ಮುಂಬೈ: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು(74) ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಬಗ್ಗೆ ಸೋಮವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಿನಿಮಾ ಕ್ಷೇತ್ರಕ್ಕೆ ಮಿಥುನ್ ಅವರು ನೀಡಿರುವ ಕೊಡುಗೆ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವರು ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಬರೆದುಕೊಂಡಿದ್ದಾರೆ.
ಈ ಪ್ರಶಸ್ತಿಯನ್ನು ಅ.8 ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಿಥುನ್ ಚಕ್ರವರ್ತಿಗೆ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
1976ರ ತಮ್ಮ ಚೊಚ್ಚಲ ಸಿನಿಮಾ ಮೃಗಯಾ ಚಿತ್ರದ ಮೂಲಕ ಸಿನಿಮಾ ರಂಗ ಬಂದ ಮಿಥುನ್, ಈ ಚಿತ್ರದ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.
ಕಮಾಂಡೋ, ಕಸಂ ಪೈಡಾ ಕರ್ನೆ ವಾಲೆ ಕಿ, ಸುರಕ್ಷಾ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.
ಮಂಜು ಕೋಟೆ ಅರಣ್ಯದೊಳಗಿನ ಸಫಾರಿಗೆ ನಿರ್ಬಂಧ ಹೇರಿದ ಬಳಿಕ ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್‌ನವರ ಕಸರತ್ತು ಎಚ್.ಡಿ.ಕೋಟೆ: ಅರಣ್ಯದಲ್ಲಿ ಈಗ ಸಫಾರಿ…
ಗಿರೀಶ್ ಹುಣಸೂರು ೨೦೨೬ರ ಜ.೩ರಿಂದ ಮಾ.೩೧ರವರೆಗೆ ನೋಂದಣಿ ಪ್ರಕ್ರಿಯೆ ಮೈಸೂರು: ಸಹಕಾರ ಸಂಘಗಳ ಸದಸ್ಯರ ಪಾಲಿನ ಸಂಜೀವಿನಿಯಂತಿರುವ ‘ಯಶಸ್ವಿನಿ’ ಆರೋಗ್ಯ…
ನೈಸರ್ಗಿಕ ಕೃಷಿ ರೂವಾರಿ ಸುಭಾಷ್ ಪಾಳೇಕರ್ ಸ್ಪಷ್ಟನುಡಿ ಸಂದರ್ಶನ: ರಶ್ಮಿ ಕೋಟಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು…
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…