ನಮ್ಮ ಮೈಸೂರ ದಸರಾ 2025

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಸಂಭ್ರಮ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಕೃಷಿ ಹಾಗೂ ರೈತರನ್ನ ಉತ್ತೇಜಿಸಲು ರೈತ ದಸರಾ‌ ಆಯೋಜನೆ ಮಾಡಲಾಗಿತ್ತು.

ಮೈಸೂರಿನ ಅರಮನೆ ಬಳಿಯಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ನಂದಿ ಧ್ವಜ ಪೂಜೆ ನೆರವೇರಿಸಿ ಬಳಿಕ ದೀಪ ಬೆಳಗುವ ಮೂಲಕ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ

ರೈತ ದಸರಾದಲ್ಲಿ ಹಳ್ಳಿಕಾರ್ ಜೋಡೆತ್ತುಗಳು,‌ ಎತ್ತಿನಗಾಡಿ, ಪುಂಗನೂರು ಹಸು, ಬಂಡೂರು ತಳಿಯ ಕುರಿಗಳು ಕಣ್ಮನ ಸೆಳೆದವು. ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ, ತಮಟೆ, ಕಂಸಾಳೆ ಸೇರಿದಂತೆ ಹಲವು ಕಲಾತಂಡಗಳು ರೈತ ದಸರಾ ಮೆರವಣಿಗೆಗೆ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಹರೀಶ್ ಗೌಡ, ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಆಂದೋಲನ ಡೆಸ್ಕ್

Recent Posts

ಯುದ್ಧ ಎಲ್ಲಿ ನಡೆದರೂ ಸಂಕಷ್ಟ ಬರುವುದು ಅಡುಗೆ ಮನೆಯೊಳಗೆ

ಶೇಷಾದ್ರಿ ಗಂಜೂರು: ಮಾಧ್ಯಮ ತಜ್ಞರು ಟೆಹರಾನ್‌: ಮಧ್ಯಪ್ರಾಚ್ಯದ ಸಂಘರ್ಷಗಳ ಸಮಯದಲ್ಲಿ ಜಾಗತಿಕ ತೈಲ ಬೆಲೆ ಗಗನಕ್ಕೇರುವುದು, ಇದರಿಂದ ಸಾರಿಗೆ ವೆಚ್ಚ…

20 mins ago

ಸಫಾರಿ ವೇಳೆ ಮೊಬೈಲ್ ನಿಷೇಧ: ವನ್ಯಜೀವಿ ಛಾಯಾಗ್ರಾಹಕರಿಂದ ಸ್ವಾಗತ: ಕೆಲ ಸಫಾರಿ ಪ್ರಿಯರಿಗೆ ಬೇಸರ

ಬಂಡೀಪುರ, ನಾಗರಹೊಳೆ: ನಾಗರಹೊಳೆ ಬಂಡೀಪುರದಲ್ಲಿ ಸಫಾರಿ ಪುನರಾರಂಭವಾದ ಸಂತೋಷ ಒಂದೆಡೆಯಾದರೆ, ಸಫಾರಿ ವೇಳೆ ಮೊಬೈಲ್ ಬಳಕೆಗೆ ನಿಷೇಧವೇರಿರುವುದು ಕೆಲ ಸಫಾರಿ…

30 mins ago

ಮಂಡ್ಯ: ಕನ್ನಡ ಶಾಲೆಗಳ ಉಳಿವಿಗೆ ಹೋರಾಟ: ವಾಟಾಳ್‌ ನಾಗರಾಜ್‌ ಬಂಧನ

ಮಂಡ್ಯ: ಜಿಲ್ಲೆಯ 1463 ಕನ್ನಡ ಶಾಲೆಗಳನ್ನು ಉಳಿಸಿ ಹಾಗೂ ಉಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ ಮಂಡ್ಯ ನಗರದ ಸಂಜಯ…

57 mins ago

ಸಫಾರಿ ಸ್ಥಗಿತ, ಪುನರಾರಂಭ ಸಮರ್ಥಿಸಿಕೊಂಡ ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಕಳೆದ ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತುಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ,…

1 hour ago

ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ: ಅದ್ಧೂರಿಯಾಗಿ ಜರುಗಿದ ಅಗ್ನಿ ಕುಂಡೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ…

2 hours ago

ಕೊಡಗು| 13 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಮೂರನೇ ಬಲಿ: ಕಾಫಿ ಬೆಳೆಗಾರ ದಾರುಣ ಸಾವು

ಕೊಡಗು: ಕೊಡಗಿನಲ್ಲಿ ಕಾಡಾನೆ - ಮಾನವ ಸಂಘರ್ಷ ಅವ್ಯಾಹತವಾಗಿ ಮುಂದುವರೆದಿದ್ದು ಕಾಫಿ ಬೆಳೆಗಾರರೊಬ್ಬರು ಹತರಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಹಳೇ ಸಿದ್ದಾಪುರದ…

2 hours ago