ಮೈಸೂರು : ಕೆಂಪು ಮತ್ತು ಬಿಳಿ ಬಣ್ಣದ ಹೊಗೆಯನ್ನಾರಿಸುವುದರ ಜೊತೆಗೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ ನಾ ಮುಂದೆ, ನೀ ನನ್ನ ಹಿಂದೆ ಎಂಬಂತೆ ಬಾನಂಗಳದಲ್ಲಿ ಲೋಹದ ಹಕ್ಕಿಗಳು ವೈಮಾನಿಕ ಹಾರಾಟದ ಮೂಲಕ ತನ್ನ ಯಶಸ್ಸು ಮತ್ತು ಧೈರ್ಯವನ್ನು ಪ್ರದರ್ಶಿಸುತ್ತಿದ್ದರೆ, ಇತ್ತ ಮೈಸೂರಿನ ಜನರು ಶಿಳ್ಳೆ, ಚಪ್ಪಾಳೆ ಹಾಗೂ ಜೋರಾದ ಚೀತ್ಕಾರದೊಂದಿಗೆ ಸಂಭ್ರಮಿಸಿದರು.
ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆ(ಐ.ಎ.ಎಫ್) ಸಾರಂಗ ತಂಡದಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ನವಿಲಿನ ಚಿತ್ತಾರವಿರುವ ಲೋಹದ ಹಕ್ಕಿಗಳು ನೆರೆದಿದ್ದವರು ಲೋಹದ ಹಕ್ಕಿಯ ಚಮತ್ಕಾರಿ ಪ್ರದರ್ಶನಕ್ಕೆ ಮಾರುಹೋದರು.
ಇದನ್ನೂ ಓದಿ:-ಶ್ರೀರಂಗಪಟ್ಟಣ | ಎಚ್‌ಐವಿ,ಏಡ್ಸ್ ಜಾಗೃತಿಗೆ ರೆಡ್ ರನ್ ಮ್ಯಾರಥಾನ್
ಸುಮಾರು 22 ರಿಂದ 25 ನಿಮಿಷಗಳ ಕಾಲ ಶರವೇಗದಲ್ಲಿ ನಡೆದಂತಹ ವೈಮಾನಿಕ ಹಾರಾಟದಲ್ಲಿ ಡಾಲ್ಫೀನ್ ಸ್ಲೀಪ್, ಸಾರಂಗ್ ಸ್ಪ್ಲೀಟ್, ಹಾರ್ಟ್ ಫಾರ್ಮೇಷನ್, ಡಿವೈನ್ ಗ್ಲಾಸ್, ಡಬಲ್ ಏರೋ ಕ್ರಾಸ್ ಸೇರಿದಂತೆ ಒಟ್ಟು 16 ರೀತಿಯ ಮಾದರಿಗಳನ್ನು ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಇದಕ್ಕಾಗಿ ಒಟ್ಟು 70 ಸಿಬ್ಬಂದಿಗಳು ಶ್ರಮಿಸಿದ್ದು, ಐದು ಸಾರಂಗಗಳು ಅತ್ಯದ್ಭುತವಾದ ಪ್ರದರ್ಶನ ನೀಡುವ ಮೂಲಕ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿಯ ಮನಸ್ಸನ್ನು ಸೂರೆ ಮಾಡಿದರು.
ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖಾ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೈಸೂರು : ತಿಬ್ಬಾಸ್ ಗ್ರೂಪ್ ಸಹಯೋಗದೊಂದಿಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಡಿ.೨೮ರಂದು ‘ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ’ ಶೀರ್ಷಿಕೆಯಡಿ…
ಮೈಸೂರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ೬೬/೧೧ ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ…
ಬೆಳಗಾವಿ : ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ…
ಬೆಳಗಾವಿ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸುವರ್ಣ…
ಡಿಸಿ ಶಿಲ್ಪಾನಾಗ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ ಹನೂರು : ಅಂತೂ ಇಂತೂ…
ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ…