ನ್ಯೂಯಾರ್ಕ್: ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಉತ್ಪಾದಿಸುವ ಬೇಬಿ ಪೌಡರ್ ಮಾರಾಟವನ್ನು ಜಾಗತಿಕವಾಗಿ ೨೦೨೩ರಿಂದ ನಿಲ್ಲಿಸಲು ನಿರ್ಧರಿಸಿದೆ. ಗ್ರಾಹಕರಿಂದ ಸುಮಾರು ಸಾವಿರಾರು ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ತಳೆದಿದೆ ಎಂದು ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ೨೦೨೦ರಲ್ಲಿ ಉತ್ತರ ಅಮೆರಿಕದಲ್ಲಿ ಬೇಬಿ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಇದೀಗ ಇಡೀ ವಿಶ್ವದಾದ್ಯಂತ ಉತ್ಪನ್ನ ಮಾರಾಟ ಸ್ಥಗಿತಗೊಳಿಸುವುದಾಗಿ ಕಂಪನಿ ತಿಳಿಸಿದೆ. ಬೇಬಿ ಪೌಡರ್ ಕ್ಯಾನ್ಸರ್‌ಕಾರಕ ಅಂಶಗಳನ್ನು ಹೊಂದಿದೆ ಎಂಬ ಆರೋಪದಡಿ ಇದುವರೆಗೆ ೪೦ ಸಾವಿರಕ್ಕೂ ಅಧಿಕ ಗ್ರಾಹಕರು ದೂರು ಸಲ್ಲಿಸಿ ಕಾನೂನು ಸಂಘರ್ಷ ಹೂಡಿದ್ದರು.
ಆದಾಗ್ಯೂ ಕಂಪನಿಯು ‘ಟಾಲ್ಕ್ ಆಧಾರಿತ ಜಾನ್ಸನ್ಸ್ ಬೇಬಿ ಪೌಡರ್ ಸುರಕ್ಷಿತವಾಗಿದೆ, ಕಲ್ನಾರು ಹೊಂದಿರುವುದಿಲ್ಲ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂದು ದೃಢಪಡಿಸುವ ವಿಶ್ವದ ವೈದ್ಯಕೀಯ ತಜ್ಞರು ದಶಕಗಳ ಕಾಲ ನಡೆಸಿದ ಸ್ವತಂತ್ರ ವೈಜ್ಞಾನಿಕ ವಿಶ್ಲೇಷಣೆಯ ಹಿಂದೆ ನಾವು ದೃಢವಾಗಿ ನಿಂತಿದ್ದೇವೆ’ ಎಂದು ಹೇಳಿಕೊಂಡಿತ್ತು. ಕಂಪನಿಯ ವಿರುದ್ಧ ಹೋರಾಟ ನಡೆಸುತ್ತಿರುವ ವುಮೆನ್ಸ್ ವಾಯ್ಸ್ ಫಾರ್ ದಿ ಅರ್ಥ್ ಸಂಘಟನೆಯ ಕಾನೂನು ಸಲಹೆಗಾರ್ತಿ ಅಲೆಕ್ಸಾ ಸ್ಕ್ರಾಂಟನ್ ‘ಇದು ಯಾವುದೇ ರೀತಿಯ ಪರಿಹಾರವಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…