ನಮ್ಮ ಮೈಸೂರ ದಸರಾ 2025

Mysuru Dasara | ದಸರಾಗೆ ಮತ್ತಷ್ಟು ಮೆರಗು ತಂದ ಏರ್‌ ಶೋ ; ಸಾಹಸಮಯ ಪ್ರದರ್ಶನ

ಮೈಸೂರು : ಬಾನಂಗಳದಲ್ಲಿ ಹಾರುವ ಲೋಹದ ಹಕ್ಕಿಗಳ ಸಾಹಸಮಯ ಪ್ರದರ್ಶನ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ.

ಗುರುವಾರ ಬನ್ನಿಮಂಟಪ(ಕವಾಯತು) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಮಾನಿಕ ಪ್ರದರ್ಶನದ ಪೂರ್ವಭ್ಯಾಸದ ರೋಮನಾಚರಣಕಾರಿ ಪ್ರದರ್ಶನವನ್ನು ಕಂಡು ಮೈಸೂರಿನ ಜನತೆ ಕುಣಿದು ಕುಪ್ಪಳಿಸಿದರು.

ಸಾರಂಗ ಕೇಂದ್ರ ವೈಮಾನಿಕ ಪ್ರದರ್ಶನದ 5 ಹೆಲಿಕ್ಯಾಪ್ಟರ್ ಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಮಿಂಚಿನ ರೀತಿ ಶರವೇಗದಲ್ಲಿ ಹಾರುವ ಪ್ರದರ್ಶನದ ಚಿತ್ತಾರವನ್ನು ಜನ ಕಣ್ತುಂಬಿಕೊಂಡರು.

ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪಾರಂಪರಿಕ ಸೈಕಲ್ ಸವಾರಿ

ನೀಲಿ ಗಗನದಲ್ಲಿ ಓಲಾಡಿ- ತೇಲಾಡಿದ ಲೋಹದ ಹಕ್ಕಿಗಳು ಬಣ್ಣ ಬಣ್ಣದ ಹೊಗೆಯ ಮೂಲಕ ಹೃದಯ ಬಿಳಿ ಗೆರೆಗಳನ್ನು ಬರೆಯುವುದರ ಮೂಲಕ ರೋಮಾಂಚನಕಾರಿ ದೃಶ್ಯಕ್ಕೆ ಪಾತ್ರವಾದವು.

ಆಗಸದಲ್ಲಿ ಮೈನವಿರೇಳುವ ಮೈಮಾನಿಕ ಪ್ರದರ್ಶನವನ್ನು ಕಂಡು ಪ್ರೇಕ್ಷಕರು ಪುಳಕಿತಗೊಂಡರು. ಅನೇಕ ರೋಮಾಂಚನಕಾರಿ ಅನುಭವಕ್ಕೆ ಇಂದು ನಡೆದ ವೈಮಾನಿಕ ಪ್ರದರ್ಶನ ಸಾಕ್ಷಿಯಾದವು. ಬಾನಂಗಳಕ್ಕೆ ಹೇರಿ ನೆಲಕ್ಕೆ ರಪ್ಪನೆ ಬೀಳುವ ರೀತಿಯಲ್ಲಿ ಪ್ರದರ್ಶನ ನೀಡಿ ನೋಡುಗರನ್ನು ಅಚ್ಚರಿ ಗೊಳಿಸಿದವು.

ಪೂರ್ವಬ್ಯಾಸ ಪ್ರದರ್ಶನಕ್ಕೆ ಇಡೀ ಕವಾಯತು ಮೈದಾನ ಭರ್ತಿ ಆಗಿದ್ದು, ಸೆಪ್ಟೆಂಬರ್ 27 ರಂದು ಸಂಜೆ 5 ಗಂಟೆಗೆ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಮೈಸೂರಿನ ಜನತೆ ಕಾಯುತ್ತಿದ್ದಾರೆ, ಒಟ್ಟಾರೆ ಈ ಬಾರಿಯ ವೈಮಾನಿಕ ಪ್ರದರ್ಶನ ದಸರಾ ಮಹೋತ್ಸವಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ.

ಆಂದೋಲನ ಡೆಸ್ಕ್

Recent Posts

ರಾಜ್ಯಪಾಲರು ಮಾಡಿದ 3 ವಾಕ್ಯಗಳ ಭಾಷಣದ ಅಂಶಗಳಿವು.!

ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್‌ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…

17 mins ago

ದಾವಣಗೆರೆ| ಕಿರು ಮೃಗಾಲಯದಲ್ಲಿ ನಾಲ್ಕು ಜಿಂಕೆಗಳ ಸಾವಿಗೆ ಕಾರಣ ಬಹಿರಂಗ

ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…

27 mins ago

ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…

1 hour ago

ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…

2 hours ago

ಭಾಷಣ ಓದದೇ ತೆರಳಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌: ಕಾಂಗ್ರೆಸ್‌ ನಾಯಕರಿಂದ ಹೈಡ್ರಾಮಾ

ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕೇವಲ ಎರಡನೇ ಮಾತಿನಲ್ಲಿ…

2 hours ago

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…

3 hours ago