಲು…
ಬೆಂಗಳೂರಿನಲ್ಲಿ ನೋಂದಣಿಯಾಗದೆ ನಡೆದಿರುವ ರೂ. ೫೦೦೦ ಕೋಟಿ ಕ್ರಿಪ್ಟ್ರೋ ಅಕ್ರಮ ವಹಿವಾಟು ದೇಶದ ಆರ್ಥಿಕ ಭದ್ರತೆಗೆ ಬಡಿದಿರುವ ಎಚ್ಚರಿಕೆ ಘಂಟೆಯಾಗಿದೆ.…
ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು.ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆಯೆಂದು ನೆನಸಿಕೊಂಡರೆ ಕನ್ನಡ ನಿಜವಾಗಿಯೂ ಬದುಕಿ ಬಾಳುವ ಭಾಷೆಯಾಗಿ ಉಳಿಯುತ್ತದೆಯೇ ಎಂದು…