ಮೈಸೂರು : ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಗಣೇಶನ ಮೂರ್ತಿಯೊಂದು ಬಾಲಿವುಡ್ ನಟಿ ಆಲಿಯಾ ಭಟ್ ಮನೆಗೆ ಸೇರಲಿದೆ.
ಹೌದು… ಗಣೇಶನ ಪರಮ ಭಕ್ತೆಯಾದ ಆಲಿಯಾ ಭಟ್ ತಮ್ಮ ಮುಂಬೈ ಮನೆಗೆ ಗಣೇಶನ ಅದ್ಭುತ ವಿಗ್ರಹವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಇದನ್ನು ಓದಿ: ಜಾಹೀರಾತು ಪೋಸ್ಟ್ನೊಂದಿಗೆ ಮಗುವಿನ ಫೋಟೋ ಹಂಚಿಕೊಂಡ್ರಾ ಆಲಿಯಾ ಭಟ್ ?
ಅರುಣ್ ಯೋಗಿರಾಜ್ ಕೆತ್ತಿದ ನಾಲ್ಕು ಅಡಿ ಎತ್ತರದ ಗಣೇಶ ವಿಗ್ರಹವನ್ನು ಸಾಂಪ್ರದಾಯಿಕ ಹೊಯ್ಸಳ ಮತ್ತು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ. ಪೀಠವು ಮೂರು ಅಡಿ ಎತ್ತರದಲ್ಲಿದೆ. ಈ ವಿಗ್ರಹ ಕೆತ್ತಲು ಸುಮಾರು ಆರು ತಿಂಗಳು ಸಮಯಾವಕಾಶ ತೆಗೆದುಕೊಂಡಿತು, ಯೋಗಿರಾಜ್ ಅವರು ಆಲಿಯಾ ಅವರ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುವ ಒಂದು ಮೇರುಕೃತಿಯನ್ನು ರಚಿಸಿದ್ದಾರೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿರುವ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತಿಸಬೇಕೆಂದು ಅಲಿಯಾ ಭಟ್ ಕುಟುಂಬ ನಿರ್ಧರಿಸಿತ್ತು. ಅಂತೆಯೇ ಅರುಣ್ ಯೋಗಿರಾಜ್ ಅವರನ್ನು ಮುಂಬೈಗೆ ಕರೆಸಿಕೊಂಡು ಮಾಹಿತಿ ನೀಡಿದ್ದರು. ಅದರಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಸ್ಟಾರ್ ದಂಪತಿಯ ಮನೆಯ ವಾತಾವರಣ ನೋಡಿ, ಅಲ್ಲಿಗೆ ಸೂಕ್ತ ಎನಿಸುವ ಗಣಪತಿ ವಿಗ್ರಹ ಕೆತ್ತಿದ್ದಾರೆ. ಆಲಿಯಾ ಭಟ್ ಅವರ ಕುಟುಂಬವು ಸೆಪ್ಟೆಂಬರ್ 17 ರಂದು ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಿತು, ಇಂದು ವಿಗ್ರಹವವನ್ನು ಮುಂಬೈನಲ್ಲಿರುವ ಆಲಿಯಾ ಹೊಸ ಮನೆಗೆ ಸಾಗಿಸಲಾಗುತ್ತಿದೆ.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…