ನಮ್ಮ ಮೈಸೂರ ದಸರಾ 2025

ಯುವ ಸಂಭ್ರಮ | ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿದ ನೃತ್ಯ ರೂಪಕ

ಮೈಸೂರು : ಯುವ ಸಮೂಹ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವ ಸಂಗತಿ ಯುವ ಸಂಭ್ರಮದಲ್ಲಿ ನೃತ್ಯದ ಸ್ವರೂಪ ಪಡೆಯಿತು.

ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಯುವ ಸಂಭ್ರಮದ ೭ನೇ ದಿನವಾದ ಮಂಗಳವಾರ ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಕುಟುಂಬಕ್ಕೆ ಶಾಪವಾಗಿ, ಬದುಕಿಗೆ ಮುಳುವಾಗುವ ಸಂಗತಿಯನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು. ನೆರೆದಿದ್ದ ಯುವ ಸಮೂಹ ಎದ್ದು ನಿಂತು ಚಪ್ಪಾಳೆ ತಟ್ಟಿ ನೃತ್ಯದ ಸಂದೇಶವನ್ನು ಸ್ವೀಕರಿಸಿದರು.

ಎಸ್‌ಎಸ್‌ಎಲ್‌ಸಿ ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕೆ ನಗರದ ಕಾಲೇಜಿಗೆ ಸೇರುವ ಯುವಕನೊಬ್ಬ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ದುಶ್ಚಟಕ್ಕೆ ಬಿದ್ದು ತನ್ನ ತಾಯಿಯನ್ನು ಕಳೆದುಕೊಂಡು ರೋಧಿಸುವ ಘಟನೆಯನ್ನು ನೃತ್ಯದ ಮೂಲಕ ಸೊಗಸಾಗಿ ವೇದಿಕೆ ಮೇಲೆ ತಂದು ನೆರೆದಿದ್ದವರ ಮನ ಗೆದ್ದರು. ಇದರೊಂದಿಗೆ ಕನ್ನಡ ಪ್ರೇಮ, ನಾಡಿನ ಸಂಸ್ಕೃತಿ, ಜಾನಪದ ನೃತ್ಯದ ಸೊಬಗು, ಸಂವಿಧಾನದ ಮಹತ್ವ, ರೈತರ ಕೆಚ್ಚೆದೆಯ ಸೇವೆ, ಯೋಧರ ಬಲಿದಾನ, ರಾಷ್ಟ್ರೀಯ ಭಾವೈಕ್ಯತೆಗೆ ಯುವಸಂಭ್ರಮದ ವೇದಿಕೆ ಸಾಕ್ಷಿಯಾಯಿತು. ಕರುನಾಡಿನ ದಸರಾ ವೈಭವದೊಂದಿಗೆ ಜೈ ಜವಾನ್ ಜೈ ಕಿಸಾನ್, ಜೈ ಭೀಮ್ ಘೋಷಣೆಗಳು ಮೊಳಗಿದವು.

ಕಳೆದರೆಡು ದಿನಗಳಿಂದ ಯುವ ಸಂಭ್ರಮ ವೇದಿಕೆ ಸಂಜೆ ೬ ಗಂಟೆಯೊಳಗೆ ಭರ್ತಿಯಾಗುತ್ತಿದ್ದು, ಕಿಕ್ಕಿರಿದು ನೆರೆದಿದ್ದ ಯುವ ಸಮೂಹ ಕುಣಿದು ಕುಪ್ಪಳಿಸಿ ಜೋಷ್ ನೀಡಿದರು. ಸ್ವಚ್ಚತೆಯಲ್ಲಿ ಮೈಸೂರು ಪ್ರಶಸ್ತಿಗೆ ಭಾಜನವಾಗಲು ಕಾರಣೀಭೂತರಾದ ಸ್ವಚ್ಚತಾ ಕಾರ್ಮಿಕರನ್ನು ಸನ್ಮಾನಿಸಿ, ಅವರ ಶ್ರಮವನ್ನು ಯುವ ಸಮೂಹದ ಎದೆಗೆ ತಲುಪಿಸಿದರು.

ದಟ್ಟಗಳ್ಳಿಯ ಶ್ರೀ ಲಕ್ಷ್ಮಿಹಯಗ್ರೀವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪೌರಾಣಿಕತೆಯ ಪ್ರಸಂಗವನ್ನು ನೃತ್ಯದ ಮೂಲಕ ಊಣಬಡಿಸಿದರು. ನಂಜನಗೂಡಿನ ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ದೇವ ಶ್ರೀ ಗಣೇಶ’ ಹಾಡಿನಲ್ಲಿ ಗಣಪತಿ ಹಬ್ಬದ ಸಂಭ್ರಮ ಸಾರಿದರು. ಹೊಳೆ ನರಸೀಪುರದ ಸರ್ಕಾರಿ ಪಾಲಿಟೆಕ್ನಿಕ್ ತಂಡ ಕನ್ನಡ ನಟರನ್ನು ಪರಿಚಯಿಸುವ ಸಿನಿಮಾ ಆಧಾರಿತ ನೃತ್ಯ ಪ್ರದರ್ಶಿಸಿದರು.

ಗಂಗೋತ್ರಿಯ ಜ್ಞಾನ ದೀಪ ಪ್ರಥಮ ದರ್ಜೆ ಕಾಲೇಜಿನ ತಂಡ ಹಿರಣ್ಯ ಕಶ್ಯಪನ ಜೀವನ ಚರಿತ್ರೆಯನ್ನು ಭಕ್ತ ಪ್ರಹ್ಲಾದ ಸಿನಿಮಾದ ತುಣುಕು ಮತ್ತು ಸಂಭಾಷಣೆಗಳನ್ನು ಒಳಗೊಂಡ ನೃತ್ಯ ರೂಪಕದ ಮೂಲಕ ಹರಿ ನಾರಾಯಣ ದೇವರ ಭಕ್ತಿ ಸಿಂಚನ ಗೈದರು.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ನಾಯಕ ನೀನು ಭೀಮ ರಾವ್’ ಹಾಡಿನ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಸಂವಿಧಾನದ ಮಹತ್ವವನ್ನು ಸಾರಿದರು. ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಜಾನಪದ ನೃತ್ಯ ಸೊಬಗನ್ನು ಉಣಬಡಿಸಿದರು.

ಆಂದೋಲನ ಡೆಸ್ಕ್

Recent Posts

ಜಾತಿ ಜತೆಗೆ ಕನಸು ಕಾಣುವ ಅಸಮಾನತೆಯೂ ಸೃಷ್ಟಿ : ನಾಗಭೂಷಣಸ್ವಾಮಿ ವಿಷಾದ

ಮೈಸೂರು : ಸುಧಾರಣೆ ನೆಪದಲ್ಲಿ ಕ್ರೌರ್ಯ ನಡೆಯುತ್ತಿದೆ. ಜೈಲಲ್ಲಿರುವ ಕೈದಿಗಳಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಆರ್ಥಿಕ, ಅಧಿಕಾರ ಮತ್ತು…

4 mins ago

ನೆತನ್ಯಾಹು ಬದುಕಿದ್ದಾರೆ, ಹತ್ಯೆ ವದಂತಿ ಸುಳ್ಳು ; ಇಸ್ರೇಲ್‌

ಜೆರುಸಲೆಮ್‌ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು…

24 mins ago

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…

1 hour ago

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

1 hour ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

2 hours ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

2 hours ago